ETV Bharat / state

ಸುಳ್ಯ ಬಳಿ ಮದುವೆಗೆ ಹೊರಟ ಕಾರು ಅಪಘಾತ: ತಾಯಿ-ಮಗು ದುರ್ಮರಣ

author img

By

Published : Dec 12, 2022, 6:22 PM IST

ಮದುವೆಗೆ ಹೊರಟ ಕಾರು ಪಲ್ಟಿಯಾಗಿ ತಾಯಿ ಹಾಗೂ ಪುಟ್ಟ ಮಗು ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಸುಳ್ಯ ಬಳಿ ಸಂಭವಿಸಿದೆ.

mother-and-child-died-as-car-overturns-near-sulya
ಸುಳ್ಯ ಬಳಿ ಮದುವೆಗೆ ಹೊರಟ ಕಾರು ಪಲ್ಟಿ

ಸುಳ್ಯ(ದಕ್ಷಿಣ ಕನ್ನಡ): ಮದುವೆಗೆ ತೆರಳುತ್ತಿದ್ದ ಇನ್ನೋವಾ ಕಾರು ಅಪಘಾತಕ್ಕೀಡಾದ ಪರಿಣಾಮ ತಾಯಿ ಹಾಗೂ ಪುಟ್ಟ ಮಗು ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಸುಳ್ಯ ಸಮೀಪದ ಜಾಲ್ಸುರು - ಕಾಸರಗೋಡು ರಸ್ತೆಯಲ್ಲಿ ಸೋಮವಾರ ಸಂಭವಿಸಿದೆ.

ಪರಪ್ಪು ನಿವಾಸಿ ಶಾನ್ ಎಂಬುವರ ಪತ್ನಿ ಶಾಹಿನಾ (28) ಮತ್ತು ಅವರ ಮೂರು ವರ್ಷದ ಮಗು ಶಾಜಾ ಮೃತಪಟ್ಟವರು ಎಂದು ತಿಳಿದುಬಂದಿದೆ. ಇನ್ನೋವಾ ಕಾರಿನಲ್ಲಿದ್ದ ಇತರ ನಾಲ್ವರಿಗೆ ಗಂಭೀರ ಗಾಯಗಳಾಗಿದೆ. ಗಾಯಾಳುಗಳನ್ನು ಕಾಸರಗೋಡು ಆಸ್ಪತ್ರೆಗೆ ದಾಖಲಿಸಿ, ಬಳಿಕ ಅಲ್ಲಿಂದ ಮಂಗಳೂರು ಆಸ್ಪತ್ರೆಗೆ ರನಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಯಿ ಮತ್ತು ಮಗುವಿನ ಮೃತದೇಹಗಳನ್ನು ಸುಳ್ಯ ಕೆವಿಜಿ ಆಸ್ಪತ್ರೆಗೆ ತರಲಾಗಿದೆ. ಘಟನೆಯು ಕೇರಳದ ಅದೂರು ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ: ಅಡುಗೆ ಮಾಡುತ್ತಿರುವಾಗ ಸಿಲಿಂಡರ್ ಸ್ಫೋಟ: ದಾವಣಗೆರೆಯಲ್ಲಿ ಮಗ ಸಾವು, ತಾಯಿ ಸ್ಥಿತಿ ಚಿಂತಾಜನಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.