ETV Bharat / state

ಬೈಕ್​ಗಳ ನಕಲಿ ದಾಖಲೆ ಸೃಷ್ಟಿಸಿ ಬೇರೊಬ್ಬರ ಹೆಸರಿಗೆ ವರ್ಗಾವಣೆ : ನಾಲ್ಕು ಜನ ಆರ್​ಟಿಒ ಸಿಬ್ಬಂದಿ ಬಂಧನ

author img

By

Published : Aug 2, 2023, 7:27 AM IST

Updated : Aug 2, 2023, 10:25 AM IST

ಪ್ರಕರಣದ ಬಗ್ಗೆ ಎಸ್ಪಿ ಅರುಣ್​ ಕೆ ಮಾಹಿತಿ
ಪ್ರಕರಣದ ಬಗ್ಗೆ ಎಸ್ಪಿ ಅರುಣ್​ ಕೆ ಮಾಹಿತಿ

ಕಳವು ಮಾಡಿದ ಬೈಕ್​ಗಳ ನಕಲಿ ದಾಖಲೆ ಸೃಷ್ಟಿಸಿ ಬೇರೊಬ್ಬರ ಹೆಸರಿಗೆ ವರ್ಗಾಯಿಸುತ್ತಿದ್ದ 4 ಜನರನ್ನ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ಬಗ್ಗೆ ಎಸ್​​​​ಪಿ ಅರುಣ್​ ಕೆ ಮಾಹಿತಿ

ದಾವಣಗೆರೆ: ಕಳವು ಮಾಡಿದ ದ್ವಿಚಕ್ರ ವಾಹನಗಳಿಗೆ ನಕಲಿ ದಾಖಲೆ ಸೃಷ್ಟಿಸಲು ಸ್ಥಳೀಯ ಬ್ರೋಕರ್​ಗಳಿಗೆ ಸಹಕರಿಸುತ್ತಿದ್ದ ಆರೋಪದ ಮೇರೆಗೆ ಆರ್​ಟಿಒ ಕಚೇರಿಯ ನಾಲ್ವರು ಸಿಬ್ಬಂದಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಳವು ಮಾಡಿದ್ದ ಬೈಕ್​ಗಳ ಮಾಲೀಕರಿಗೆ ಗೊತ್ತಿಲ್ಲದಂತೆ ನಕಲಿ ದಾಖಲೆ ಸೃಷ್ಟಿಸಿ ಬೈಕ್​ಗಳನ್ನು ಬೇರೊಬ್ಬರ ಹೆಸರಿಗೆ ವರ್ಗಾಯಿಸುತ್ತಿದ್ದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ದ್ವಿತೀಯ ದರ್ಜೆಯ ಸಹಾಯಕರಾಗಿರುವ (ಎಸ್​ಡಿಎ) ವಸಂತ ಕುಮಾರ್, ಶಶಿಕುಮಾರ್, ಜಗದೀಶ್, ಪ್ರದೀಪ್ ಬಂಧಿತ ಸಿಬ್ಬಂದಿಯಾಗಿದ್ದಾರೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ಪೊಲೀಸ್​ ಠಾಣೆಯ ವ್ಯಾಪ್ತಿಯಲ್ಲಿ ಕಳುವಾಗಿದ್ದ ದ್ವಿಚಕ್ರ ವಾಹನದ ತನಿಖೆ ನಡೆಸುತ್ತಿದ್ದಾಗ ಈ ನಕಲಿ ದಾಖಲೆ ಸೃಷ್ಟಿಸುವ ಪ್ರಕರಣ ಬೆಳಕಿಗೆ ಬಂದಿದೆ.

ಬೈಕ್‌ ಕಳೆದುಕೊಂಡು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದ ಮಾಲೀಕರಿಗೆ ತಿಳಿಯದಂತೆ ನಕಲಿ ದಾಖಲೆ ಸೃಷ್ಟಿಸಿ ಈ ಕೃತ್ಯ ಎಸಗಲಾಗಿದೆ ಎಂದು ಎಸ್ಪಿ ಡಾ ಅರುಣ್ ಕೆ ಹೇಳಿದ್ದಾರೆ.‌ ಹೊನ್ನಾಳಿಯ ಪೊಲೀಸರು ಕಳವಾಗಿರುವ ಬೈಕ್ ಬಗ್ಗೆ ತನಿಖೆ ನಡೆಸಿದಾಗ ಕಳವಾಗಿರುವ ದ್ವಿಚಕ್ರ ವಾಹನಗಳ ದಾಖಲೆ ನಕಲಿ ಸೃಷ್ಟಿಸಿರುವುದು ಆರ್​ಟಿಒ ಕಚೇರಿಯಲ್ಲೇ ಎಂದು ತಿಳಿದು ಬಂದಿದೆ. ಬಳಿಕ ಸೈಬರ್ ಠಾಣೆಯ ಪೊಲೀಸರು ಹೆಚ್ಚಿನ ತನಿಖೆ ಮಾಡಿ ಪ್ರಾದೇಶಿಕ ಸಾರಿಗೆ ಕಚೇರಿಯ ಸಿಬ್ಬಂದಿಯನ್ನು ವಿಚಾರಿಸಿದಾಗ ವಾಹನದ ಮಾಲೀಕರ ಬದಲಿಗೆ ಬ್ರೋಕರ್ ರಸೂಲ್ ಎಂಬುವ ದಾಖಲೆಗೆ ಸಹಿ ಮಾಡಿರುವುದು ತಿಳಿದು ಬಂದಿದೆ. ಈ ಪ್ರಕರಣ ಸಂಬಂಧ ರಸೂಲ್ ಸೇರಿದಂತೆ ನಾಲ್ಕು ಜನ ಸಿಬ್ಬಂದಿಯನ್ನು ಬಂಧಿಸಲಾಗಿದೆ. ‌ಬಸವನಗರ ಪೊಲೀಸ್​ ಠಾಣೆಯಲ್ಲಿ 10 ಪ್ರಕರಣಗಳನ್ನು ದಾಖಲಿಸಲಾಗಿದೆ.

ಪ್ರಕರಣದ ಬಗ್ಗೆ ಎಸ್ಪಿ ಡಾ ಅರುಣ್ ಕೆ ಹೇಳಿದ್ದಿಷ್ಟು: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಎಸ್ಪಿ ಡಾ ಅರುಣ್ ಕೆ, ಕಳ್ಳತನ ಪ್ರಕರಣ ಪತ್ತೆಯಾಗಿದ್ದು, ಅದರಲ್ಲಿ 10 ದ್ವಿಚಕ್ರ ವಾಹನಗಳು ರೆಕಾರ್ಡ್ ಆಗಿವೆ. ಪತ್ತೆಯಾದ ದ್ವಿಚಕ್ರವಾಹನಗಳ ಮಾಲೀಕರು ಯಾರೆಂದು ಪರಿಶೀಲನೆ ಮಾಡಿದಾಗ ನಕಲಿ ದಾಖಲೆಗಳು ಸೃಷ್ಟಿಯಾಗಿರುವುದು ಕಂಡು ಬಂದಿದೆ. ಹೊನ್ನಾಳಿ ಪೊಲೀಸರು ತನಿಖೆ ನಡೆಸಿದಾಗ ನಿಜವಾದ ಮಾಲೀಕನ ಗಮನಕ್ಕೆ ತರದೇ ನಕಲಿ ದಾಖಲೆ ಸೃಷ್ಟಿಸಿ ಬೇರೊಬ್ಬರ ಹೆಸರಿಗೆ ಮಾಡಿಕೊಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇದರ ಸಂಬಂಧ ಬಸವನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೈಬರ್ ಪೊಲೀಸ್​ ಠಾಣೆಯ ಸಿಬ್ಬಂದಿ ಹೆಚ್ಚಿನ ತನಿಖೆ ನಡೆಸಿದಾಗ ಈ ಪ್ರಕರಣದಲ್ಲಿ ಯಾರ ಪಾತ್ರ ಇದೆ ಎಂದು ಪರಿಶೀಲಿಸಿದಾಗ ಪ್ರಾದೇಶಿಕ ಸಾರಿಗೆ ಕಚೇರಿಯ ನಾಲ್ಕು ಜನ ಎಸ್​ಡಿಎಗಳು ಶಾಮೀಲಾಗಿರುವುದು ತಿಳಿದು ಬಂದಿದೆ. ಹಾಗೂ ವಾಹನ ಮಾಲೀಕರಿಗೆ ಗೊತ್ತಿಲ್ಲದೇ ಕಳವು ಮಾಡಿದ ಬೈಕ್​​​ಗಳಿಗೆ ನಕಲಿ ದಾಖಲೆ ಸೃಷ್ಟಿಸಲಾಗಿದೆ. ಈ ಹಿಂದೆ ರಸೂಲ್ ಎಂಬ ಬ್ರೋಕರ್​ನ ಕೈವಾಡ ಇರುವು ತಿಳಿದು ಬಂದಿದ್ದು ಆರೋಪಿತರನ್ನು ಬಂಧಿಸಲಾಗಿದೆ ಎಂದರು.

ಇದನ್ನೂ ಓದಿ: ನಕಲಿ ದಾಖಲೆ ಸೃಷ್ಟಿಸಿ‌ ಫೈನಾನ್ಸ್ ಕಂಪನಿಗೆ ಟೋಪಿ ಹಾಕಿದ‌ ವಂಚಕರು‌ ಅಂದರ್

Last Updated :Aug 2, 2023, 10:25 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.