ETV Bharat / state

ದೋಣಿಗಲ್​ನಲ್ಲಿ ರಸ್ತೆ ಕುಸಿತ: ಗುಂಡ್ಯ ಚೆಕ್​ ಪೋಸ್ಟ್​ನಲ್ಲಿ ಘನ ವಾಹನ ಚಾಲಕರ ಪರದಾಟ

author img

By

Published : Aug 20, 2021, 9:57 AM IST

Updated : Aug 20, 2021, 11:01 AM IST

ದೋಣಿಗಲ್ ಎಂಬಲ್ಲಿ ರಸ್ತೆ ಕುಸಿತ ಉಂಟಾಗಿದ್ದು ಗುಂಡ್ಯ ವಾಹನ ತಪಾಸಣಾ ಕೇಂದ್ರದಲ್ಲಿ ಮೂರು ದಿನಗಳಿಂದ ಸುಮಾರು 80 ಕ್ಕೂ ಅಧಿಕ ಘನ ವಾಹನಗಳು ನಿಂತಿವೆ.

ಗುಂಡ್ಯ ಚೆಕ್​ ಪೋಸ್ಟ್
ಗುಂಡ್ಯ ಚೆಕ್​ ಪೋಸ್ಟ್

ಗುಂಡ್ಯ: ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಘನ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದು ಗುಂಡ್ಯ ವಾಹನ ತಪಾಸಣಾ ಕೇಂದ್ರದಲ್ಲಿ ಸುಮಾರು 150 ಕ್ಕೂ ಹೆಚ್ಚು ಚಾಲಕರು, ಕ್ಲೀನರ್​ಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ದೋಣಿಗಲ್ ಎಂಬಲ್ಲಿ ರಸ್ತೆ ಕುಸಿತ ಉಂಟಾದ ಹಿನ್ನೆಲೆಯಲ್ಲಿ ಗುಂಡ್ಯ ವಾಹನ ತಪಾಸಣಾ ಕೇಂದ್ರದಲ್ಲಿ ಮೂರು ದಿನಗಳಿಂದ ಸುಮಾರು 80 ಕ್ಕೂ ಅಧಿಕ ಘನ ವಾಹನಗಳು ನಿಂತಿವೆ. ಸ್ಥಳದಲ್ಲಿ ಸುಮಾರು 150ಕ್ಕೂ ಹೆಚ್ಚು ವಾಹನ ಚಾಲಕರು, ಕ್ಲೀನರ್​ಗಳು ಬೀಡುಬಿಟ್ಟಿದ್ದು, ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು.

ಗುಂಡ್ಯ ಚೆಕ್​ ಪೋಸ್ಟ್​ನಲ್ಲಿ ವಾಹನ ಚಾಲಕರ ಪರದಾಟ

ವಿಷಯ ತಿಳಿದು ಸ್ಥಳಕ್ಕೆ ಕಡಬ ತಹಶೀಲ್ದಾರ್ ಅನಂತಶಂಕರ್, ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಚಾಲಕರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ, ಚಾಲಕರು ಕೂಡಲೇ ಬದಲಿ ರಸ್ತೆ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು.

Last Updated :Aug 20, 2021, 11:01 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.