ETV Bharat / state

ಅರಣ್ಯದೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ

author img

By

Published : Feb 4, 2020, 2:57 PM IST

ದಕ್ಷಿಣ ಕನ್ನಡ ಜಿಲ್ಲೆಯ ಇಲ್ಲಿನ ಕೊಕ್ಕಡ ರಸ್ತೆಯ ಬದಿಯ ಕನಿಯಗುಂಡಿ ಎಂಬಲ್ಲಿ ಸರ್ಕಾರಿ ರಕ್ಷಿತಾರಣ್ಯದ ವ್ಯಾಪ್ತಿಯಲ್ಲಿನ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ.

young-boy-suicide-in-forest
ಅರಣ್ಯದೊಳಗೆ ನೇಣು ಬಿಗಿದ ಸ್ಥತಿಯಲ್ಲಿ ಯುವಕನ ಮೃತದೇಹ ಪತ್ತೆ..!

ದಕ್ಷಿಣ ಕನ್ನಡ: ಇಲ್ಲಿನ ಕೊಕ್ಕಡ ರಸ್ತೆಯ ಬದಿಯ ಕನಿಯಗುಂಡಿ ಎಂಬಲ್ಲಿ ಸರ್ಕಾರಿ ರಕ್ಷಿತಾರಣ್ಯದ ವ್ಯಾಪ್ತಿಯಲ್ಲಿನ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ.

ಮೃತಪಟ್ಟ ಯುವಕ ಪುತ್ತೂರು ಬಪ್ಪಳಿಗೆ ಮೋನಪ್ಪ ಎಂಬವರ ಪುತ್ರ ಜಗದೀಶ್ ( 17 ) ಎಂದು ತಿಳಿದು ಬಂದಿದೆ. ಈತ ಒಂದು ವರ್ಷದಿಂದ ಕರಾಯ ಸಮೀಪ ಕಲ್ಲಾಪು ಎಂಬಲ್ಲಿ ತನ್ನ ದೊಡ್ಡಮ್ಮ ಗಿರಿಜಾ ಎಂಬುವರ ಮನೆಯಲ್ಲಿ ವಾಸವಾಗಿದ್ದ ಎನ್ನಲಾಗಿದೆ.

ಸೋಮವಾರ ಬೆಳಗ್ಗೆ ಮನೆಯಿಂದ ಹೋಗಿರುವುದಾಗಿ ಪೋಷಕರು ತಿಳಿಸಿದ್ದಾರೆ. ನಂತರದಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.