ETV Bharat / state

ಗಾಂಧಿ ಭವನ ಉದ್ಘಾಟನೆಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿಗಿಲ್ಲ ಆಹ್ವಾನ: ಜಿಲ್ಲೆಯಲ್ಲಿ ಅಸಮಾಧಾನ

author img

By

Published : Sep 2, 2021, 11:53 AM IST

Updated : Sep 2, 2021, 12:19 PM IST

ದಾವಣಗೆರೆಯ ಹೈಟೆಕ್ ಗಾಂಧಿ ಭವನ ಇಂದು ಲೋಕಾರ್ಪಣೆಯಾಗುತ್ತಿದೆ. ಆದರೆ, ಹಿರಿಯ ಸ್ವಾತಂತ್ರ ಹೋರಾಟಗಾರರನ್ನು ಆಹ್ವಾನಿಸದಿರುವುದಕ್ಕೆ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಸಂಘ ಅಸಮಾಧಾನ ಹೊರಹಾಕಿದೆ.

no-senior-freedom-fighters-were-invited-for-the-inauguration-of-gandhi-bhavan
ಗಾಂಧಿ ಭವನ ಉದ್ಘಾಟನೆಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿಗಿಲ್ಲ ಆಹ್ವಾನ

ದಾವಣಗೆರೆ: ಇಲ್ಲಿನ ರಾಮನಗರದಲ್ಲಿ ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ವಾರ್ತಾ ಇಲಾಖೆಯಿಂದ ನಿರ್ಮಿತವಾದ ಹೈಟೆಕ್ ಗಾಂಧಿ ಭವನ ಉದ್ಘಾಟನೆಗೆ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ. ಆದರೆ, ಈ ಕಾರ್ಯಕ್ರಮಕ್ಕೆ ಮಾಜಿ ಸ್ವಾತಂತ್ರ್ಯ ಹೋರಾಟಗಾರರಿಗೆ ಆಹ್ವಾನ ನೀಡದೇ ಅವಮಾನಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಗಾಂಧಿ ಭವನ ಉದ್ಘಾಟನೆಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿಗಿಲ್ಲ ಆಹ್ವಾನ

ಒಂದು ಎಕರೆ ಜಾಗದಲ್ಲಿ ಸುಂದರ ಕಲಾಕೃತಿಗಳಿಂದ ಗಾಂಧಿ ಭವನ ನಿರ್ಮಾಣಗೊಂಡಿದ್ದು, ಗಾಂಧೀಜಿ ಅವರ ಜೀವನ ಚರಿತ್ರೆ ತಿಳಿದು ಕೊಳ್ಳಬಯಸುವರು ಅವರ ಪುಸ್ತಕಗಳ ಸಹಾಯದಿಂದ ತಿಳಿದುಕೊಳ್ಳಲು ಸುಂದರ ಗ್ರಂಥಾಲಯ, ಮ್ಯೂಸಿಯಂ, ಸಭಾಂಗಣ, ಕೆಂಪು ಹಂಚಿನಿಂದ ನಿರ್ಮಾಣ ಮಾಡಿರುವ ಚಾವಣಿ ಆಕರ್ಷಿಸುತ್ತಿದೆ. ಇಲ್ಲಿ ಗಾಂಧೀಜಿ ಅವರ ಜೀವನ ಶೈಲಿ ಸಾರುವ ಸಾಕಷ್ಟು ಕಲಾಕೃತಿಗಳಿವೆ.

ಈ ಹೈಟೆಕ್ ಗಾಂಧಿ ಭವನ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಿಎಂ ಬಸವರಾಜ್ ಬೊಮ್ಮಾಯಿ‌ ಉದ್ಘಾಟನೆ ಮಾಡಲಿದ್ದಾರೆ. ಆದರೆ, ಗಾಂಧಿ ಭವನ ನಿರ್ಮಾಣ ಆಗಬೇಕು ಎಂದು ಹೋರಾಟ ಮಾಡಿದ್ದ ಸ್ವಾತಂತ್ರ್ಯ ಹೋರಾಟಗಾರ, ಗಾಂಧಿವಾದಿ ಹಾಗೂ ಭಾರತ್ ದೇಶದ ಎಮಿನೆಂಟ್ ಕಮಿಟಿ ಸದಸ್ಯರಾದ ಮರಳುಸಿದ್ದಪ್ಪ, ಹಾಗೂ ಶಿವಲಿಂಗಸ್ವಾಮಿ, ಹಾಲಪ್ಪ, ಶಿವಲಿಂಗಸ್ವಾಮಿ ಅವರನ್ನ ಆಹ್ವಾನಿಸದೇ ಅಪಮಾನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಗಾಂಧಿ ಭವನ ನಿರ್ಮಾಣ ಮಾಡಿ ಎಂದು ಹಲವು ವರ್ಷಗಳಿಂದ ಹೋರಾಟ ಮಾಡಿದ್ದ ಸ್ವಾತಂತ್ರ್ಯ ಹೋರಾಟಗಾರರನ್ನ ಸರ್ಕಾರ, ಜಿಲ್ಲಾಡಳಿತ ಮರೆತು ಕೇವಲ ರಾಜಕಾರಣಿಗಳಿಗೆ ಮಾತ್ರ ಆಹ್ವಾನ ನೀಡಿದ್ದಕ್ಕೆ ದಾವಣಗೆರೆ ಸ್ವಾತಂತ್ರ್ಯ ಹೋರಾಟಗಾರರ ಸಂಘ ವಿರೋಧ ವ್ಯಕ್ತಪಡಿಸಿದೆ.

ಓದಿ: ಇಂದು ವಿಶ್ವ ತೆಂಗು ದಿನ: ಕಲ್ಪತರು ನಾಡಿಗೆ ತೆಂಗು ಕೃಷಿಯ ಹಿರಿಮೆ

Last Updated : Sep 2, 2021, 12:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.