ETV Bharat / state

ಪಣಂಬೂರು ಬೀಚ್​ನಲ್ಲಿ ಮಕ್ಕಳ ಸರ್ಫಿಂಗ್ ... ಸಮುದ್ರದಲೆಗಳ ಮಧ್ಯೆ ಚಿಣ್ಣರ ಸಾಹಸ

author img

By

Published : May 19, 2019, 11:18 PM IST

16 ವರ್ಷದೊಳಗಿನ ಮಕ್ಕಳ ಸರ್ಫಿಂಗ್ ಸ್ಪರ್ಧೆಯನ್ನು ಭಾನುವಾರ ಪಣಂಬೂರಿನಲ್ಲಿ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ 23 ಮಕ್ಕಳು ಪಾಲ್ಗೊಂಡು ಕಡಲಳೆಗಳ ಮಧ್ಯೆ ಸಾಹಸ ಪ್ರದರ್ಶಿಸಿದರು.

ಪಣಂಬೂರು ಕಡಲಿನಲ್ಲಿ ಮಕ್ಕಳ ಸರ್ಫಿಂಗ್ ಸ್ಪರ್ಧೆ

ಮಂಗಳೂರು: ನಗರದ ಪಣಂಬೂರು ಕಡಲಿನಲ್ಲಿ 'ಮಂತ್ರ ಗ್ರೋಮ್ ಸರ್ಚ್' 13-16 ವಯಸ್ಸಿನ ಮಕ್ಕಳ ಸರ್ಫಿಂಗ್ ಸ್ಪರ್ಧೆಯು ಭಾನುವಾರ ಬೆಳಗಿನಿಂದ ಮಧ್ಯಾಹ್ನದವರೆಗೆ ಜರುಗಿತು.

ಸರ್ಫಿಂಗ್ ಸ್ವಾಮಿ ಫೌಂಡೇಷನ್, ಮಂತ್ರ ಸರ್ಫ್ ಕ್ಲಬ್, ಅಡ್ವೆಂಚರ್ ವರ್ಕ್ಸ್, ಥಂಡರ್ ಮಂಕಿ, ಫಯರ್ ವೈರ್, ಸರ್ಫ್ ಬೋರ್ಡ್ ವತಿಯಿಂದ ನಡೆದ ಈ ಸರ್ಫಿಂಗ್ ಸ್ಪರ್ಧೆಯಲ್ಲಿ ಮಂಗಳೂರು, ಮುಲ್ಕಿ, ಪಣಂಬೂರು ತಣ್ಣೀರುಬಾವಿ, ಬೆಂಗರೆ ಪರಿಸರದ ಸುಮಾರು 50 ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು.

ಪಣಂಬೂರು ಕಡಲಿನಲ್ಲಿ ಮಕ್ಕಳ ಸರ್ಫಿಂಗ್ ಸ್ಪರ್ಧೆ

ಈ ಸಂದರ್ಭ ಪಣಂಬೂರು ಬೀಚ್ ಪ್ರವಾಸೋದ್ಯಮ ಅಭಿವೃದ್ಧಿ ‌ನಿರ್ವಹಣಾ ಸಿಇಒ ಯತೀಶ್ ಬೈಕಂಪಾಡಿ ಮಾತನಾಡಿ, 16 ವರ್ಷಕ್ಕಿಂತ ಕೆಳಗಿನ ಮಕ್ಕಳ ಸರ್ಫಿಂಗ್ ಸ್ಪರ್ಧೆಯನ್ನು ನಾವು ಪಣಂಬೂರಿನಲ್ಲಿ ಆಯೋಜಿಸಿದ್ದೆವು. 23 ಸ್ಪರ್ಧಾಳುಗಳು ನೋಂದಣಿ ಮಾಡಿಕೊಂಡಿದ್ದರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗ ಆಡಿರುವ ಸ್ಪರ್ಧಾಳುಗಳಲ್ಲಿ 4-5 ಮಕ್ಕಳು ರಾಷ್ಟ್ರೀಯ ಮಟ್ಟದ ಪಂದ್ಯಾಟಗಳಲ್ಲಿ ಭಾಗವಹಿಸುವ ಎಲ್ಲಾ ಅರ್ಹತೆಗಳನ್ನು ಹೊಂದಿದ್ದಾರೆ‌. ಇವರು ಸರ್ಫಿಂಗ್​ನಲ್ಲಿ ಸಮರ್ಥರಾಗಿರುವ ಚೆನ್ನೈ, ಕೊಲ್ಲಂ ಮುಂತಾದ ಕಡೆಯ ಸ್ಪರ್ಧಿಗಳಿಗೆ ಸರಿಸಾಟಿಯಾಗಿ ನಿಲ್ಲಬಲ್ಲವರಾಗಿದ್ದಾರೆ. ಕಳೆದ ಬಾರಿ ನಡೆದಿದ್ದ ಸರ್ಫಿಂಗ್ ಸ್ಪರ್ಧೆಯಲ್ಲಿ ಪಣಂಬೂರಿನ ಬಾಲಕನೋರ್ವ ದ್ವಿತೀಯ ಸ್ಥಾನ ಪಡೆದಿದ್ದ. ಈ ಸಲ ಇನ್ನಷ್ಟು ಸ್ಪರ್ಧೆಗಳಲ್ಲಿ ಗೆಲುವಿನ ನಿರೀಕ್ಷೆ ಹೊಂದಲಾಗಿದೆ ಎಂದು ತಿಳಿಸಿದರು.

ಅಂತಾರಾಷ್ಟ್ರೀಯ ಮಟ್ಟದ ಸರ್ಫಿಂಗನ್ನು ಮಾಡುವ ಉದ್ದೇಶ ಇದ್ದು, ಅದಕ್ಕಾಗಿ ಈಗಾಗಲೇ ತಯಾರಿ ನಡೆಸುತ್ತಿದ್ದೇವೆ. ಅದಕ್ಕಾಗಿ ಸರ್ಫಿಂಗ್ ತಂಡದ ಎಲ್ಲರೂ ಈ ಬಗ್ಗೆ ಉತ್ಸುಕರಾಗಿದ್ದು, ಮುಂದಿನ ಸೀಸನ್​ನಲ್ಲಿ ಅಂತಾರಾಷ್ಟ್ರೀಯ ಸರ್ಫಿಂಗ್ ನಡೆಸುತ್ತೇವೆ ಎಂದು ಯತೀಶ್ ಬೈಕಂಪಾಡಿ ಮಾಹಿತಿ ನೀಡಿದರು.

Intro:ಮಂಗಳೂರು: ನಗರದ ಪಣಂಬೂರು ಕಡಲಿನಲ್ಲಿ 'ಮಂತ್ರ ಗ್ರೋಮ್ ಸರ್ಚ್' 13-16 ವಯಸ್ಸಿನ ಮಕ್ಕಳ ಸರ್ಫಿಂಗ್ ಸ್ಪರ್ಧೆ ಯು ಇಂದು ಬೆಳಗ್ಗಿನಿಂದ ಮಧ್ಯಾಹ್ನದ ವರೆಗೆ ನಡೆಯಿತು.

ಸರ್ಫಿಂಗ್ ಸ್ವಾಮಿ ಫೌಂಡೇಷನ್, ಮಂತ್ರ ಸರ್ಫ್ ಕ್ಲಬ್, ಅಡ್ವೆಂಚರ್ ವರ್ಕ್ಸ್, ಥಂಡರ್ ಮಂಕಿ, ಫಯರ್ ವೈರ್, ಸರ್ಫ್ ಬೋರ್ಡ್ ವತಿಯಿಂದ ನಡೆದ ಈ ಸರ್ಫಿಂಗ್ ಸ್ಪರ್ಧೆಯಲ್ಲಿ ಮಂಗಳೂರು, ಮುಲ್ಕಿ, ಪಣಂಬೂರು ತಣ್ಣೀರುಬಾವಿ, ಬೆಂಗರೆ ಪರಿಸರದ ಸುಮಾರು 50 ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು.


Body:ಈ ಸಂದರ್ಭ ಪಣಂಬೂರು ಬೀಚ್ ಪ್ರವಾಸೋದ್ಯಮ ಅಭಿವೃದ್ಧಿ ‌ನಿರ್ವಹಣಾ ಸಿಇಒ ಯತೀಶ್ ಬೈಕಂಪಾಡಿ ಮಾತನಾಡಿ, 16 ವರ್ಷಕ್ಕಿಂತ ಕೆಳಗಿನ ಮಕ್ಕಳ ಸರ್ಫಿಂಗ್ ಸ್ಪರ್ಧೆಯನ್ನು ಇಂದು ನಾವು ಪಣಂಬೂರಿನಲ್ಲಿ ಆಯೋಜಿಸಲಾಗಿದೆ. ಈಗಾಗಲೇ 23 ಸ್ಪರ್ಧಾಳುಗಳು ರಿಜಿಸ್ಟ್ರಾರ್ ಮಾಡಿದ್ದು, ಉತ್ತಮ ಪ್ರತಿಕ್ರಿಯೆ ಬಂದಿದೆ. ಈಗ ಆಡಿರುವ ಸ್ಪರ್ಧಾಳುಗಳಲ್ಲಿ 4-5 ಮಕ್ಕಳು ರಾಷ್ಟ್ರೀಯ ಮಟ್ಟದ ಪಂದ್ಯಾಟಗಳಲ್ಲಿ ಭಾಗವಹಿಸುವ ಎಲ್ಲಾ ಅರ್ಹತೆ ಗಳನ್ನು ಹೊಂದಿದ್ದಾರೆ‌. ಇವರು ಸರ್ಫಿಂಗ್ ನಲ್ಲಿ ಸಮರ್ಥರಾಗಿರುವ ಚೆನ್ನೈ, ಕೊಲ್ಲಂ ಮುಂತಾದ ಕಡೆಯ ಸ್ಪರ್ಧಿಗಳಿಗೆ ಸರಿಸಾಟಿಯಾಗಿ ನಿಲ್ಲಬಲ್ಲವರಾಗಿದ್ದಾರೆ. ಹೋದಸಲ ನಡೆದ ಸರ್ಫಿಂಗ್ ಸ್ಪರ್ಧೆಯಲ್ಲಿ ಪಣಂಬೂರಿನ ಹುಡುಗನೋರ್ವ ದ್ವಿತೀಯ ಸ್ಥಾನ ಪಡೆದಿದ್ದ. ಈ ಸಲ ಇನ್ನಷ್ಟು ಹುಡುಗರಲ್ಲಿ ನಿರೀಕ್ಷೆ ಇಡಬಹುದಾಗಿದೆ ಎಂದು ಹೇಳಿದರು.

ಅಂತಾರಾಷ್ಟ್ರೀಯ ಮಟ್ಟದ ಸರ್ಫಿಂಗನ್ನು ಮಾಡುವ ಉದ್ದೇಶ ವನ್ನು ಹೊಂದಿದ್ದು, ಅದಕ್ಕೆ ಈಗಾಗಲೇ ತಯಾರಿ ನಡೆಸುತ್ತಿದ್ದೇವೆ. ಈಗಾಗಲೇ ಸರ್ಫಿಂಗ್ ತಂಡದ ಎಲ್ಲರೂ ಈ ಬಗ್ಗೆ ಉತ್ಸುಕರಾಗಿದ್ದು, ಮುಂದಿನ ಸೀಸನ್ ನಲ್ಲಿ ಅಂತಾರಾಷ್ಟ್ರೀಯ ಸರ್ಫಿಂಗ್ ನಡೆಸುತ್ತೇವೆ ಎಂದು ಯತೀಶ್ ಬೈಕಂಪಾಡಿ ಹೇಳಿದರು.




Conclusion:ಈ ಸಂದರ್ಭ ದ.ಕ.ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಡಿಸಿಪಿ ಲಕ್ಷ್ಮಿ ಗಣೇಶ್, ಪಣಂಬೂರು ಎಸಿಪಿ ಶ್ರೀನಿವಾಸ ಗೌಡ, ಸರ್ಫಿಂಗ್ ಸ್ವಾಮಿ ಫೌಂಡೇಶನ್ ನ ನಿರ್ದೇಶಕ ಗೌರವ್ ಹೆಗ್ಡೆ, ಹೆನ್ರಿ ಬ್ರಿಟ್ಟೊ ಮತ್ತಿತರರು ಭಾಗವಹಿಸಿ ಮಕ್ಕಳ ನ್ನು ಪ್ರೋತ್ಸಾಹಿಸಿದರು.

Reporter_Vishwanath Panjimogaru

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.