ETV Bharat / state

ಖಾಕಿ ಬಟ್ಟೆಯನ್ನು ಪ್ರಪಂಚಕ್ಕೆ ಪರಿಚಯಿಸಿದ್ದು ಮಂಗಳೂರು.. ಹೀಗಿದೆ ಖಾಕಿ ಬಣ್ಣದ ಇತಿಹಾಸ

author img

By

Published : Nov 14, 2022, 12:50 PM IST

Updated : Nov 14, 2022, 1:51 PM IST

ಖಾಕಿ ಬಣ್ಣದ ಇತಿಹಾಸ: ವಿಶ್ವದ ನಾನಾ ಕಡೆ ಚಾಲ್ತಿಯಲ್ಲಿರುವ ಪೊಲೀಸರ ಖಾಕಿ ಬಣ್ಣದ ಸಮವಸ್ತ್ರ ಮೊಟ್ಟ ಮೊದಲು ತಯಾರಾಗಿದ್ದು ಕನ್ನಡ ನಾಡಿನಲ್ಲಿ. ಅದು ಕೂಡ ಕರಾವಳಿ ಕರ್ನಾಟಕದ ಮಂಗಳೂರಿನಲ್ಲಿ.

Representative image
ಸಾಂದರ್ಭಿಕ ಚಿತ್ರ

ಮಂಗಳೂರು: ಜಗತ್ತಿನ ಹಲವೆಡೆ ಬಳಸುವ ಪೊಲೀಸ್ ಖಾಕಿ ಸಮವಸ್ತ್ರವನ್ನು ಮೊದಲು ತಯಾರಿಸಿದ್ದು ಎಲ್ಲಿ ಎಂಬ ಕುತೂಹಲ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತೆ. ಸದ್ಯ ಇದೇ ಖಾಕಿ ಬಣ್ಣದ ಸಮವಸ್ತ್ರ ಸುದ್ದಿಯಲ್ಲಿದೆ. ದೇಶದಲ್ಲಿ ಪೊಲೀಸ್ ಸಮವಸ್ತ್ರದ ಅಳವಡಿಕೆ ಕುರಿತು ಪ್ರಧಾನಿ ಮೋದಿ ಕುತೂಹಲಕಾರಿ ಕಾಮೆಂಟ್ ಮಾಡಿದ್ದಾರೆ. ಅವರು ಪ್ರಸ್ತಾಪಿಸಿದ 'ಒಂದು ರಾಷ್ಟ್ರ-ಒಂದು ಸಮವಸ್ತ್ರ' ನೀತಿ ಜಾರಿ ಸಂದರ್ಭದಲ್ಲಿ ಖಾಕಿ ಬಣ್ಣದ ಸಮವಸ್ತ್ರದ ಇತಿಹಾಸವನ್ನು ತಿಳಿಯೋಣ.

ಮೊದಲ ಆವಿಷ್ಕಾರ ಮಂಗಳೂರಲ್ಲಿ: ಖಾಕಿ ಬಟ್ಟೆಯೆಂದರೆ ಅದು ವಿಶೇಷ ಗೌರವಕ್ಕೆ ಪಾತ್ರವಾಗಿದೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಕಿ ಬಟ್ಟೆಯನ್ನು ಸಮವಸ್ತ್ರ ಆಗಿ ಬಳಸಲಾಗುತ್ತದೆ. ಈ ಖಾಕಿ ಬಟ್ಟೆಯನ್ನು ಪ್ರಪಂಚಕ್ಕೆ ಪರಿಚಯಿಸಿದ್ದು 'ಮಂಗಳೂರು' ಎಂಬುದು ವಿಶೇಷ.

police-khaki-color-first-invented-in-mangaluru
ಕರ್ತವ್ಯನಿರತ ಖಾಕಿ

ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿ, ಅಂಚೆ ನೌಕರರು, ಸಾರಿಗೆ ಸಿಬ್ಬಂದಿಯ ಸಮವಸ್ತ್ರವಾಗಿ ಬಳಸುವುದು ಖಾಕಿ ಬಟ್ಟೆ. ದೇಶದ ವಿವಿಧೆಡೆ ಕೂಡ ವಿವಿಧ ಇಲಾಖೆಗಳಲ್ಲಿ ಖಾಕಿ ಬಟ್ಟೆಯನ್ನು ಯೂನಿಫಾರ್ಮ್ ಆಗಿ ಬಳಸಲಾಗುತ್ತದೆ. ಖಾಕಿ ಬಣ್ಣವೆಂಬುದು ಹುದ್ದೆಗೆ ಘನತೆಯನ್ನು ತಂದುಕೊಡುತ್ತದೆ. ಈ ಖಾಕಿ ಬಣ್ಣ ಎಲ್ಲಿಂದ ಬಂತೆಂದು ಕೇಳಿದರೆ ಉತ್ತರ ಸಿಗುವುದು ಮಂಗಳೂರಿನಲ್ಲಿ.

ಖಾಕಿ ಬಣ್ಣದ ಇತಿಹಾಸ: ಖಾಕಿ ಬಟ್ಟೆಯನ್ನು ಅನ್ವೇಷಿಸಿದ್ದು ಕನ್ನಡ ನಾಡಿನಲ್ಲಿ. ಅದು ಕೂಡ ಕರಾವಳಿ ಕರ್ನಾಟಕದ ಮಂಗಳೂರಿನಲ್ಲಿ. ಇಲ್ಲಿಂದಲೇ ವಿಶ್ವಕ್ಕೆ ಖಾಕಿ ಬಣ್ಣ ಪರಿಚಯವಾಯಿತು. ಇದನ್ನು ಮಂಗಳೂರಿನ ಬಲ್ಮಠದಲ್ಲಿ ನೇಯ್ಗೆ ಕಾರ್ಖಾನೆಯಲ್ಲಿ ಮೊದಲು ಉತ್ಪಾದನೆ ಮಾಡಲಾಯಿತು.

ಕರ್ತವ್ಯನಿರತ ಪೊಲೀಸರು

1834ರಲ್ಲಿ ಬಾಷೆಲ್ ಮಿಷನರಿ ಸಂಸ್ಥೆ ಮಂಗಳೂರಿಗೆ ಪ್ರವೇಶಿಸಿತು. ಈ ಸಂಸ್ಥೆ 1844ರಲ್ಲಿ ಬಲ್ಮಠದಲ್ಲಿ ನೇಯ್ಗೆ ಕಾರ್ಖಾನೆ ಆರಂಭಿಸಿತು. 1852ರಲ್ಲಿ ಜರ್ಮನಿಯಿಂದ ಬಂದ ಜಾನ್ ಎಲರ್ ಅವನ ಸಂಶೋಧನೆಯಿಂದ ಖಾಕಿ ಬಣ್ಣ ಮತ್ತು ಬಟ್ಟೆ ತಯಾರಾಯಿತು. ಕರಾವಳಿಯಲ್ಲಿ ಸಿಗುವ ಗೇರು ಬೀಜದ ಸಿಪ್ಪೆಯಿಂದ ತಯಾರಿಸಲಾದ ರಸ ಹಾಗೂ ಗೇರು ಮರದ ತೊಗಟೆಯಿಂದ ತಯಾರಿಸಲಾದ ರಸ ಮಿಶ್ರಣ ಮಾಡಿ ಖಾಕಿ ಬಣ್ಣ ಕಂಡು ಹಿಡಿಯಲಾಯಿತು. 1852ರಿಂದ ಬಲ್ಮಠದ ನೇಯ್ಗೆ ಕಾರ್ಖಾನೆಯಲ್ಲಿ ಖಾಕಿ ಬಟ್ಟೆ ಉತ್ಪಾದನೆಯನ್ನು ಆರಂಭ ಮಾಡಲಾಯಿತು.

ನಿವೃತ್ತ ಪ್ರಾಂಶುಪಾಲ ಡಾ.ಪೀಟರ್‌ ವಿಲ್ಸನ್‌ ಪ್ರಭಾಕರ್‌ ಪ್ರತಿಕ್ರಿಯೆ

1860ರಲ್ಲಿ ಕೆನರ ಜಿಲ್ಲೆಯ ಪೊಲೀಸರಿಗೆ ಖಾಕಿ ಬಟ್ಟೆಯನ್ನು ಸಮವಸ್ತ್ರ ಮಾಡಲಾಯಿತು. ಮದ್ರಾಸ್ ಪ್ರಾಂತ್ಯದ ಗವರ್ನರ್ ಲಾರ್ಡ್ ರಾಬರ್ಟ್ ಅವರು ಮಂಗಳೂರಿನ ನೇಯ್ಗೆ ಕಾರ್ಖಾನೆಗೆ ಭೇಟಿ ನೀಡಿದಾಗ ಖಾಕಿ ಬಣ್ಣ ಮತ್ತು ಬಟ್ಟೆಗೆ ಮನಸೋತಿದ್ದರು. ಅವರು ಮದ್ರಾಸ್​ಗೆ ತೆರಳಿದ ತಕ್ಷಣ ಮದ್ರಾಸ್ ಪ್ರಾಂತ್ಯದ ಬ್ರಿಟಿಷ್ ಸೈನಿಕರಿಗೆ ಸಮವಸ್ತ್ರ ಧರಿಸಲು ಶಿಫಾರಸು ಮಾಡಿ ಬ್ರಿಟಿಷ್ ಸರ್ಕಾರಕ್ಕೆ ಪತ್ರ ಬರೆದರು.

ಬ್ರಿಟಿಷ್ ಸೈನಿಕರ ಸಮವಸ್ತ್ರವಾಗಿ ಆರಂಭ: ಲಾರ್ಡ್ ರಾಬರ್ಟ್ ಅವರು ಮಾಡಿದ ಶಿಫಾರಸನ್ನು ಬ್ರಿಟಿಷ್ ಸರ್ಕಾರ ಅಂಗೀಕರಿಸಿ ಮದ್ರಾಸ್ ಪ್ರಾಂತ್ಯದ ಸೈನಿಕರ ಸಮವಸ್ತ್ರವಾಗಿ ಆರಂಭಿಸಲಾಯಿತು. ಆ ಬಳಿಕ ಲಾರ್ಡ್ ರಾಬರ್ಟ್ ಇಡೀ ಪ್ರಪಂಚದ ಎಲ್ಲ ಬ್ರಿಟಿಷರ ಸೈನಿಕರ ಸಮವಸ್ತ್ರವಾಗಿ ಖಾಕಿ ಬಟ್ಟೆ ಮಾಡುವಂತೆ ಶಿಫಾರಸು ಮಾಡಿದರು. ಅದನ್ನು ಕೂಡ ಬ್ರಿಟಿಷ್ ಸರ್ಕಾರ ಅಂಗೀಕರಿಸಿತು. ಈ ಮೂಲಕ ಪ್ರಪಂಚದ ವಿವಿಧ ಮೂಲೆಗಳಲ್ಲಿ ಇದ್ದ ಬ್ರಿಟಿಷ್ ಸೈನಿಕರಿಗೆ ಖಾಕಿ ಬಟ್ಟೆಗಳನ್ನು ಯೂನಿಫಾರ್ಮ್ ಮಾಡಲಾಯಿತು.

ಮಹಿಳಾ ಪೊಲೀಸರು

ವಿಶ್ವಕ್ಕೆ ಮಂಗಳೂರಿನ ‌ಕೊಡುಗೆ: ಈ ಬಗ್ಗೆ ಪಿಹೆಚ್​ಡಿ ಅಧ್ಯಯನ ಮಾಡಿರುವ ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಪೀಟರ್‌ ವಿಲ್ಸನ್‌ ಪ್ರಭಾಕರ್‌ ಅವರು ಮಾತನಾಡಿ, 'ಬಾಷೆಲ್ ಮಿಷನರಿ ಸಂಸ್ಥೆ ಮಂಗಳೂರಿನಲ್ಲಿ ಖಾಕಿ ಬಣ್ಣ ಮತ್ತು ಬಟ್ಟೆ ಸಂಶೋಧಿಸಿ ಪ್ರಪಂಚಕ್ಕೆ ಪರಿಚಯಿಸಿದೆ. 1852 ಆರಂಭಿಸಲಾದ ಖಾಕಿ ಸಮವಸ್ತ್ರ ಈಗಲೂ ಹಲವು ದೇಶಗಳಲ್ಲಿ ಉಳಿದಿದೆ. ಇದು ವಿಶ್ವಕ್ಕೆ ಮಂಗಳೂರಿನ ‌ಕೊಡುಗೆ. ಸಾಂಸ್ಕೃತಿಕ ಮತ್ತು ಪಾರಂಪರಿಕವಾಗಿ ಇರಬೇಕಾದ ಹೆಗ್ಗುರುತು. ಇದು ಕರಾವಳಿಯ ಅಸ್ಮಿತೆ. ಏಕ ಸಮವಸ್ತ್ರ ನೀತಿ ಜಾರಿ ವೇಳೆ ಇದೇ ಸಮವಸ್ತ್ರವನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು.

ಪೊಲೀಸ್‌ ಇಲಾಖೆಯಲ್ಲಿ ಮಾತ್ರವಲ್ಲ ಖಾಕಿ ಜಮಾನ: ಖಾಕಿ ಬಣ್ಣ ಪೊಲೀಸ್ ಇಲಾಖೆಯನ್ನು ಆಕರ್ಷಿಸಿದ್ದು ಮಾತ್ರವಲ್ಲದೆ, ಆಚೆಗೂ ವಿಸ್ತರಿಸಿದೆ. ಖಾಕಿ ಬಟ್ಟೆಯನ್ನು ಸಾರಿಗೆ, ಪೊಲೀಸ್, ಅಂಚೆ, ಡ್ರೈವರ್, ಕಂಡಕ್ಟರ್ ಹೀಗೆ ಅನೇಕರು ಬಳಕೆ ಮಾಡುತ್ತಿದ್ದಾರೆ. ಹೆಚ್ಚಿನ ಶ್ರಮಜೀವಿಗಳ, ದಿನನಿತ್ಯ ಬಟ್ಟೆ ಒಗೆಯಲು ಸಾಧ್ಯವಿಲ್ಲದ ಕಡೆಯಲ್ಲಿ ಕರ್ತವ್ಯ ನಿರ್ವಹಿಸುವವರು, ಚಿಕ್ಕ ಮಕ್ಕಳ ಬಟ್ಟೆಗಳು ಬೇಗನೆ ಕೊಳೆ ಆಗುವುದರಿಂದ ಖಾಕಿ ಬಟ್ಟೆಯಲ್ಲಿ ಅವರ ಬಟ್ಟೆಯ ಕೊಳೆ ಎದ್ದು ಕಾಣುವುದಿಲ್ಲ. ಹೀಗಾಗಿ ಇದು ಪ್ರಪಂಚದಲ್ಲಿ ಹೆಚ್ಚಿನ ಜನರಿಗೆ ಸಮವಸ್ತ್ರವಾಗಿದೆ. ಇಂತಹ ಒಂದು ಕೊಡುಗೆಯನ್ನು ಮಂಗಳೂರು ನೀಡಿದೆ ಎಂಬುದು ಗಮನಾರ್ಹ.

ಇದನ್ನೂ ಓದಿ: ಪೊಲೀಸರಿಗೆ ದೇಶಾದ್ಯಂತ ಒಂದೇ ರೀತಿಯ ಸಮವಸ್ತ್ರ: ಪ್ರಧಾನಿ ಮೋದಿ ಪ್ರಸ್ತಾಪ

Last Updated : Nov 14, 2022, 1:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.