ETV Bharat / state

ಮಂಗಳೂರು ಸೆಂಟ್ರಲ್ ರೈಲ್ವೆಯಲ್ಲಿ ಇಲೆಕ್ಟ್ರಾನಿಕ್ ಇಂಟರ್​ಲಾಕ್ ಸಿಗ್ನಲ್ ಆರಂಭ

author img

By

Published : Feb 19, 2021, 12:01 PM IST

ಸೆಂಟ್ರಲ್ ರೈಲ್ವೆ ಹಾಗೂ ನೇತ್ರಾವತಿ ಕ್ಯಾಬಿನ್​ಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆ ಹೊಂದಿರುವ ಇಲೆಕ್ಟ್ರಾನಿಕ್ ಇಂಟರ್​ಲಾಕ್ ಸಿಗ್ನಲ್ ಕಾರ್ಯಾರಂಭಗೊಂಡಿದೆ..

Mangaluru
ಮಂಗಳೂರು ಸೆಂಟ್ರಲ್ ರೈಲ್ವೆ

ಮಂಗಳೂರು : ನಗರ ಸೆಂಟ್ರಲ್ ರೈಲ್ವೆ ಹಾಗೂ ನೇತ್ರಾವತಿ ಕ್ಯಾಬಿನ್​ಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆ ಹೊಂದಿರುವ ಇಲೆಕ್ಟ್ರಾನಿಕ್ ಇಂಟರ್​ಲಾಕ್ ಸಿಗ್ನಲ್ ಕಾರ್ಯಾರಂಭಗೊಂಡಿದೆ‌. ಈ ಮೂಲಕ ರೈಲುಗಳ ಸುಗಮ ಹಾಗೂ ಸುರಕ್ಷತಾ ನಿರ್ವಹಣೆಯ ಮಟ್ಟದಲ್ಲಿ ಮಹತ್ವದ ವ್ಯವಸ್ಥೆಯಾಗಿದೆ.

ಸಾಂಪ್ರದಾಯಿಕ ಪ್ಯಾನೆಲ್ ನಿರ್ವಹಣೆಯ ರೂಟ್ ರಿಲೇ ಇಂಟರ್ ಲಾಕಿಂಗ್ ವ್ಯವಸ್ಥೆಯಡಿ ಈ ಹಿಂದೆ ಇಲ್ಲಿ ಕಾರ್ಯಾಚರಣೆ ನಡೆಯುತ್ತಿತ್ತು. ಇದೀಗ ದಕ್ಷಿಣ ರೈಲ್ವೆ ನಿರ್ಮಾಣ ವಿಭಾಗ ಪಾಲಕ್ಕಾಡ್ ವಿಭಾಗದ ನೆರವಿನೊಂದಿಗೆ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆ ಹೊಂದಿರುವ ಇಲೆಕ್ಟ್ರಾನಿಕ್ ಇಂಟರ್​ಲಾಕ್ ಸಿಗ್ನಲ್ ಮೂಲಕ ಕಾರ್ಯಾಚರಣೆ ಮಾಡಲಾಗುತ್ತಿದೆ.

ಈ ನೂತನ ಇಲೆಕ್ಟ್ರಾನಿಕ್ ಇಂಟರ್​ಲಾಕ್ ಸಿಗ್ನಲ್ ವ್ಯವಸ್ಥೆಯನ್ನು 10 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.