ETV Bharat / state

ಬಂಟ್ವಾಳ : ಹೆದ್ದಾರಿ ಬದಿ 30 ಅಡಿ ಆಳಕ್ಕೆ ಉರುಳಿದ ಟ್ಯಾಂಕರ್, ಪ್ರಾಣಾಪಾಯದಿಂದ ಚಾಲಕ ಪಾರು..

author img

By

Published : Nov 14, 2021, 10:51 PM IST

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ (Mangalore-Bangalore National Highway)ಯ ಬುಡೋಳಿ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್​ವೊಂದು ಪಲ್ಟಿಯಾಗಿದೆ..

gas-tanker-overturned
ಗ್ಯಾಸ್ ಟ್ಯಾಂಕರ್ ಪಲ್ಟಿ

ಬಂಟ್ವಾಳ (ದ.ಕ): ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್​​(Gas tanker)ವೊಂದು ಹೆದ್ದಾರಿ ಬದಿಯ 30 ಅಡಿ ಆಳಕ್ಕೆ ಉರುಳಿ ಬಿದ್ದ ಘಟನೆ ತಾಲೂಕಿನಲ್ಲಿ ನಡೆದಿದೆ.

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬುಡೋಳಿ ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಬೆಂಗಳೂರು ಕಡೆಯಿಂದ ಗ್ಯಾಸ್ ಖಾಲಿ ಮಾಡಿ ಮಂಗಳೂರಿಗೆ ತೆರಳುತ್ತಿದ್ದ ವೇಳೆ ಈ ಘಟನೆ ಜರುಗಿದೆ.

ಘಟನೆಯಿಂದ ಚಾಲಕ ಪವಾಡ ಸದೃಶ ರೀತಿ ಪಾರಾಗಿದ್ದಾನೆ. ಪ್ರಪಾತದಲ್ಲಿ ಬಿದ್ದಿದ್ದ ಚಾಲಕನನ್ನು ಸ್ಥಳೀಯರು ರಕ್ಷಿಸಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ ಎನ್ನಲಾಗಿದೆ.

ಓದಿ: ಮಂಗಳೂರು: ಲಾರಿಯಲ್ಲಿದ್ದ ಗ್ರಾನೈಟ್ ಮೈಮೇಲೆ ಬಿದ್ದು ಯುವಕ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.