ETV Bharat / state

ಬೋಟಿಗೆ ಸಿಲುಕಿದ್ದ ಬಲೆ ತೆಗೆಯಲು ಸಮುದ್ರಕ್ಕಿಳಿದ ವ್ಯಕ್ತಿ ಸಾವು

author img

By

Published : Aug 11, 2020, 7:16 PM IST

ಸಮುದ್ರಕ್ಕಿಳಿಯುವ ಮುನ್ನ ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳದೆ ಇರುವುದು ಘಟನೆಗೆ ಕಾರಣವಾಗಿರಬಹುದು ಎನ್ನಲಾಗಿದ್ದು, ಈ ಸಂಬಂಧ ಗುತ್ತಿಗೆದಾರ ಕಂಪನಿ ವಿರುದ್ಧ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

A man dies after who drowns in sea for repair of profilor
ಬೋಟಿಗೆ ಸಿಲುಕಿದ್ದ ಬಲೆ ತೆಗೆಯಲು ಸಮುದ್ರಕ್ಕಿಳಿದ ವ್ಯಕ್ತಿ ಸಾವು

ಮಂಗಳೂರು (ದ.ಕ): ನವಮಂಗಳೂರು ಬಂದರಿನಲ್ಲಿರುವ ಮಾಲಿನ್ಯ ಸ್ವಚ್ಚಗೊಳಿಸುವ ಗುತ್ತಿಗೆ ಬೋಟೊಂದರ ಪ್ರೊಫೈಲ್ಲರ್​​ಗೆ ಸಿಲುಕಿದ್ದ ಬಲೆ ತೆಗೆಯಲು ಹೋದ ವ್ಯಕ್ತಿಯೊಬ್ಬ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.

ಬೈಕಂಪಾಡಿ ಸಮೀಪದ ಮೀನಕಳಿಯ ನಿವಾಸಿ ಪ್ರದೀಪ್(42) ಮೃತಪಟ್ಟವರು. ಮಂಗಳವಾರ ಮುಂಜಾನೆ ಬೋಟಿನ ಗುತ್ತಿಗೆದಾರ ಕಂಪನಿಯ ಸಿಬ್ಬಂದಿ ಪ್ರದೀಪ್​ನನ್ನು ಬಲೆ ತೆಗೆಯಲು ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ.

ಆದರೆ ಮುಳುಗುಹಾಕುವ ಸಂದರ್ಭ ಸೂಕ್ತ ಮುನ್ನೆಚ್ಚರಿಕೆ ಹಾಗೂ ರಕ್ಷಣಾ ಸಲಕರಣೆಯ ವ್ಯವಸ್ಥೆ ನೀಡದೆ ಈ ಘಟನೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಐಪಿಸಿ ಸೆಕ್ಷನ್ ಎ304ರ ಪ್ರಕಾರ ಗುತ್ತಿಗೆದಾರ ಕಂಪನಿ ಮತ್ತಿತರರ ಮೇಲೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.