ಬೆಳ್ತಂಗಡಿ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಇದೇ ನ.29 ರಿಂದ ಆರಂಭಗೊಂಡು ಡಿ. 4ರ ವರೆಗೆ ನಡೆಯಲಿವೆ. ಡಿ. 3 ರಂದು ಶುಕ್ರವಾರ ಲಕ್ಷ ದೀಪೋತ್ಸವ ನಡೆಯಲಿರುವುದರಿಂದ ಸಿದ್ಧತೆಗಳು ಭರದಿಂದ ಸಾಗಿವೆ.
ಡಿ. 2 ರಂದು ಗುರುವಾರ ಸಂಜೆ 5 ಗಂಟೆಗೆ ಅಮೃತವರ್ಷಿಣಿ ಸಭಾ ಭವನದಲ್ಲಿ ನಡೆಯಲಿರುವ ಸರ್ವಧರ್ಮ ಸಮ್ಮೇಳನದ 89ನೇ ಅಧಿವೇಶನವನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸುವರು. ಬೆಂಗಳೂರಿನ ಎಸ್. ವ್ಯಾಸ ಯೋಗ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ರಾಮಚಂದ್ರ ಭಟ್ಟ ಅಧ್ಯಕ್ಷತೆ ವಹಿಸುವರು.
ಸಾಗರದ ಖ್ಯಾತ ಸಾಹಿತಿ ಸಫ್ರಾಜ್ ಚಂದ್ರಗುತ್ತಿ, ಮೈಸೂರು ವಿ.ವಿ.ಯ ನಿವೃತ್ತ ಪ್ರಾಧ್ಯಾಪಕಿ ಡಾ. ಎಂ. ಎಸ್. ಪದ್ಮ ಮತ್ತು ಶಿವಮೊಗ್ಗ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವೀರೇಶ್ ವಿ. ಮೊರಾಸ್ ಧಾರ್ಮಿಕ ಉಪನ್ಯಾಸ ನೀಡುವರು.
ಡಿ. 3 ರಂದು ಸಾಹಿತ್ಯ ಸಮ್ಮೇಳನದ 89ನೇ ಅಧಿವೇಶನವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಉದ್ಘಾಟಿಸುವರು. ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಮಲ್ಲೇಪುರಂ ಜಿ. ವೆಂಕಟೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಗರದ ಖ್ಯಾತ ಸಾಹಿತಿ ಡಾ. ಪಿ. ಗಜಾನನ ಶರ್ಮ, ಚಿತ್ರದುರ್ಗದ ಡಾ. ಪಿ. ಚಂದ್ರಿಕಾ ಮತ್ತು ಬೆಂಗಳೂರಿನ ಡಾ. ಕೆ.ಪಿ. ಪುತ್ತೂರಾಯ ಉಪನ್ಯಾಸ ನೀಡುವರು.
ಪ್ರತಿದಿನ ರಾತ್ರಿ 9 ಗಂಟೆಗೆ ನಡೆಯಲಿರುವ ಉತ್ಸವಗಳು..
- ನ. 29 ಸೋಮವಾರ: ಹೊಸಕಟ್ಟೆ ಉತ್ಸವ
- ನ.30: ಮಂಗಳವಾರ: ಕೆರೆಕಟ್ಟೆ ಉತ್ಸವ
- ಡಿ.1: ಬುಧವಾರ: ಲಲಿತೋದ್ಯಾನ ಉತ್ಸವ
- ಡಿ. 2: ಗುರುವಾರ: ಕಂಚಿಮಾರುಕಟ್ಟೆ ಉತ್ಸವ
- ಡಿ.3, ಶುಕ್ರವಾರ: ಗೌರಿಮಾರುಕಟ್ಟೆ ಉತ್ಸವ ಮತ್ತು ಲಕ್ಷದೀಪೋತ್ಸವ
- ಡಿ. 4: ಶನಿವಾರ: ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆಯೊಂದಿಗೆ ಲಕ್ಷ ದೀಪೋತ್ಸವ ಕಾರ್ಯಕ್ರಮಗಳು ಸಮಾಪನಗೊಳ್ಳುತ್ತವೆ..
ಅಮೃತವರ್ಷಿಣಿ ಸಭಾ ಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು...
- ಡಿ. 1, ಬುಧವಾರ: ಬೆಂಗಳೂರಿನ ಡಾ. ಪದ್ಮಿನಿ ಮತ್ತು ಬಳಗದವರಿಂದ ಗಾಯನ ಮತ್ತು ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನದ ಕಲಾವಿದರಿಂದ ನೃತ್ಯ ರೂಪಕ
- ಡಿ.2, ಗುರುವಾರ: ತ್ರಿಶೂರಿನ ಶ್ರೀಕೃಷ್ಣ ಮೋಹನ್ ಮತ್ತು ಶ್ರೀ ರಾಮ್ ಕುಮಾರ್ ಮೋಹನ್ ಬಳಗದವರಿಂದ ಶಾಸ್ತ್ರೀಯ ಸಂಗೀತ ಹಾಗೂ ಮಂಗಳೂರಿನ ಸನಾತನ ನಾಟ್ಯಾಲಯ ಕಲಾವಿದರಿಂದ ನುಡಿನಾದ ನಾಟ್ಯಾಮೃತ.
- ಡಿ.3: ಶುಕ್ರವಾರ ಬೆಂಗಳೂರಿನ ಮಂಜುಳಾ ಪರಮೇಶ್ ನಿರ್ದೇಶನದಲ್ಲಿ ನೃತ್ಯ ಸಂಭ್ರಮ ಮತ್ತು ಶ್ವೇತಾ ದೇವನಹಳ್ಳಿ ಮತ್ತು ತಂಡದವರಿಂದ ಗಾನ ಲಹರಿ ಕಾರ್ಯಕ್ರಮಗಳು ನಡೆಯಲಿದೆ.