ETV Bharat / state

ಕಡಂದಲೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪಂಕ್ತಿಬೇಧ ಆರೋಪ

author img

By

Published : Dec 20, 2020, 10:49 PM IST

ಚಂಪಾ ಷಷ್ಠಿ ಮಹೋತ್ಸವದ ಅಂಗವಾಗಿ ದೇವಳದಲ್ಲಿ ಇಂದು ಅನ್ನ ಸಂತರ್ಪಣೆ ನಡೆದಿತ್ತು. ಈ ಸಂದರ್ಭದಲ್ಲಿ ಪಂಕ್ತಿಬೇಧ ಮಾಡಿರುವ ಬಗ್ಗೆ ಆಕ್ಷೇಪ ಮಾಡಲಾಗಿದೆ ಎನ್ನಲಾಗಿದೆ.

kadandale-subandramanya-swamy-temple-issue
ಕಡಂದಲೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪಂಕ್ತಿಬೇಧ ಆರೋಪ..

ಮಂಗಳೂರು: ಕಡಂದಲೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಮಹೋತ್ಸವದ ಅನ್ನಸಂತರ್ಪಣೆ ವೇಳೆ ಪಂಕ್ತಿಬೇಧ ನಡೆಸಲಾಗಿದೆ ಎಂದು ಸ್ಥಳದಲ್ಲಿದ್ದ ಹಲವರು ಆರೋಪಿಸಿ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಡಂದಲೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪಂಕ್ತಿಬೇಧ ಆರೋಪ

ಚಂಪಾ ಷಷ್ಠಿ ಮಹೋತ್ಸವದ ಅಂಗವಾಗಿ ದೇವಳದಲ್ಲಿ ಇಂದು ಅನ್ನ ಸಂತರ್ಪಣೆ ನಡೆದಿತ್ತು. ಈ ಸಂದರ್ಭದಲ್ಲಿ ಪಂಕ್ತಿಬೇಧ ಮಾಡಿರುವ ಬಗ್ಗೆ ಆಕ್ಷೇಪ ಮಾಡಲಾಗಿದ್ದು, ಈ ಬಗ್ಗೆ ವಾಗ್ವಾದವೂ ನಡೆದಿವೆ‌. ಕಳೆದ ವರ್ಷವೂ ಇದೇ ರೀತಿ ಪಂಕ್ತಿಬೇಧದ ವಿಚಾರದಲ್ಲಿ ವಿವಾದ ಉಂಟಾಗಿತ್ತು.

ಓದಿ: ಶಬರಿಮಲೆ ದೇವಾಲಯ ಭೇಟಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ

ಆಗ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಬಳಿಕ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಮುಂದೆ ಇಲ್ಲಿ ಪಂಕ್ತಿಬೇಧಕ್ಕೆ ಅವಕಾಶ ನೀಡುವುದಿಲ್ಲವೆಂದು ಭರವಸೆ ನೀಡಿದ್ದರು. ಈ ಬಾರಿ ಮತ್ತೆ ಕೆಲವರಿಗೆ ಪ್ರತ್ಯೇಕ ಭೋಜನದ ವ್ಯವಸ್ಥೆ ಮಾಡಿರುವುದು ಕೆಲವರ ಆಕ್ಷೇಪಕ್ಕೆ ಕಾರಣವಾಗಿದೆ. ಬಳಿಕ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.