ETV Bharat / state

ತಡರಾತ್ರಿ 2 ಗಂಟೆವರೆಗೆ ಪಣಂಬೂರಿನ ಎಸಿಪಿ‌ ಕಚೇರಿಯಲ್ಲಿ‌ ಆದಿತ್ಯರಾವ್ ವಿಚಾರಣೆ

author img

By

Published : Jan 23, 2020, 10:54 AM IST

ನಗರದ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಆರೋಪಿಯನ್ನು ನಿನ್ನೆ(ಬುಧವಾರ) ರಾತ್ರಿ ಪಣಂಬೂರಿನಲ್ಲಿರುವ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಯ ಸ್ಪೆಷಲ್ ಸೆಲ್ ನಲ್ಲಿ ಇರಿಸಲಾಗಿತ್ತು.‌

Aditya to appear in court today
ಆರೋಪಿ ಆದಿತ್ಯ ರಾವ್

ಮಂಗಳೂರು: ನಗರದ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಆರೋಪಿಯನ್ನು ತಡರಾತ್ರಿ 2 ಗಂಟೆಯವರೆಗೂ ಮಂಗಳೂರು ಆಯುಕ್ತ ಡಾ.ಪಿ.ಎಸ್.ಹರ್ಷ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Aditya to appear in court today
ಆರೋಪಿ ಆದಿತ್ಯ ರಾವ್

ಈ ಸಂದರ್ಭ ಆರೋಪಿ ಘಟನೆಯ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದು, ತಪ್ಪಾಯ್ತು ಎಂದು ಹೇಳುತ್ತಿದ್ದ ಎಂಬ ಮಾಹಿತಿ ದೊರೆತಿದೆ.

ಆರೋಪಿಯನ್ನು ಮಂಗಳೂರು ಕಮಿಷನರ್ ನೇತೃತ್ವದ ಆರು ಜನ ಅಧಿಕಾರಿಗಳ ತಂಡ ಪಣಂಬೂರಿನ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಯ ಮೊದಲನೆೇ ಮಹಡಿಯಲ್ಲಿ‌ ವಿಚಾರಣೆ ನಡೆಸಿದೆ. ಬಳಿಕ ಆತನಿಗೆ ಅಲ್ಲೇ ಮಲಗಲು‌ ವ್ಯವಸ್ಥೆ ಮಾಡಲಾಗಿದೆ. ಈ ಸಂದರ್ಭ ಆತನ ಮೇಲೆ ತೀವ್ರ ನಿಗಾ ಇರಿಸಲಾಗಿದ್ದು, ಇಬ್ಬರು ಪಿಎಸ್ಐ, 10 ಪಿಸಿಗಳ ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.

ಇಂದು ಮಧ್ಯಾಹ್ನ ಕೋರ್ಟ್‌ಗೆ ಹಾಜರು:

ಮಧ್ಯಾಹ್ನದ ಹೊತ್ತಿಗೆ ಪೊಲೀಸರು ಆರೋಪಿಯನ್ನು 6ನೇ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

Intro:ಮಂಗಳೂರು: ನಗರದ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಆರೋಪಿಯನ್ನು ನಿನ್ನೆ ರಾತ್ರಿ ಪಣಂಬೂರಿನಲ್ಲಿರುವ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಯ ಸ್ಪೆಷಲ್ ಸೆಲ್ ನಲ್ಲಿ ಇರಿಸಲಾಗಿತ್ತು.‌ ಅರೋಪಿಯನ್ನು‌ ನಿನ್ನೆ ತಡರಾತ್ರಿ 2 ಗಂಟೆಯವರೆಗೂ ಮಂಗಳೂರು ಕಮಿಷನರ್ ಡಾ.ಪಿ.ಎಸ್.ಹರ್ಷ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂದರ್ಭ ಆರೋಪಿ ಘಟನೆಯ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದು, ತಪ್ಪಾಯ್ತು ಎಂದು ಹೇಳುತ್ತಿದ್ದನೆಂದು ತಿಳಿದುಬಂದಿದೆ.


Body:ಆರೋಪಿಯನ್ನು ಮಂಗಳೂರು ಕಮಿಷನರ್ ನೇತೃತ್ವದ ಆರು ಜನ ಅಧಿಕಾರಿಗಳ ತಂಡವು ಪಣಂಬೂರಿನ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಯ ಮೊದಲನೆಯ ಮಹಡಿಯಲ್ಲಿ‌ ವಿಚಾರಣೆ ನಡೆಸಿದೆ. ಬಳಿಕ ಅವನಿಗೆ ಅಲ್ಲೇ ಮಲಗಲು‌ ವ್ಯವಸ್ಥೆ ಮಾಡಲಾಗಿದೆ. ಈ ಸಂದರ್ಭ ಆತನ ಮೇಲೆ ತೀವ್ರ ನಿಗಾ ಇರಿಸಲಾಗಿತ್ತು. 2 ಪಿಎಸ್ಐ, 10 ಪಿಸಿಗಳ ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.

ಲಪಣಂಬೂರಿನ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಯ ಸುತ್ತಲೂ ಪೊಲೀಸ್ ಬಿಗಿ‌ಭದ್ರತೆ ಇರಿಸಲಾಗಿದೆ. ಇಂದು ಪೊಲೀಸರು ಆತನನ್ನು ಮತ್ತೆ ವಿಚಾರಣೆ ನಡೆಸಿ ಮಾಹಿತಿ‌ ಕಲೆ ಹಾಕಲಿದ್ದಾರೆ. ಮಧ್ಯಾಹ್ನ ಹೊತ್ತಿಗೆ ಆತನನ್ನು 6ನೇ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿದಲಾಗುವುದು.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.