ETV Bharat / state

ಹಲ್ಲೆಗೆ ಯತ್ನ ಎಂದು ಉಳ್ಳಾಲ ಸುರತ್ಕಲ್​ನಲ್ಲಿ ವದಂತಿ- ಶಾಂತಿಗೆ ಸಹಕರಿಸಿ ಎಂದು ಕಮೀಷನರ್ ಮನವಿ

author img

By

Published : Aug 3, 2022, 4:33 PM IST

ಹಲ್ಲೆಗೆ ಯತ್ನ ಎಂದು ಉಳ್ಳಾಲ ಸುರತ್ಕಲ್​ನಲ್ಲಿ ವದಂತಿ- ಶಾಂತಿಯುತ ವಾತಾವರಣಕ್ಕೆ ಸಹಕರಿಸುವಂತೆ ಕಮೀಷರ್​ ಶಶಿಕುಮಾರ್​ ಮನವಿ - ಸುಳ್ಳು ಸುದ್ದಿ ನಂಬದಂತೆ ಸಲಹೆ

ನಗರ ಪೊಲೀಸ್ ‌ಕಮೀಷನರ್ ಶಶಿಕುಮಾರ್
ನಗರ ಪೊಲೀಸ್ ‌ಕಮೀಷನರ್ ಶಶಿಕುಮಾರ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಹತ್ಯೆಯ ಬಳಿಕ ಉಂಟಾದ ಆತಂಕದ ಬಳಿಕ ಕೆಲವು ವ್ಯಕ್ತಿಗಳು ಸುಳ್ಳು ಕಥೆ ಸೃಷ್ಟಿಸಿ ಗೊಂದಲ ನಿರ್ಮಾಣ ಮಾಡುತ್ತಿದ್ದಾರೆ. ಇದೇ ರೀತಿ ಉಳ್ಳಾಲ ಮತ್ತು ಸುರತ್ಕಲ್​ನಲ್ಲಿ ಹಲ್ಲೆಗೆ ಯತ್ನ ನಡಿದಿದೆ ಎಂಬ ವದಂತಿಯನ್ನು ಹಬ್ಬಿಸಲಾಗಿದೆ. ಇವುಗಳನ್ನು ನಂಬದಂತೆ ನಗರ ಪೊಲೀಸ್ ‌ಕಮೀಷನರ್ ಶಶಿಕುಮಾರ್​ ಅವರು ಜನರಲ್ಲಿ ಮನವಿ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಕೊಲೆ ಪ್ರಕರಣಗಳು ನಡೆದ ಬಳಿಕ ಜಿಲ್ಲೆಯಲ್ಲಿ ಆತಂಕದ ವಾತವರಣ ನಿರ್ಮಾಣವಾಗಿದ್ದು, ಪರಿಸ್ಥಿತಿಯನ್ನು ಸಹಜಸ್ಥಿತಿಗೆ ತರಲು ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಶ್ರಮಪಡುತ್ತಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳನ್ನು ಹರಡಿ ಆತಂಕ ಹೆಚ್ಚಳ ಮಾಡಲಾಗುತ್ತಿದೆ ಎಂದರು.

ಜುಲೈ 30ರಂದು ಸುರತ್ಕಲ್​ನ ಎಂಆರ್​ಪಿಎಲ್ ಬಳಿ ಓರ್ವನ ಹಲ್ಲೆಗೆ ಯತ್ನ ನಡೆದಿತ್ತು ಎಂದು ವದಂತಿ ಹಬ್ಬಿತ್ತು. ಇಂದು ಬೆಳಗ್ಗೆ ಉಳ್ಳಾಲದಲ್ಲಿ ಹತ್ಯೆ ಮಾಡಲು ತಂಡ ಯತ್ನಿಸಿತ್ತು ಎಂದು ವ್ಯಕ್ತಿಯೊಬ್ಬ ಹೇಳಿ ಆತಂಕ ಸೃಷ್ಟಿಸಿದ್ದರು. ಇದು ಸ್ಥಳೀಯ ಮಾಧ್ಯಮಗಳಲ್ಲೂ ಬಿತ್ತರವಾಗಿತ್ತು. ಈ ಬಗ್ಗೆ ಪರಿಶೀಲಿಸಿದಾಗ ಈ ವ್ಯಕ್ತಿ ಸುಳ್ಳು ಕಥೆ ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿದರು.

ನಗರ ಪೊಲೀಸ್ ‌ಕಮೀಷನರ್ ಶಶಿಕುಮಾರ್​ ಅವರು ಮಾತನಾಡಿದರು

ಘಟನೆ ನಡೆದಿದೆ ಎನ್ನಲಾದ ಎಂಆರ್​ಪಿಎಲ್ ಮತ್ತು ಉಳ್ಳಾಲದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಎರಡು ಘಟನೆಯು ಸುಳ್ಳು ಸೃಷ್ಟಿಯಾಗಿದೆ. ಇಂದು ಉಳ್ಳಾಲದಲ್ಲಿ ತನ್ನ ಕೊಲೆಗೆ ಯತ್ನಿಸಲಾಗಿದೆ ಎಂದ ಯುವಕನನ್ನು ವಿಚಾರಿಸಿದಾಗ ತನ್ನ ಮೇಲೆ ಹಲ್ಲೆ ನಡೆಯಬಹುದು ಎಂಬ ಆತಂಕದಲ್ಲಿ ಹೇಳಿದ್ದಾನೆ. ಆ ವ್ಯಕ್ತಿಯನ್ನು ಪರಿಶೀಲನೆ ಮಾಡುತ್ತಿದ್ದೇವೆ. ಸಾರ್ವಜನಿಕರು ಪರಿಸ್ಥಿತಿ ಸಹಜಸ್ಥಿತಿಗೆ ಬರಲು ಶಾಂತಿ ಕಾಪಾಡಬೇಕು ಎಂದು ಹೇಳಿದರು.

ಓದಿ: ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಹರಿದು ಬಂದ ಜನಸಾಗರ.. ಯಾರೆಲ್ಲ ಭಾಗಿ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.