ETV Bharat / state

ಬೆಳ್ತಂಗಡಿಯಲ್ಲಿ ಶಿಕ್ಷಕನ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

author img

By

Published : May 29, 2019, 4:23 AM IST

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡೂರಿನಲ್ಲಿ ನಡೆದ ಶಿಕ್ಷಕರೊಬ್ಬರ ಕೊಲೆ ಪ್ರಕರಣದ ಇಬ್ಬರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಲೆಯಾದ ವಿಕ್ರಮ್ ಜೈನ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡೂರಿನಲ್ಲಿ ನಡೆದ ಶಿಕ್ಷಕರೊಬ್ಬರ ಕೊಲೆ ಪ್ರಕರಣದ ಇಬ್ಬರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮುಂಡೂರು ನಿವಾಸಿ ವಿಕ್ರಮ್ ಜೈನ್ (40) ಎಂಬುವರ ಕೊಲೆ ನಡೆದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ಜಾಡು ಹಿಡಿದ ಬೆಳ್ತಂಗಡಿ ಪೊಲೀಸರು, ಬೈಂದೂರು ರೈಲ್ವೆ ನಿಲ್ದಾಣದಲ್ಲಿ ಕೊಲೆಯಲ್ಲಿ ಭಾಗಿಯಾಗಿದ್ದ ನಾಗೇಶ್ ಮತ್ತು ಡೀಕಯ್ಯ ಎಂಬವರನ್ನು ಬಂಧಿಸಿದ್ದಾರೆ.

ಕೊಲೆ ಆರೋಪಿಗಳು ಕೊಲೆಯಾದ ಬಳಿಕ ಮಂಗಳೂರಿಗೆ ಬಂದು ಮಂಗಳೂರಿನಿಂದ ಮುಂಬೈಗೆ ಪರಾರಿಯಾಗಲು ಯೋಜನೆ ರೂಪಿಸಿದ್ದರು. ಆದ್ರೆ ಬೆಳ್ತಂಗಡಿ ಸರ್ಕಲ್ ಇನ್ಸ್​ಪೆಕ್ಟರ್ ಸಂದೇಶ್ ಪಿ.ಜಿ. ಮತ್ತು ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Intro:ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡೂರಿನಲ್ಲಿ ಶಿಕ್ಷಕರೊಬ್ಬರನ್ನು ಹತ್ಯೆಗೈದ ಇಬ್ಬರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.Body:
ನಿನ್ನೆ ಮಧ್ಯರಾತ್ರಿ ಮುಂಡೂರು ನಿವಾಸಿ ವಿಕ್ರಮ್ ಜೈನ್ (40) ಕೊಲೆ ನಡೆದಿದ್ದು ಆರೋಪಿಗಳನ್ನು ಬೆನ್ನಟ್ಟಿದ್ದ ಪೊಲೀಸರು ಪರಾರಿಯಾಗುತ್ತಿದ್ದ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳ ಜಾಡು ಹಿಡಿದ ಬೆಳ್ತಂಗಡಿ ಪೊಲೀಸರು ಬೈಂದೂರು ರೈಲ್ವೆ ನಿಲ್ದಾಣದಲ್ಲಿ ಕೊಲೆಯಲ್ಲಿ ಭಾಗಿಯಾದ ನಾಗೇಶ್ ಮತ್ತು ಡೀಕಯ್ಯ ಎಂಬವರನ್ನು ಬಂಧಿಸಿದ್ದಾರೆ. ಆರೋಪಿಗಳು ಕೊಲೆ ನಡೆಸಿದ ಬಳಿಕ ಮಂಗಳೂರಿಗೆ ಬಂದು ಮಂಗಳೂರಿನಿಂದ ಮುಂಬಯಿಗೆ ರೈಲಿನಲ್ಲಿ ಪರಾರಿಯಾಗುತ್ತಿದ್ದರು. ಆರೋಪಿಗಳನ್ನು ಕೊಲೆ ನಡೆದ ಕೆಲವೆ ಗಂಟೆಗಳಲ್ಲಿ ಬಂಧಿಸುವಲ್ಲಿ ಬೆಳ್ತಂಗಡಿ ಸರ್ಕಲ್ ಇನ್ಸ್ ಪೆಕ್ಟರ್ ಸಂದೇಶ್ ಪಿ ಜಿ ಮತ್ತು ತಂಡ ಯಶಸ್ವಿಯಾಗಿದೆ.

Photo- ಕೊಲೆಯಾದ ವಿಕ್ರಮ್ ಜೈನ್

Reporter- vinodpuduConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.