ETV Bharat / state

ನೇತ್ರಾವತಿ ನದಿಗೆ ಈಜಲು ಬಂದ ಯುವಕರು: ಓರ್ವ ನೀರುಪಾಲು

author img

By

Published : Jul 3, 2022, 9:03 PM IST

ಸಜಿಪನಡುವಿನ ತಲೆಮೊಗರುವಿನಲ್ಲಿ ಹರಿಯುವ ನೇತ್ರಾವತಿ ನದಿಗೆ ಈಜಲೆಂದು ಕೆಲ ಯುವಕರು ಬಂದಿದ್ದಾರೆ. ಈ ವೇಳೆ ಓರ್ವ ಯುವಕ ನೀರು ಪಾಲಾಗಿದ್ದಾನೆ. ನೀರುಪಾಲಾದ ಅಶ್ವಿತ್​ಗಾಗಿ ಸ್ಥಳೀಯ ದೋಣಿಯ ಅಂಬಿಗರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

Ashvit got drowned after swimming in Netravati river
ಓರ್ವ ನೀರುಪಾಲು

ಮಂಗಳೂರು: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಗೊಳಪಟ್ಟ ಸಜಿಪನಡು ಗ್ರಾಮದ ತಲೆಮೊಗರು ಎಂಬಲ್ಲಿ ಹರಿಯುವ ನೇತ್ರಾವತಿ ನದಿಯಲ್ಲಿ ಭಾನುವಾರ ಸಂಜೆ ಈಜಲು ಹೋದ ಯುವಕನೋರ್ವ ನೀರುಪಾಲಾದ ಘಟನೆ ನಡೆದಿದೆ. ತೊಟ್ಟಿಲು ತೂಗುವ ಸಂಭ್ರಮಕ್ಕೆಂದು ಸಂಬಂಧಿಗಳ ಮನೆಗೆ ಯುವಕರು ಬಂದಿದ್ದರು. ನೀರು ಪಾಲಾದ ಅಶ್ವಿತ್ ಸಪಲ್ಯ (19) ಎಂಬಾತನ ಹುಡುಕಾಟವನ್ನು ಅಗ್ನಿಶಾಮಕದಳ ಮತ್ತು ಈಜುಗಾರರ ಸಹಾಯದಿಂದ ನಡೆಸಲಾಗುತ್ತಿದೆ.

ನೇತ್ರಾವತಿ ನದಿಯಲ್ಲಿ ಈಜಲು ಬಂದು ನೀರುಪಾಲಾದ ಯುವಕ

ಮತ್ತೋರ್ವ ಹರ್ಷ ಎಂಬಾತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಜಿಪನಡುವಿನ ತಲೆಮೊಗರುವಿನ ನಾಗೇಶ್ ಗಾಣಿಗ ಎಂಬುವರ ಮನೆಯಲ್ಲಿ ಮಗುವನ್ನ ತೊಟ್ಟಿಲು ತೂಗುವ ಸಮಾರಂಭ ಏರ್ಪಡಿಸಲಾಗಿತ್ತು. ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅಶ್ವಿತ್ ಸಪಲ್ಯ, ಸಂಬಂಧಿಗಳಾದ ವಿಶಾಲ್ ಗಾಣಿಗ, ವಿಕಾಸ್ ಗಾಣಿಗ, ಲಿಖಿತ್ ಗಾಣಿಗ, ಹರ್ಷ ಗಾಣಿಗ ಸಮೀಪದ ನೇತ್ರಾವತಿ ನದಿಗೆ ನೀರಾಟವಾಡಲು ತೆರಳಿದ್ದಾರೆ. ಈ ವೇಳೆ ಅಶ್ವಿತ್ ಮತ್ತು ಹರ್ಷ ನೀರುಪಾಲಾಗಿದ್ದಾರೆ.

ಜತೆಯಲ್ಲಿದ್ದ ಯುವಕರು ಹರ್ಷನನ್ನು ರಕ್ಷಿಸಿ ಮೇಲಕ್ಕೆತ್ತಿದ್ದಾರೆ. ಯುವಕರ ಕೂಗು ಕೇಳಿಸಿ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರಾದ ರಾಜೇಶ್ ಮತ್ತು ಹರೀಶ್ ಎಂಬುವರು ಗಂಭೀರ ಸ್ಥಿತಿಯಲ್ಲಿದ್ದ ಹರ್ಷನಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸೇರಿಸಿದ್ದಾರೆ. ನೀರು ಪಾಲಾದ ಅಶ್ವಿತ್​ಗಾಗಿ ಸ್ಥಳೀಯ ದೋಣಿಯ ಅಂಬಿಗರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಎಸ್.ಐ. ಹರೀಶ್ ನೇತೃತ್ವದಲ್ಲಿ ಸಿಬ್ಬಂದಿ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಮಗನನ್ನು ಕಾಲೇಜಿಗೆ ಬಿಟ್ಟು ವಾಪಸ್ ಆಗುವಾಗ ದುರಂತ: ಕಾರು ಪಲ್ಟಿಯಾಗಿ ವಕೀಲ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.