ಮೊಟ್ಟೆಗೆ ಕೃತಕ ಕಾವು: 8 ಹೆಬ್ಬಾವು ಮರಿಗಳ ಜನನ.. ವಿಡಿಯೋ

author img

By

Published : Jun 23, 2022, 1:05 PM IST

Updated : Jun 23, 2022, 2:04 PM IST

snake protectors leave the 8 python Chicks to forest

ಹೆಬ್ಬಾವಿನ ಮೊಟ್ಟೆಗೆ ಕೃತಕ ಕಾವು ನೀಡಿದ ಪರಿಣಾಮ ಜನಿಸಿದ 8 ಹೆಬ್ಬಾವು ಮರಿಗಳನ್ನು ಉರಗ ರಕ್ಷಕರಾದ ಸ್ನೇಕ್ ಕಿರಣ್ ಹಾಗೂ ಅಜಯ್ ಅವರು ಅರಣ್ಯಕ್ಕೆ ಬಿಟ್ಟಿದ್ದಾರೆ‌.

ಮಂಗಳೂರು (ದಕ್ಷಿಣ ಕನ್ನಡ): ಕಟ್ಟಡ ಕಾಮಗಾರಿ ವೇಳೆ ಸಿಕ್ಕಿದ್ದ ಹೆಬ್ಬಾವಿನ ಮೊಟ್ಟೆಗೆ ಕೃತಕ ಕಾವು ನೀಡಿದ ಪರಿಣಾಮ ಜನಿಸಿದ 8 ಹೆಬ್ಬಾವು ಮರಿಗಳನ್ನು ಉರಗ ರಕ್ಷಕರಾದ ಸ್ನೇಕ್ ಕಿರಣ್ ಹಾಗೂ ಅಜಯ್ ಅರಣ್ಯಕ್ಕೆ ಬಿಟ್ಟಿದ್ದಾರೆ‌.

ಮೊಟ್ಟೆಗೆ ಕೃತಕ ಕಾವು: 8 ಹೆಬ್ಬಾವು ಮರಿಗಳ ಜನನ

ಶಮಿತ್ ಸುವರ್ಣ ಎಂಬವವರಿಗೆ ನಗರದ ಡೊಂಗರಕೇರಿಯ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಲ್ಲಿ ಕಟ್ಟಡ ಕಾಮಗಾರಿ ನಡೆಸುತ್ತಿದ್ದ ವೇಳೆ, ಈ ಮೊಟ್ಟೆಗಳು ಸಿಕ್ಕಿತ್ತು. ಶಮಿತ್ ಸುವರ್ಣ ಅವರು ಈ ಮೊಟ್ಟೆಗಳ ಬಗ್ಗೆ ಉರಗ ಪ್ರೇಮಿ ಅಜಯ್ ಅವರಿಗೆ ಮಾಹಿತಿ ನೀಡಿದ್ದರು. ಅಜಯ್ ಅವರು ಉರಗ ರಕ್ಷಕ ಸ್ನೇಕ್ ಕಿರಣ್ ಸಹಕಾರದಲ್ಲಿ ಮೊಟ್ಟೆಗಳಿಗೆ ಕೃತಕ‌ ಕಾವು ನೀಡುವ ವ್ಯವಸ್ಥೆ ಮಾಡಿದ್ದರು. ಇದೀಗ ಈ ಮೊಟ್ಟೆಗಳಿಂದ 8 ಹೆಬ್ಬಾವು ಮರಿಗಳು ಹೊರ ಬಂದಿವೆ.

ಇದನ್ನೂ ಓದಿ: ಮಹಿಳೆಯ ಶವ ಬಿಟ್ಟು ಕದಲದ ಕೋತಿ: ಮಂಗನ ವಿಚಿತ್ರ ವರ್ತನೆಗೆ ಗಾಬರಿಗೊಂಡ ಗ್ರಾಮಸ್ಥರು

ಬಂಟ್ವಾಳ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್ ಮಾರ್ಗದರ್ಶನದಂತೆ ಈ ಹೆಬ್ಬಾವು ಮರಿಗಳನ್ನು ಅರಣ್ಯಕ್ಕೆ ಬಿಡಲಾಗಿದೆ. ಈ ಸಂದರ್ಭ ಉಪವಲಯ ಅರಣ್ಯಾಧಿಕಾರಿ ಪ್ರೀತಮ್ ಎಸ್.‌ಪೂಜಾರಿ, ಅರಣ್ಯ ರಕ್ಷಕ ಶೋಭಿತ್ ರಾಜ್, ಉರಗ ಪ್ರೇಮಿ ಅಜಯ್, ಉರಗ ರಕ್ಷಕ ಸ್ನೇಕ್ ಕಿರಣ್, ವಾಹನ ಚಾಲಕ ಜಯರಾಮ್ ಜೊತೆಗಿದ್ದರು.

Last Updated :Jun 23, 2022, 2:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.