ETV Bharat / state

ನಾಳೆ ನಿಮ್ಗೂ ನಿಮ್ಮ ಹೆಂಡ್ತಿಗೂ ಬುರ್ಕಾ ಹಾಕ್ತಾರೆ.. ಅರಬ್ ಚಿಂತನೆ ಭಾರತದಲ್ಲಿ ತರೋದು ಬೇಡ.. ಕಲ್ಲಡ್ಕ ಪ್ರಭಾಕರ್​ ಭಟ್

author img

By

Published : Mar 30, 2022, 4:53 PM IST

ದೇವಸ್ಥಾನಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧವನ್ನು ಎಸ್.ಎಂ ಕೃಷ್ಣ ಅವರ ಕಾಂಗ್ರೆಸ್ ಸರ್ಕಾರ ತಂದಿರೋದು.‌ ಹಿಂದೂಗಳು ಉದಾರಿಗಳು ಅದಕ್ಕೆ‌ ಸುಮ್ಮನಿದ್ದರು. ಆದರೆ, ಹಿಜಾಬ್ ವಿರುದ್ಧ ಕೋರ್ಟ್ ತೀರ್ಪು ಬಂದಾಗ ಮುಸ್ಲಿಮರು ಮೆಡಿಕಲ್ ಸೇರಿದಂತೆ ಅವಶ್ಯಕ ವಸ್ತುಗಳ ಅಂಗಡಿ ಬಂದ್ ಮಾಡಿದ್ರಲ್ಲ ಇದು ಸಂವಿಧಾನ ವಿರೋಧಿ ಅಲ್ಲವೇ?.‌ ಅದಕ್ಕೋಸ್ಕರ ಹಿಂದೂಗಳು ಈಗ ಎಚ್ಚೆತ್ತಿದ್ದಾರೆ ಎಂದರು..

ಕಲ್ಲಡ್ಕ ಪ್ರಭಾಕರ್​ ಭಟ್
ಕಲ್ಲಡ್ಕ ಪ್ರಭಾಕರ್​ ಭಟ್

ಮಂಗಳೂರು : ಹಲಾಲ್ ಮುಸ್ಲಿಮರಿಗೆ ಬೇಕಾಗಬಹುದು. ಆದರೆ, ಹಿಂದೂಗಳಿಗೆ ಬೇಡ. ಅರಬ್ ಚಿಂತನೆಯನ್ನು ಭಾರತದಲ್ಲಿ ತರೋದು ಬೇಡ. ಇಲ್ಲಿ ಭಾರತದ ಚಿಂತನೆ ಮಾತ್ರ ಇರಲಿ.‌ ಆದ್ದರಿಂದ ಹಿಂದೂಗಳು ಹಲಾಲ್ ಮಾಂಸವನ್ನು ಸ್ವೀಕರಿಸಕೂಡದು ಎಂದು ಆರ್​​​ಎಸ್​​ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್​ ಭಟ್ ಹೇಳಿದರು. ಹಲಾಲ್ ಬಗ್ಗೆ ನನಗೆ ಹೆಚ್ಚೇನೂ ಗೊತ್ತಿಲ್ಲ. ನಾನು ಆ ವಿಚಾರದ ಬಗ್ಗೆ ಇನ್ನಷ್ಟೇ ಅಧ್ಯಯನ ಮಾಡಬೇಕು. ನಮ್ಮ ಸಂಪ್ರದಾಯ ಉಳಿಸಬೇಕು. ಹಾಗಾಗಿ, ಹಲಾಲ್‌ಗೆ ನಮ್ಮ ಬೆಂಬಲವಿಲ್ಲ ಎಂದು ಹೇಳಿದರು.

ಮಂಗಳೂರಿನಲ್ಲಿ ಆರ್​​​ಎಸ್​​ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್​ ಭಟ್ ಹೇಳಿಕೆ ನೀಡಿರುವುದು..

ಹಿಂದೂಸ್ಥಾನದಲ್ಲಿ ಇರುವವರು ಹಿಂದೂಗಳು‌ : ಹಿಂದೂ ಧರ್ಮದ ಬಗ್ಗೆ ಮಾತನಾಡಿದರೆ ಕೋಮುವಾಗುತ್ತದೆಯೇ?.‌ ಯಾರು ಬೇಕಾದರೂ ಪ್ರತಿಭಟನೆ ಮಾಡಬಹುದು. ವಿರೋಧಿಸುವವರು ವಿರೋಧ ಮಾಡುತ್ತಲೇ ಇರುತ್ತಾರೆ‌. ಸಾಮರಸ್ಯದ ಜೀವನ ಮಾಡಬೇಕಾದರೆ ಈ ದೇಶದಲ್ಲಿ ಬದುಕಿ. ಆಗುವುದಿಲ್ಲ ಎಂದಾದರೆ ಎಲ್ಲಿ ಬೇಕಾದರೂ ಹೋಗಿ ಬದುಕಿ‌ ಎಂದರು. ನಮಗೆ ಯಾವುದೇ ಸಮಸ್ಯೆಯಿಲ್ಲ. ಹಿಂದೂ ಅನ್ನುವುದು ಈ ದೇಶದ ಹೆಸರು.‌ ಭಾರತದಲ್ಲಿ ಇರುವವರು ಭಾರತೀಯರು.‌ ಹಿಂದೂಸ್ಥಾನದಲ್ಲಿ ಇರುವವರು ಹಿಂದೂಗಳು‌. ಇದರಲ್ಲಿ ಕೋಮುದ್ವೇಷದ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ದೇವಸ್ಥಾನಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧವನ್ನು ಎಸ್.ಎಂ ಕೃಷ್ಣ ಅವರ ಕಾಂಗ್ರೆಸ್ ಸರ್ಕಾರ ತಂದಿರೋದು.‌ ಹಿಂದೂಗಳು ಉದಾರಿಗಳು ಅದಕ್ಕೆ‌ ಸುಮ್ಮನಿದ್ದರು. ಆದರೆ, ಹಿಜಾಬ್ ವಿರುದ್ಧ ಕೋರ್ಟ್ ತೀರ್ಪು ಬಂದಾಗ ಮುಸ್ಲಿಮರು ಮೆಡಿಕಲ್ ಸೇರಿದಂತೆ ಅವಶ್ಯಕ ವಸ್ತುಗಳ ಅಂಗಡಿ ಬಂದ್ ಮಾಡಿದ್ರಲ್ಲ ಇದು ಸಂವಿಧಾನ ವಿರೋಧಿ ಅಲ್ಲವೇ?.‌ ಅದಕ್ಕೋಸ್ಕರ ಹಿಂದೂಗಳು ಈಗ ಎಚ್ಚೆತ್ತಿದ್ದಾರೆ ಎಂದರು.

ನಾಳೆ ನಿಮಗೂ ನಿಮ್ಮ ಹೆಂಡತಿಗೂ ಬುರ್ಕಾ ಹಾಕ್ತಾರೆ : ಇನ್ನು ನಾವು ಯಾವುದೇ ಜಾತ್ರೋತ್ಸವದಲ್ಲಿ 100 ಮೀ. ವ್ಯಾಪ್ತಿಯೊಳಗೆ ಯಾವ ಮುಸ್ಲಿಮರನ್ನು ಬಿಡುವುದಿಲ್ಲ. ಶಾಲೆಯಲ್ಲಿ ಸಮವಸ್ತ್ರದ ಕಾನೂನಿದೆ. ಅದರ ಬಗ್ಗೆ ಹೈಕೋರ್ಟ್ ತೀರ್ಪು ನೀಡಿದೆ. ಕೋರ್ಟ್ ಹೇಳಿದ್ದನ್ನು ಒಪ್ಪಿಕೊಳ್ಳಬೇಕು. ವಿರೋಧ ಮಾಡುವವರು ಬೇರೆ ದೇಶಕ್ಕೆ ಹೋಗಲಿ.‌ ನಾಳೆ ನಿಮಗೂ ನಿಮ್ಮ ಹೆಂಡತಿಗೂ ಬುರ್ಕಾ ಹಾಕ್ತಾರೆ. ನಿಮಗೆ ಸುನ್ನತ್ ಮಾಡ್ತಾರೆ ಅದಕ್ಕೆ ನಿಮ್ಮ ಒಪ್ಪಿಗೆಯಿದೆಯೇ?. ಈ ಮಣ್ಣಿನ ಕಾನೂನನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ಆಗ್ರಹಿಸಿದರು.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.