ETV Bharat / state

ಚುನಾವಣಾ ನೀತಿ ಸಂಹಿತೆ.. ರಾಜ್ಯಸಭಾ ಸದಸ್ಯ ಜಗ್ಗೇಶ್ ಸಿನಿಮಾ ಪೋಸ್ಟರ್​ಗೆ ಪೇಪರ್ ಅಂಟಿಸಿದ ಅಧಿಕಾರಿಗಳು

author img

By

Published : May 4, 2023, 8:40 PM IST

ರಾಜ್ಯಸಭಾ ಸದಸ್ಯ ನಟ‌ ಜಗ್ಗೇಶ್ ಸಿನಿಮಾ ಪೋಸ್ಟರ್​ಗೆ ಚುನಾವಣಾ ಅಧಿಕಾರಿಗಳು ಬಿಳಿ ಹಾಳೆಗಳನ್ನು ಅಂಟಿಸಿದ್ದಾರೆ.

ನಟ‌ ಜಗ್ಗೇಶ್ ಸಿನಿಮಾ ಪೋಸ್ಟರ್​ಗೆ ಪೇಪರ್ ಅಂಟಿಸಿದ ಅಧಿಕಾರಿಗಳು
ನಟ‌ ಜಗ್ಗೇಶ್ ಸಿನಿಮಾ ಪೋಸ್ಟರ್​ಗೆ ಪೇಪರ್ ಅಂಟಿಸಿದ ಅಧಿಕಾರಿಗಳು

ದಾವಣಗೆರೆ : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಮತದಾರರ ಮೇಲೆ ಪ್ರಭಾವ ಬೀರುವುದಾಗಿ ತಿಳಿಸಿ ಸಿ-ವಿಜಿಲ್​ನಲ್ಲಿ ದಾಖಲಾದ ದೂರಿಗೆ ಸಂಬಂಧಿಸಿದಂತೆ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರ ಹೊಸ ಸಿನಿಮಾ ಪೋಸ್ಟರ್​ಗೆ ಅಧಿಕಾರಿಗಳು ಮುಖಕ್ಕೆ ಬಿಳಿ ಹಾಳೆ ಅಂಟಿಸಿದ್ದಾರೆ.

ಹೊಂಬಾಳೆ ಫಿಲ್ಮ್ಸ್​ ಅವರ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ರಾಘವೇಂದ್ರ ಸ್ಟೋರ್ ಸಿನಿಮಾ ಬಿಡುಗಡೆಗೊಂಡು ಪ್ರದರ್ಶನಗೊಳ್ಳುತ್ತಿದೆ. ಈ ಸಿನಿಮಾಗೆ ಚುನಾವಣಾ ನೀತಿ ಸಂಹಿತೆಯ ಬಿಸಿ ಮುಟ್ಟಿದೆ. ಇಂದು ದಾವಣಗೆರೆ ನಗರದ ಗೀತಾಂಜಲಿ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿರುವ ನಟ ಜಗ್ಗೇಶ್ ಅಭಿನಯದ ರಾಘವೇಂದ್ರ ಸ್ಟೋರ್ ಚಿತ್ರವನ್ನು ಸ್ಥಗಿತಗೊಳಿಸುವಂತೆ ಹಾಗೂ ಪೋಸ್ಟರ್‌ಗಳನ್ನು ಮುಚ್ಚುವಂತೆ ಕಾಂಗ್ರೆಸ್ ಪಕ್ಷದಿಂದ ಸಿ-ವಿಜಿಲ್ ನಲ್ಲಿ ದೂರು ಸಲ್ಲಿಸಲಾಗಿತ್ತು. ಈ ದೂರಿನನ್ವಯ ಬಿಜೆಪಿಯಿಂದ ಜಗ್ಗೇಶ್ ರಾಜ್ಯಸಭಾ ಸದಸ್ಯರಾಗಿರುವುದರಿಂದ ಅವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದ ಕಾರಣ ಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸದೆ ಪೋಸ್ಟರ್​ಗಳಲ್ಲಿ ಅವರ ಮುಖವನ್ನು ಮರೆಮಾಚಲಾಗಿದೆ.

ಚುನಾವಣಾಧಿಕಾರಿ ಸುತ್ತೋಲೆ
ಚುನಾವಣಾಧಿಕಾರಿ ಸುತ್ತೋಲೆ

ಗೀತಾಂಜಲಿ ಚಿತ್ರಮಂದಿರದಲ್ಲಿ ಪರಿಶೀಲನೆ ನಡೆಸಿದ ಚುನಾವಣಾಧಿಕಾರಿಗಳು: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ದಾವಣಗೆರೆ ನಗರದ ಗೀತಾಂಜಲಿ ಚಿತ್ರಮಂದಿರಕ್ಕೆ ಚುನಾವಣಾ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ರು. ಸಿನಿಮಾ ಮಂದಿರದ ಬಳಿಯ ಕಟೌಟ್ ಮತದಾರರ ಮೇಲೆ ಪ್ರಭಾವ ಬೀರುವುದಾಗಿ ತಿಳಿಸಿ ಸಿ-ವಿಜಿಲ್​ನಲ್ಲಿ ದಾಖಲಾದ ದೂರಿಗೆ ಸಂಬಂಧಿಸಿದಂತೆ ಚಿತ್ರಮಂದಿರಕ್ಕೆ ತೆರಳಿ ಅಧಿಕಾರಿಗಳು ಚಿತ್ರ ಪ್ರದರ್ಶನ ಮಾಡಲು ಯಾವುದೇ ನಿರ್ಬಂಧವನ್ನು ಮಾಡಿಲ್ಲ‌.

ಇದನ್ನೂ ಓದಿ : ಮಾಜಿ ಸಚಿವ ವಿನಯ್ ಕುಲಕರ್ಣಿ ಆಪ್ತನ ನಿವಾಸದ ಮೇಲೆ ಐಟಿ ದಾಳಿ

ಕಟೌಟ್ ಮುಚ್ಚಿದ ಎಫ್​ಎಸ್​ಟಿ ತಂಡ : ಎಫ್​ಎಸ್​ಟಿ ತಂಡ ಭೇಟಿ ನೀಡಿ ಚಿತ್ರಮಂದಿರದ ಹೊರಭಾಗದಲ್ಲಿದ್ದ ಕಟೌಟ್‌ಗಳ ಮುಖಮರೆ ಮಾಚಿದ್ರು. ಚಿತ್ರ ಪ್ರದರ್ಶನ ಮಾಡಲು ಯಾವುದೇ ನಿರ್ಬಂಧ ವಿಧಿಸಿಲ್ಲ ಹಾಗೂ ಮೌಖಿಕವಾಗಿಯೂ ಕೂಡ ಪ್ರದರ್ಶನದ ಕುರಿತು ಮಾತನಾಡಿಲ್ಲ ಎಂದು ಎಸ್ಎಸ್​ಟಿ ಅಧಿಕಾರಿಗಳು ವರದಿ ನೀಡಿದ್ದಾರೆ. ದಾವಣಗೆರೆ ಗೀತಾಂಜಲಿ ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನ ಮಾಡಲು ಯಾವುದೇ ನಿರ್ಬಂಧವನ್ನು ಚುನಾವಣಾಧಿಕಾರಿ ಕಚೇರಿಯಿಂದ ವಿಧಿಸಿಲ್ಲ ಎಂದು ಈ ಮೂಲಕ ಜಿಲ್ಲಾಧಿಕಾರಿ ಶಿವಾನಂದ ಕಾಪಶಿಯವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಇದನ್ನೂ ಓದಿ: ಸಚಿವ ಡಾ ಸುಧಾಕರ್ ಪರ ಹಾಸ್ಯ ನಟ ಬ್ರಹ್ಮಾನಂದಂ, ಪ್ರೇಮ್​, ಅನು ಪ್ರಭಾಕರ್ ಮತಬೇಟೆ ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.