ETV Bharat / state

ಟೆಕೆಟ್ ಸಿಕ್ಕಿದ್ದರೆ ಹರಿಹರದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸುತ್ತಿತ್ತು, ಪಿತೂರಿಯಿಂದ ನನಗೆ ಟಿಕೆಟ್ ಕೈತಪ್ಪಿದೆ: ಎಸ್.ರಾಮಪ್ಪ

author img

By

Published : May 31, 2023, 10:13 PM IST

''ನಾನು 590 ಕೋಟಿ ರೂ. ಅನುದಾನವನ್ನು ಹರಿಹರ ಕ್ಷೇತ್ರಕ್ಕೆ ತಂದಿದ್ದೇನೆ. ಇನ್ನೂ ಸಾಕಷ್ಟು ಅಭಿವೃದ್ಧಿ ಮಾಡುತ್ತಿದೆ. ಟಿಕೆಟ್​ಗಾಗಿ ಐದು ಸರ್ವೆಗಳಲ್ಲೂ ನನ್ನ ಹೆಸರೇ ಇತ್ತು. ಕಾಣದ ಕೈಗಳಿಂದ ಷಡ್ಯಂತ್ರ ನಡೆದಿದೆ'' ಎಂದು ಹರಿಹರದ ಕಾಂಗ್ರೆಸ್​ನ ಮಾಜಿ ಶಾಸಕ ಎಸ್. ರಾಮಪ್ಪ ಹೇಳಿದರು.

Etv Bharat
Etv Bharat

ಹರಿಹರದ ಕಾಂಗ್ರೆಸ್​ನ ಮಾಜಿ ಶಾಸಕ ಎಸ್. ರಾಮಪ್ಪ ಮಾತನಾಡಿದರು.

ದಾವಣಗೆರೆ: ''ನನಗೆ ಟೆಕೆಟ್ ಸಿಕ್ಕಿದ್ದರೆ ಹರಿಹರದಲ್ಲಿ ಕಾಂಗ್ರೆಸ್ ಕೈ ಮೇಲು ಗೈ ಸಾಧಿಸುತ್ತಿತ್ತು. ಬಿಜೆಪಿ ಸೋಲುತ್ತಿತ್ತು. ಆದರೆ ಕೆಲವರ ಪಿತೂರಿಯಿಂದ ಟಿಕೆಟ್ ಕೈ ತಪ್ಪಿತು'' ಎಂದು ಹರಿಹರದ ಮಾಜಿ ಕಾಂಗ್ರೆಸ್ ಶಾಸಕ ಎಸ್. ರಾಮಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ''ನಾನು 590 ಕೋಟಿ ರೂ. ಅನುದಾನವನ್ನು ಹರಿಹರ ಕ್ಷೇತ್ರಕ್ಕೆ ತಂದಿದ್ದೇನೆ. ಇನ್ನೂ ಸಾಕಷ್ಟು ಅಭಿವೃದ್ಧಿ ಮಾಡುತ್ತಿದೆ. ಇನ್ನೂ ಟಿಕೆಟ್​ಗಾಗಿ ಐದು ಸರ್ವೆಗಳಲ್ಲೂ ನನ್ನ ಹೆಸರೇ ಇತ್ತು. ಕಾಣದ ಕೈಗಳಿಂದ ಷಡ್ಯಂತ್ರ ನಡೆದಿದ್ದು, ನಮ್ಮ ಪಕ್ಷ ವಿರೋಧ ಪಕ್ಷದಲ್ಲಿದ್ದರೂ ಶಾಸಕನಾಗಿ ಅನುದಾನ ತಂದು ಕೆಲಸ ಮಾಡಿದೆ. ಈಗ ನನಗೆ ಟಿಕೆಟ್ ನೀಡಿದ್ದರೆ ಗೆದ್ದು, ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡಲು ಅನುಕೂಲ ಆಗುತ್ತಿತ್ತು. ಆದರೆ, ಬಿ ಫಾರಂ ತಪ್ಪಿಸಲಾಯಿತು. ಕಾಗಿನೆಲೆ ಶ್ರೀ, ಪಂಚಮಪೀಠದ ಸ್ವಾಮಿಜಿಗಳು ಟಿಕೆಟ್ ತಪ್ಪಿಸಲು ಪತ್ರ ಬರೆದಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಸ್ವಾಮಿಜಿಯವರು ಪತ್ರ ಬರೆದಿಲ್ಲ ಎಂದು ಭಾವಿಸಿರುವೆ'' ಎಂದರು.

ಇದನ್ನೂ ಓದಿ: 1.15 ಕೋಟಿ ರೂ. ವಂಚನೆ ಪ್ರಕರಣ: ಆರೋಪಿ ಕಳತ್ತೂರು ವಿಶ್ವನಾಥ್ ಶೆಟ್ಟಿ ಬಂಧನ

ವಿಧಾನ ಪರಿಷತ್ ಸದಸ್ಯ ಸ್ಥಾನ ಕಲ್ಪಿಸಿ: ''2023ರ ಚುನಾವಣೆಯಲ್ಲಿ ಹರಿಹರದಲ್ಲಿ ಬಿಜೆಪಿ ಗಾಳಿಯಲ್ಲಿ ಗೆದ್ದು ಬಂದಿದೆ. ಈ ಭಾರಿ ಅತೀ ಹೆಚ್ಚಿನ ಅಂತರದಲ್ಲಿ ಸುಲಭವಾಗಿ ಗೆಲ್ಲುತ್ತಿದೆ. ಆದರೆ ನನಗೆ ಮೋಸ ಆಗಿದೆ. ಗೆಲ್ಲುವಂತಹ ಶಾಸಕನಿಗೆ ಟೆಕೆಟ್ ತಪ್ಪಿಸಲಾಗಿದೆ. ಹೀಗಾಗಿ ಎಂಎಲ್​ಸಿ ಮಾಡಿ ಎಂದು ಕೇಳಿದ್ದೇನೆ. ನಿಗಮ ಮಂಡಳಿ ಸ್ಥಾನ ಕೊಟ್ಟರೂ ನಿಭಾಯಿಸುತ್ತೇನೆ. ಅಂತಿಮವಾಗಿ ಪಕ್ಷದ ನಿರ್ಧಾರಕ್ಕೆ ಬದ್ದನಾಗಿ ಇರುತ್ತೇನೆ'' ಎಂದು ರಾಮಪ್ಪ ತಿಳಿಸಿದರು.

ಇದನ್ನೂ ಓದಿ: ಸಾಮಾಜಿಕ ಕಾರ್ಯಕರ್ತ ಹರೀಶ್ ಹಳ್ಳಿ ಸಾವು ಪ್ರಕರಣ: ಸಿಬಿಐ ತನಿಖೆಗೆ ಒತ್ತಾಯ

ಅನುಷ್ಠಾನಕ್ಕೆ ಬರಲಿವೆ ಗ್ಯಾರಂಟಿಗಳು: ''ಕಾಂಗ್ರೆಸ್‌ ಪಕ್ಷದಿಂದ ಚುನಾವಣೆಗೆ ಮುನ್ನ ನೀಡಲಾಗಿದ್ದ ಗ್ಯಾರಂಟಿ ಯೋಜನೆಗಳನ್ನು ರಾಜ್ಯ ಸರ್ಕಾರ ಶೀಘ್ರವೇ ಅನುಷ್ಠಾನಗೊಳಿಸಲಿದೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ನಡೆಸುತ್ತಿರುವುದು ಸರಿಯಲ್ಲ ಎಂದು ಮಾಜಿ ಶಾಸಕ ಎಸ್ ರಾಮಪ್ಪ ಹೇಳಿದರು. ರಾಜ್ಯದ ಜನತೆಗೆ ಐದು ಗ್ಯಾರಂಟಿಗಳ ಭರವಸೆ ನೀಡಲಾಗಿತ್ತು. ಅವುಗಳನ್ನು ಶೀಘ್ರ ಅನುಷ್ಠಾನಗೊಳ್ಳಲಿವೆ. ಅದರಂತೆ ರಾಜ್ಯದ ಜನರು ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆಯಿಟ್ಟು ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಮೊದಲ ಸಂಪುಟದಲ್ಲೇ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಕ್ರಮ ತೆಗೆದುಕೊಂಡಿದ್ದಾರೆ. ಯೋಜನೆಗಳ ಅನುಷ್ಟಾನಕ್ಕೆ ಸಂಬಂಧಿಸಿದಂತೆ ರೂಪರೇಷೆಗಳನ್ನು ಬಿಡುವಿಲ್ಲದೇ ತಯಾರು ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸ್ಪಂದಿಸುವ ಗುಣ ಇಲ್ಲದಿದ್ದರೆ ನ್ಯಾಯ ಒದಗಿಸಲು ಸಾಧ್ಯವಿಲ್ಲ: ಸಿದ್ದರಾಮಯ್ಯ

ಇದನ್ನೂ ಓದಿ: ಕನ್ನಡ ಚಿತ್ರರಂಗದ 50ಕ್ಕೂ ಹೆಚ್ಚು ಕಲಾವಿದರಿಂದ ಡಾ.ಲೀಲಾವತಿಗೆ ಸನ್ಮಾನ: ನಮ್ಮಮ್ಮ ಲೀಲಮ್ಮ ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ಪ್ರದಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.