ಕೊರೊನಾ ಸೇರಿದಂತೆ ಹಲವು ವೈರಾಣುಗಳನ್ನು ನಾಶ ಮಾಡುತ್ತಂತೆ ಈ ರೋಬೋಟ್​!

author img

By

Published : May 12, 2020, 9:35 PM IST

Updated : May 12, 2020, 11:17 PM IST

ಕೋವಿಡ್ ಸೇರಿದಂತೆ ವೈರಾಣುಗಳ ನಾಶ ಮಾಡುತ್ತೆ ಈ ರೋಬೋಟ್

ಮಂಗಳೂರಿನಲ್ಲಿ ವನೋರ ರೋಬೋಟ್ಸ್ ಪ್ರೈವೆಟ್​ ಲಿಮಿಟೆಡ್ ಅಭಿವೃದ್ಧಿಪಡಿಸಿರುವ ರೋರೋಟ್​, ಕೋವಿಡ್-19 ಸೇರಿದಂತೆ ಹಲವು ವೈರಾಣುಗಳು ಹಾಗೂ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತದಂತೆ.

ಮಂಗಳೂರು: ನಗರದ ತೇಜಸ್ವಿನಿ ಆಸ್ಪತ್ರೆಯಲ್ಲಿ ಹೊಸದೊಂದು ರೋಬೋಟ್ ಬಂದಿದೆ. ನೋಡಲು ಯಂತ್ರದಂತಿರುವ ಈ ರೋಬೋಟ್ ಕೋವಿಡ್-19 ಸೇರಿದಂತೆ ಹಲವು ವೈರಾಣುಗಳ ನಾಶ ಮಾಡುತ್ತದಂತೆ.

ವನೋರ ರೋಬೋಟ್ಸ್ ಪ್ರೈವೆಟ್​ ಲಿಮಿಟೆಡ್ ಅಭಿವೃದ್ಧಿಪಡಿಸಿರುವ ಈ ರೋಬೋಟ್ ನೋಡೋದಕ್ಕೆ ಬಲ್ಬ್​​ಗಳನ್ನು ಜೋಡಿಸಿಟ್ಟ ಯಂತ್ರದಂತಿದೆ. ಈ ರೋಬೋಟ್ ತನ್ನ ಸುತ್ತಮುತ್ತಲಿನ ಬ್ಯಾಕ್ಟೀರಿಯಾ, ವೈರಸ್​ಗಳನ್ನು ಕ್ಷಣಮಾತ್ರದಲ್ಲಿ ನಾಶ ಮಾಡುತ್ತದೆ. ಈ ಕಾರಣದಿಂದ ಆಸ್ಪತ್ರೆಯಲ್ಲಿ ರೋಬೋಟ್ ಅವಶ್ಯಕವೆನಿಸಿದೆ.

ಕೋವಿಡ್ ಸೇರಿದಂತೆ ವೈರಾಣುಗಳ ನಾಶ ಮಾಡುತ್ತೆ ಈ ರೋಬೋಟ್

ಆಸ್ಪತ್ರೆಗಳಲ್ಲಿ ಹಲವು ವಿಧದ ರೋಗಿಗಳು ಬರುತ್ತಾರೆ. ಅದೇ ರೀತಿ ಹಲವು ರೀತಿಯ ಬ್ಯಾಕ್ಟೀರಿಯಾ, ವೈರಸ್​ಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತವೆ. ಸ್ವಚ್ಛತೆಯನ್ನು ಮಾಡಿದರೂ ಅಲ್ಲಲ್ಲಿ ಬ್ಯಾಕ್ಟೀರಿಯಾ, ವೈರಸ್ ಉಳಿದುಕೊಂಡು ಬಿಡುತ್ತವೆ. ಆದರೆ ಈ ರೋಬೋಟ್ ಎಲ್ಲಾ ಕಡೆಗೆ ಹೋಗಿ ಸ್ವಚ್ಛಗೊಳಿಸಬಲ್ಲದು. ಕೋವಿಡ್-19ನ ಅಪಾಯಕಾರಿ ಸನ್ನಿವೇಶದಲ್ಲಿ ಇದು ಆಸ್ಪತ್ರೆಗಳಲ್ಲಿ ಉಪಯೋಗವಾಗಲಿದೆ.

ಈ ರೋಬೋಟ್​ಅನ್ನು ರಿಮೋಟ್ ಮೂಲಕ ನಿಯಂತ್ರಿಸಬಹುದು. ಒಂದು ಕೋಣೆಯಲ್ಲಿ ಕುಳಿತು ಬೇರೆ ಕೋಣೆಯಲ್ಲಿ ಕಾರ್ಯನಿರ್ವಹಿಸಬಹುದು. ಆಪರೇಟ್​ ಮಾಡುವವರಿಗೆ ರೋಬೋಟ್​ನ ಕಾರ್ಯ ವೈಖರಿ ಲೈವ್ ಆಗಿ ನೋಡಲು ಸಾಧ್ಯವಿದೆ. ಅಲ್ಟ್ರಾ ವೈಲೆಟ್ ರೇ ಮೂಲಕ ಬ್ಯಾಕ್ಟೀರಿಯಾ, ವೈರಸ್​ಗಳನ್ನು ನಾಶ ಮಾಡುತ್ತದೆ. 140 ಚದರ ಅಡಿಯ ಕೋಣೆಯನ್ನು 5 ನಿಮಿಷದಲ್ಲಿ ಸ್ವಚ್ಛಗೊಳಿಸುವ ಸಾಮರ್ಥ್ಯ ಹೊಂದಿದೆ.

ಕೃತಕ ಬುದ್ಧಿಮತ್ತೆಯನ್ನು ಹೊಂದಿರುವ ಈ ರೋಬೋಟ್​ ಗೋಡೆಗಳಿಗೆ ಡಿಕ್ಕಿ ಹೊಡೆಯುವುದನ್ನು ಸ್ವಯಂ ಆಗಿ ತಪ್ಪಿಸಿಕೊಳ್ಳುತ್ತದೆ. ಇದೇ ಮೊದಲ ಬಾರಗೆ ಮಂಗಳೂರಿನ ಆಸ್ಪತ್ರೆಗಳಲ್ಲಿ ಬ್ಯಾಕ್ಟೀರಿಯಾ ಸ್ವಚ್ಛತೆಗಾಗಿ ರೋಬೋಟ್ ಬಳಸಲಾಗುತ್ತಿದೆ. ಕೋವಿಡ್-19 ಆತಂಕದ ಸಂದರ್ಭದಲ್ಲಿ ಈ ರೋಬೋಟ್​ಗೆ ಹೆಚ್ಚಿನ ಮಹತ್ವ ಸಿಕ್ಕಿದೆ.

Last Updated :May 12, 2020, 11:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.