ETV Bharat / state

ಪೊಲೀಸರ ಕೊಲೆಗೆ ಯತ್ನಿಸಿದ ಎಸ್​ಡಿಪಿಐ, ಪಿಎಫ್​ಐ ಮುಖಂಡರನ್ನು ಬಂಧಿಸಿ; ವಿಎಚ್​ಪಿ ಮುಖಂಡ

author img

By

Published : Jan 21, 2021, 7:43 PM IST

ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಪ್ರತೀಕಾರವಾಗಿ ಪೊಲೀಸ್ ಸಿಬ್ಬಂದಿ ಹತ್ಯೆಗೆ ಯತ್ನಿಸಿ ಬಂಧಿತರಾಗಿರುವ ಮಾಯಾ ಗ್ಯಾಂಗ್​ನ 6 ಮಂದಿ ಕೂಡ ಪಿಎಫ್ಐ, ಎಸ್​ಡಿಪಿಐ ಕಾರ್ಯಕರ್ತರಾಗಿದ್ದಾರೆ. ಈ ಘಟನೆಯಲ್ಲಿ ಪಿಎಫ್ಐ, ಎಸ್​​ಡಿಪಿಐ ಕೈವಾಡವಿದ್ದು, ಅದರ ನಾಯಕರನ್ನು ಬಂಧಿಸಿ ವಿಚಾರಣೆ ಮಾಡಬೇಕೆಂದು ಶರಣ್ ಪಂಪ್ ವೆಲ್ ಆಗ್ರಹಿಸಿದ್ದಾರೆ.

Sharan Pamp vel
ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್

ಮಂಗಳೂರು: ಮಂಗಳೂರಿನಲ್ಲಿ ಪೊಲೀಸ್ ಸಿಬ್ಬಂದಿ ಗಣೇಶ್ ಕಾಮತ್ ಕೊಲೆಯತ್ನ ಪ್ರಕರಣದಲ್ಲಿ ಪಿಎಫ್ಐ ಹಾಗೂ ಎಸ್​​ಡಿಪಿಐ ಕೈವಾಡವಿದ್ದು, ಅದರ ನಾಯಕರನ್ನು ಬಂಧಿಸಬೇಕೆಂದು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಆಗ್ರಹಿಸಿದ್ದಾರೆ.

ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್

ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಪ್ರತೀಕಾರವಾಗಿ ಪೊಲೀಸ್ ಸಿಬ್ಬಂದಿ ಹತ್ಯೆಗೆ ಯತ್ನಿಸಿ ಬಂಧಿತರಾಗಿರುವ ಮಾಯಾ ಗ್ಯಾಂಗ್​ನ 6 ಮಂದಿ ಕೂಡ ಪಿಎಫ್ಐ, ಎಸ್​ಡಿಪಿಐ ಕಾರ್ಯಕರ್ತರಾಗಿದ್ದಾರೆ. ಈ ಘಟನೆಯಲ್ಲಿ ಪಿಎಫ್ಐ, ಎಸ್​​ಡಿಪಿಐ ಕೈವಾಡವಿದ್ದು, ಅದರ ನಾಯಕರನ್ನು ಬಂಧಿಸಿ ವಿಚಾರಣೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಓದಿ: ಮಂಗಳೂರು ಗಲಭೆ ಹಿಂದೆ ಉಗ್ರ ಸಂಘಟನೆಗಳ ಕೈವಾಡ: ಶರಣ್ ಪಂಪ್ ವೆಲ್ ಆರೋಪ

ಇದು ಆತಂಕಕಾರಿ ಘಟನೆ. ಕಾನೂನು ಕಾಪಾಡುವ ಪೊಲೀಸ್ ಸಿಬ್ಬಂದಿಯ ಕೊಲೆಗೆ ಇವರು ಸಂಚು ರೂಪಿಸಿದ್ದಾರೆ. ಈ ಕೊಲೆ ಯತ್ನ ಹಿಂದೆ ಹಲವರಿದ್ದು, ಅವರ ತನಿಖೆ ನಡೆಸಬೇಕು. ಜನ ಈ ಘಟನೆಯಿಂದ ಭಯಭೀತರಾಗಿದ್ದಾರೆ. ‌ಅಮಲು ಪದಾರ್ಥ ಬಳಸಿ ಯುವಕರನ್ನು ಉಪಯೋಗಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಲಾಗಿದೆ. ಇದರ ಹಿಂದೆ ವ್ಯವಸ್ಥಿತ ಸಂಚು ಇದೆ. ಅಲ್ಲದೇ ಡ್ರಗ್ಸ್ ಹಿಂದೆ ದೊಡ್ಡ ಜಾಲವಿದ್ದು , ಈ ಬಗ್ಗೆ ತನಿಖೆ ನಡೆಸಬೇಕು ಎಂದು ಶರಣ್ ಪಂಪ್ ವೆಲ್ ಆಗ್ರಹಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.