ETV Bharat / state

ಬಿಜೆಪಿಗೆ ಬಹುಮತ ಬರುತ್ತೆ, ಅತಂತ್ರ ಬಂದ್ರೆ ಜೆಡಿಎಸ್ ಜತೆ ಒಪ್ಪಂದ ಆಗಬಹುದು: ಎಂ ಪಿ ರೇಣುಕಾಚಾರ್ಯ

author img

By

Published : May 11, 2023, 3:26 PM IST

Updated : May 11, 2023, 3:58 PM IST

ಎಕ್ಸಿಟ್ ಪೋಲ್​ಗಳು ಏನೇ ವರದಿ ಮಾಡಿದರೂ ಬಿಜೆಪಿ ಅಧಿಕಾರಕ್ಕೆ ಬರುವ ವಿಶ್ವಾಸ ನಮಗಿದೆ ಬಿಜೆಪಿ ಅಭ್ಯರ್ಥಿ ಎಂ ಪಿ ರೇಣುಕಾಚಾರ್ಯ ಹೇಳಿದ್ದಾರೆ.

BJP candidate MP Renukacharya spoke to the reporters.
ಸುದ್ದಿಗಾರರೊಂದಿಗೆ ಬಿಜೆಪಿ ಅಭ್ಯರ್ಥಿ ಎಂ.ಪಿ.ರೇಣುಕಾಚಾರ್ಯ ಮಾತನಾಡಿದರು.

ಸುದ್ದಿಗಾರರೊಂದಿಗೆ ಶಾಸಕ ಎಂ ಪಿ ರೇಣುಕಾಚಾರ್ಯ ಮಾತನಾಡಿದರು.

ದಾವಣಗೆರೆ: ರಾಜ್ಯದಲ್ಲಿ ಫಲಿತಾಂಶ ಅತಂತ್ರ ಅದರೆ ಇದುವರೆಗೂ ಜೆಡಿಎಸ್​ನೊಂದಿಗೆ ಒಳ ಒಪ್ಪಂದ ಆಗಿಲ್ಲ, ಅಂತಹ ಸಂದರ್ಭ ಬಂದರೆ ಒಪ್ಪಂದ ಆಗಬಹುದು ಎಂದು ಹೊನ್ನಾಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ ಪಿ ರೇಣುಕಾಚಾರ್ಯ ಹೊಸ ಬಾಂಬ್ ಸಿಡಿಸಿದ್ದಾರೆ.

ಜಿಲ್ಲೆಯ ಹೊನ್ನಾಳಿಯಲ್ಲಿರುವ ಅವರ ನಿವಾಸದಲ್ಲಿ ಎಕ್ಸಿಟ್ ಪೋಲ್ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜನರ ನಾಡಿ‌ಮಿಡಿತ ಕಾರ್ಯಕರ್ತರ ಮುಖಂಡರ ನಾಡಿ ಮಿಡಿತ ನಮಗೆ ಗೊತ್ತಿದೆ. ಮಾಧ್ಯಮಗಳಲ್ಲಿ ಬಂದಿರುವ ಸುದ್ದಿಗಳನ್ನು ಹೊರತುಪಡಿಸಿಯೂ ಜನರು ಬಿಜೆಪಿಗೆ ಮತ ಹಾಕುತ್ತಾರೆ. ಮಾಧ್ಯಮಗಳ ವಿರುದ್ಧ ದೋಷಣೆ ಮಾಡುತ್ತಿಲ್ಲ. ಏನೇ ವರದಿ ಮಾಡಿದರು ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಹಾಗಂತ ಮಾಧ್ಯಮಗಳು ಬಿತ್ತರಿಸಿದ ವರದಿ ಸುಳ್ಳು ಎಂದು ಹೇಳುವುದಿಲ್ಲ, ನಮ್ಮ ಟಾರ್ಗೆಟ್ 150 ಎಂದು ಇತ್ತು, ಈಗ 125 ಕ್ಕೂ ಹೆಚ್ವು ಬರುವ ಸಾಧ್ಯತೆ. ಹಳ್ಳಿಗಳಲ್ಲಿ ನಮ್ಮ ಕಾರ್ಯಕರ್ತರ ನಾಡಿ ಮಿಡಿತ ನಮಗೆ ಗೊತ್ತಿರುತ್ತೆ. ಬಹುಮತ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು‌.

ಜೆಡಿಎಸ್ ಜೊತೆ ಬಿಜೆಪಿ ಒಳ ಒಪ್ಪಂದ...? ಜೆಡಿಎಸ್​ನೊಂದಿಗೆ ಒಳ ಒಪ್ಪಂದ ಮಾಡಿಕೊಳ್ಳುವ ಪರಿಸ್ಥಿತಿ ಬಂದರೆ ನಮ್ಮ ರಾಷ್ಟ್ರೀಯ ನಾಯಕರು ನಿರ್ಧರಿಸುತ್ತಾರೆ. ಇದುವರೆಗೂ ಒಳ ಒಪ್ಪಂದ ಆಗಿಲ್ಲ. ಅಂತಹ ಸಂದರ್ಭ ಒದಗಿ ಬಂದರೂ ಆಗಬಹುದು. ಫಲಿತಾಂಶ ಬಂದ ನಂತರ ನಿರ್ಧಾರ ಆಗುತ್ತದೆ. ಪರೋಕ್ಷವಾಗಿ ಜೆಡಿಎಸ್ ಜತೆ ಕೈ ಜೋಡಿಸುವ ಇಂಗಿತವನ್ನು ಹೊನ್ನಾಳಿ ಶಾಸಕರು ವ್ಯಕ್ತಪಡಿಸಿದರು.

ನಮ್ಮ ಬಗ್ಗೆ ಕ್ಷೇತ್ರದಲ್ಲಿ ಸಾಕಷ್ಟು ಅಪಪ್ರಚಾರ ಮಾಡುವುದರೊಂದಿಗೆ, ಜಾತಿ ಜಾತಿ ಎಂದು ಹೊಡೆದಾಡಿದ್ದಾರೆ. ಸಿದ್ದರಾಮಯ್ಯ ಹೆಸರು ಹೇಳಿ ಕಾಂಗ್ರೆಸ್​ನವರು ವೋಟ್ ಕೇಳ್ತಾ ಇದ್ದಾರೆ. ವೀರಶೈವ ಲಿಂಗಾಯತ ಒಳ ಪಂಗಡಗಳು, ಎಸ್ಸಿ ಎಸ್ಟಿ ಸೇರಿದಂತೆ ಹಲವು ಪಂಗಡಗಳು ನಮ್ಮ ಜತೆ ಇವೆ. ಸಮಸ್ತ ಸಮಾಜ ಗಟ್ಟಿಯಾಗಿ ನಮ್ಮ ಜೊತೆ ನಿಂತಿದ್ದಾರೆ ಎಂದರು.

ಬಂಜಾರ ಸಮಾಜದವರು ನಮ್ಮ ಜೊತೆಯಲ್ಲಿ ಇದ್ದಾರೆ, ಕೋವಿಡ್​ನಲ್ಲಿ ಸೇವೆ ಮಾಡಿದ್ದೇನೆ. ಮಳೆ ಬಂದಾಗ ಅನುದಾನ ನೀಡಿದ್ದೇನೆ. ಎಲ್ಲಾ ಸೇವೆ ಗುರುತಿಸಿ ಮಹಿಳೆಯರು ಹಾಗೂ ಯುವಕರು ನಮ್ಮ ಪರ ಇದ್ದಾರೆ. ಸೋಲಿನ ಭೀತಿಯಿಂದ ನನ್ನ ವಿರುದ್ಧ ಅಪಪ್ರಚಾರ ಮಾಡಿದ್ದಾರೆ ಎಂದು ಮಾಜಿ ಶಾಸಕ ಡಿ ಜಿ ಶಾಂತನಗೌಡರ ವಿರುದ್ಧ ರೇಣುಕಾಚಾರ್ಯ ಇದೇ ವೇಲೆ ವಾಗ್ದಾಳಿ ನಡೆಸಿದರು.

ಇದನ್ನೂಓದಿ:ಮುಗಿದ ಚುನಾವಣೆ ತಲೆಬಿಸಿ: ರಿಲಾಕ್ಸ್ ಮೂಡ್​ನಲ್ಲಿ ನಾಯಕರು, ಆಪ್ತರೊಂದಿಗೆ ಚಹಾಕೂಟ

Last Updated :May 11, 2023, 3:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.