ETV Bharat / state

ಇಂದಿರಾ ಗರೀಬಿ ಹಠಾವೋ ಘೋಷಣೆಯನ್ನು ಜಾರಿಗೆ ತಂದಿದ್ದು ಪ್ರಧಾನಿ ಮೋದಿ: ಅಸ್ಸೋಂ ಸಿಎಂ ಹಿಮಂತ್​ ಬಿಸ್ವಾ ಶರ್ಮಾ

author img

By

Published : May 7, 2023, 3:41 PM IST

Updated : May 7, 2023, 3:58 PM IST

ಕಳೆದ ಒಂದು ವಾರದಿಂದ ಕಾಂಗ್ರೆಸ್ ರ್ಯಾಲಿ ಕರ್ನಾಟಕದಲ್ಲಿ ಕಂಡುಬರುತ್ತಿಲ್ಲ, ಪ್ರಧಾನಿ ಮೋದಿ ರೋಡ್ ಶೋ ಅಭೂತಪೂರ್ವ ಯಶಸ್ಸು ಕಂಡಿದ್ದು ರಾಜ್ಯದಲ್ಲಿ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಅಸ್ಸೋಂ ಮುಖ್ಯಮಂತ್ರಿ ಹಿಮಂತ್​​​ ಬಿಸ್ವಾ​​​ ಶರ್ಮಾ ಹೇಳಿದರು.

dont-compare-bajrang-dal-with-pfi-says-assam-cm-himant-biswa-sharma
ಅಸ್ಸೋಂ ಸಿಎಂ ಹಿಮಾಂತ್ ಬಿಸ್ವಾ ಶರ್ಮಾ

ಅಸ್ಸೋಂ ಸಿಎಂ ಹಿಮಂತ್​ ಬಿಸ್ವಾ ಶರ್ಮಾ

ಮಂಗಳೂರು: ಬಜರಂಗದಳದ ನೈತಿಕ ಪೊಲೀಸ್ ಗಿರಿ ಹಾಗೂ ಪಿಎಫ್ಐ ನಡುವೆ ಹೋಲಿಕೆ ಮಾಡುವುದು ಬೇಡ. ಐಪಿಸಿ ಸೆಕ್ಷನ್ ಹಾಗೂ ಯುಎಪಿಎ ಕಾಯ್ದೆ ಎರಡೂ ಸಂಪೂರ್ಣ ಪ್ರತ್ಯೇಕ. ಆದ್ದರಿಂದ ದೇಶವಿರೋಧಿ ಕೃತ್ಯದಲ್ಲಿ ತೊಡಗಿಸಿಕೊಂಡು ಅಮಾಯಕರನ್ನು ಹತ್ಯೆ ಮಾಡುವ ಪಿಎಫ್ಐನೊಂದಿಗೆ ಬಜರಂಗದಳದ ಹೋಲಿಕೆ ಬೇಡ ಎಂದು ಅಸ್ಸೋಂ ಸಿಎಂ ಹಿಮಂತ್​ ಬಿಸ್ವಾ ಶರ್ಮಾ ತಿಳಿಸಿದರು.

ನಗರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಪಿಎಫ್ಐ ಅನ್ನು ಬಿಜೆಪಿ ಸರ್ಕಾರ ಬ್ಯಾನ್ ಮಾಡಿದಾಗ ಕಾಂಗ್ರೆಸ್ ಸ್ವಾಗತಿಸಿಲ್ಲ. ಆದರೆ ಇದೀಗ ಬಜರಂಗದಳವನ್ನು ಪಿಎಫ್ಐನೊಂದಿಗೆ ತುಲನೆ ಮಾಡುತ್ತಾ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ತನ್ನ‌ ನಿಜ ಬುದ್ಧಿ ತೋರಿಸಿದೆ. ಬಜರಂಗದಳ ಬಲಪಂಥೀಯವಾಗಿರಬಹುದು. ಆದರೆ ಮೂಲಭೂತವಾದಿಯಲ್ಲ. ಕಾಂಗ್ರೆಸ್ ಪಕ್ಷ ಪಿಎಫ್ಐ ಜೊತೆ ಟಿ-20 ಆಟವಾಡುತ್ತಿದೆ. ರಾಜ್ಯದಲ್ಲಿ ಕ್ರೂರವಾಗಿ ಕೊಲೆ ಮಾಡಿರುವ ಪಿಎಫ್ಐ ಕಾರ್ಯಕರ್ತರ ಮೇಲಿನ ಕೇಸ್​ಗಳನ್ನು ಸಿದ್ದರಾಮಯ್ಯ ಸರ್ಕಾರ ವಾಪಸ್ ಪಡೆದುಕೊಂಡಿತ್ತು. ಕಾಂಗ್ರೆಸ್​ ನವರದ್ದು ಹಿಂದೂ ವಿರೋಧಿ ಸಂಸ್ಕೃತಿ. ಆದ್ದರಿಂದಲೇ ಅವರು ಹನುಮಂತನನ್ನು ದ್ವೇಷಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ರಾಹುಲ್ ಗಾಂಧಿಗೇ ಗ್ಯಾರಂಟಿಯಿಲ್ಲ. ಇನ್ನು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ನಂಬೋದು ಹೇಗೆ. ಹಾಗಾಗಿ ಅವರು ಎರಡು ಕ್ಷೇತ್ರದಲ್ಲಿ ಚುನಾವಣೆ ಎದುರಿಸಿದ್ದರು. ಆದರೆ ಅಮೇಥಿಯಲ್ಲಿ ಜನರು ರಾಹುಲ್ ಗಾಂಧಿಯ ಗ್ಯಾರಂಟಿಯನ್ನು ನಂಬಲಿಲ್ಲ. ರಾಹುಲ್ ಗಾಂಧಿಯನ್ನು ಮುನ್ನಲೆಗೆ ತರಲು ಸೋನಿಯಾ ಗಾಂಧಿ 20 ವರ್ಷಗಳಿಂದ ಹೋರಾಡುತ್ತಿದ್ದಾರೆ ಎಂದರು. ಕಳೆದ ಒಂದು ವಾರದಿಂದ ಕಾಂಗ್ರೆಸ್ ರ್ಯಾಲಿ ಕರ್ನಾಟಕದಲ್ಲಿ ಕಂಡುಬರುತ್ತಿಲ್ಲ. ರಾಹುಲ್ ಗಾಂಧಿಯವರು ಕರ್ನಾಟಕ ಚುನಾವಣೆಯಿಂದ ವನವಾಸ ಪಡೆದುಕೊಂಡಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ ಅಭೂತಪೂರ್ವ ಯಶಸ್ಸು ಕಂಡಿದ್ದು, ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಗಳಿಸಲಿದೆ ಎಂದರು.

ಕರ್ನಾಟಕ ಜನರು ಸ್ವಾಭಿಮಾನಿಗಳಾಗಿದ್ದು ಕಾಂಗ್ರೆಸ್​​ನ ಗ್ಯಾರಂಟಿ ರಾಜಕಾರಣವನ್ನು ನಂಬುವುದಿಲ್ಲ. ತಮ್ಮ ಆತ್ಮಾಭಿಮಾನಕ್ಕೆ ಧಕ್ಕೆ ಎಂದೇ ಭಾವಿಸುತ್ತಾರೆ. ರಾಹುಲ್ ಗಾಂಧಿ ಬಂದು ಗ್ಯಾರಂಟಿ ಕೊಡುತ್ತಾರೆ, ಆದರೆ ಅವರಿಗೆ ಗ್ಯಾರಂಟಿ ಕೊಡುವವರು ಯಾರು ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭ ಪಿಎಫ್​​​ಐ ಕಾರ್ಯಕರ್ತರ ಕೇಸನ್ನು ಹಿಂಪಡೆದಿದ್ದನ್ನು ಸ್ಮರಿಸಿದ ಬಿಸ್ವಾ, ಕಾಂಗ್ರೆಸ್ ತನ್ನ ತುಷ್ಟೀಕರಣದ ನೀತಿಯನ್ನು ಇಲ್ಲೇ ಪ್ರದರ್ಶಿಸಿದೆ. ಹೀಗಿರುವಾಗ ಅಧಿಕಾರಕ್ಕೆ ಬಂದರೆ ಬಜರಂಗದಳವನ್ನು ಟಾರ್ಗೆಟ್ ಮಾಡುವ ಮೂಲಕ ಮತ್ತೆ ಅದನ್ನೇ ಮುಂದುವರಿಸಬಹುದು ಎಂದು ಅಸ್ಸೋಂ ಸಿಎಂ ಹೇಳಿದರು.

1972ರಲ್ಲಿ ಬಡತನವನ್ನು ತೊಲಗಿಸುವ ಗರೀಬಿ ಹಠಾವೊ ಘೋಷಣೆಯನ್ನು ಆಗಿನ ಪ್ರಧಾನಮಂತ್ರಿ ಇಂದಿರಾಗಾಂಧಿ ಮಾಡಿದ್ದರು. ಆ ಸಂದರ್ಭವೇ ಹೇಳಿದ್ದ ಗರೀಬಿ ಹಠಾವೊ ಘೋಷಣೆ ಅಕ್ಷರಶಃ ಜಾರಿ ಆಗಲೇ ಇಲ್ಲ. ಅದನ್ನು ಸರಿಯಾಗಿ ತನ್ನ ಯೋಜನೆಗಳ ಮೂಲಕ ಜಾರಿ ಮಾಡಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ. ಇಂದಿರಾ ಹೇಳಿದ್ದನ್ನು ಮಾಡಿ ತೋರಿಸಿದ್ದು ಮೋದಿ ಎಂದು ಬಿಸ್ವಾ ಹೇಳಿದರು.

ಇದನ್ನೂ ಓದಿ: ಪ್ರಣಾಳಿಕೆಯಲ್ಲಿ ಘೋಷಿಸಿದ ಯೋಜನೆಗಳನ್ನು ಕಾಂಗ್ರೆಸ್​ ಜಾರಿಗೆ ತರಲಿದೆ : ಭೂಪೇಶ್ ಬಘೇಲ್

Last Updated : May 7, 2023, 3:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.