ETV Bharat / state

ಕಡಬದಲ್ಲಿ ಧ್ವಜಾರೋಹಣ ವೇಳೆ ಮೃತಪಟ್ಟ ಮಾಜಿ ಯೋಧನಿಗೆ ಅಂತಿಮ ವಿದಾಯ

author img

By

Published : Aug 15, 2022, 8:38 PM IST

ತಹಶೀಲ್ದಾರ್​ ಕಚೇರಿಯಲ್ಲಿ ಧ್ವಜಾರೋಹಣ ಸಂದರ್ಭದಲ್ಲಿ ಕುಸಿದು ಬಿದ್ದು ಮೃತಪಟ್ಟ ನಿವೃತ್ತ ಸೈನಿಕನ ಅಂತ್ಯಕ್ರಿಯೆಯನ್ನು ಸೇನಾ ಗೌರವಗಳೊಂದಿಗೆ ನೆರೆವೇರಿಸಲಾಯಿತು.

kn_dk_02_army funeral_avb_vis_kac10008
ಧ್ವಜಾರೋಹಣ ವೇಳೆ ಮೃತಪಟ್ಟ ಮಾಜಿ ಯೋಧ

ದಕ್ಷಿಣ ಕನ್ನಡ: ಕಡಬ ತಹಶೀಲ್ದಾರ್‌ ಕಚೇರಿಯಲ್ಲಿ ಇಂದು ಬೆಳಗ್ಗೆ ಧ್ವಜಾರೋಹಣದ ವೇಳೆ ಕುಸಿದು ಬಿದ್ದು ಅಸ್ವಸ್ಥಗೊಂಡು ಮೃತಪಟ್ಟ ನಿವೃತ್ತ ಸೈನಿಕನ ಪಾರ್ಥಿವ ಶರೀರದ ಅಂತಿಮ ಸಂಸ್ಕಾರ ನೆರವೇರಿದೆ.

ಧ್ವಜಾರೋಹಣ ವೇಳೆ ಮೃತಪಟ್ಟ ಮಾಜಿ ಯೋಧ

ನಿವೃತ್ತ ಸೈನಿಕ ಗಂಗಾಧರ ಗೌಡ ಅವರ ಮೃತದೇಹವನ್ನು ಸಾರ್ವಜನಿಕರ ಅಂತಿಮ ದರ್ಶನಕಾಗಿ ತಹಶೀಲ್ದಾರ್‌ ಕಚೇರಿ ಎದುರು ಇಡಲಾಗಿತ್ತು. ಕುಟುಂಬ ಸದಸ್ಯರು, ಸ್ನೇಹಿತರು ಸೇರಿದಂತೆ ವಿದ್ಯಾರ್ಥಿಗಳು ಯೋಧನ ಅಂತಿಮ ದರ್ಶನ ಪಡೆದರು. ಈ ಸಂದರ್ಭದಲ್ಲಿ ಗಂಗಾಧರ ಅಮರ್ ರಹೇ, ಭಾರತ್ ಮಾತಾ ಕೀ ಜೈ ಎಂಬ ಘೋಷಣೆಗಳನ್ನು ಕೂಗಿ ಕಂಬನಿ ಮಿಡಿದರು.

ಬಳಿಕ ತಹಶೀಲ್ದಾರ್ ಕಚೇರಿಯಿಂದ ಮುಖ್ಯ ಪೇಟೆಯವರೆಗೆ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು. ನಿವೃತ್ತ ಸೈನಿಕರು ಸೇನಾ ಶಿಷ್ಟಾಚಾರದಂತೆ ಗೌರವ ವಂದನೆ ಸಲ್ಲಿಸಿ, ಮುಳಿಮಜಲಿನ ಅಮೈ ಎಂಬಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಇದನ್ನೂ ಓದಿ: ಟೆರೇಸ್‌ ಮೇಲೆ‌ ರಾಷ್ಟ್ರ ಧ್ವಜ ಕಟ್ಟುವಾಗ ಆಯತಪ್ಪಿ ಬಿದ್ದು ಟೆಕ್ಕಿ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.