ETV Bharat / state

ಕುಕ್ಕೆ ಸುಬ್ರಹ್ಮಣ್ಯ ಚಂಪಾಷಷ್ಠಿ ಮಹೋತ್ಸವದಂದು ಎಡೆಸ್ನಾನಕ್ಕಿಲ್ಲ ಅವಕಾಶ

author img

By

Published : Dec 5, 2021, 8:56 PM IST

ಚಂಪಾಷಷ್ಠಿ ಮಹೋತ್ಸವದ ಚೌತಿ, ಪಂಚಮಿ, ಷಷ್ಠಿ ದಿನಗಳಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹೊರಾಂಗಣದಲ್ಲಿ ಭಕ್ತಾದಿಗಳು ಹರಕೆಯ ರೂಪದಲ್ಲಿ ಸ್ವಯಂ ಆಗಿ ನಡೆಸುತ್ತಿದ್ದ ಎಡೆಸ್ನಾನ ಸೇವೆಯನ್ನು ಕಳೆದ ವರ್ಷದಂತೆ ಈ ವರ್ಷವೂ ರದ್ದು ಮಾಡಲಾಗಿದೆ.

champashashti
ಕುಕ್ಕೆ ಸುಬ್ರಹ್ಮಣ್ಯ ಚಂಪಾಷಷ್ಠಿ

ಸುಬ್ರಹ್ಮಣ್ಯ: ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಚಂಪಾಷಷ್ಠಿ ಮಹೋತ್ಸವ ಆರಂಭಗೊಂಡಿದ್ದು, ಈ ಹಿಂದಿನಿಂದಲೂ ಚಂಪಾಷಷ್ಠಿ ಸಂದರ್ಭದಲ್ಲಿ ಭಕ್ತಾದಿಗಳು ನಡೆಸುತ್ತಿದ್ದ ಎಡೆಸ್ನಾನ ಸೇವೆಯನ್ನು ಕೋವಿಡ್ ಹಿನ್ನೆಲೆಯಲ್ಲಿ ಈ ವರ್ಷವೂ ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ.

kukke subrahmanya temple
ಕುಕ್ಕೆ ಸುಬ್ರಹ್ಮಣ್ಯ

ಚಂಪಾಷಷ್ಠಿ ಮಹೋತ್ಸವದ ಚೌತಿ, ಪಂಚಮಿ, ಷಷ್ಠಿ (ಡಿ. 7,8 ಹಾಗೂ9ರಂದು) ದಿನಗಳಂದು ದೇವಸ್ಥಾನದ ಹೊರಾಂಗಣದಲ್ಲಿ ಭಕ್ತಾದಿಗಳು ಹರಕೆಯ ರೂಪದಲ್ಲಿ ಸ್ವಯಂ ಆಗಿ ನಡೆಸುತ್ತಿದ್ದ ಎಡೆಸ್ನಾನ ಸೇವೆಯನ್ನು ಕಳೆದ ವರ್ಷದಂತೆ ಈ ವರ್ಷವೂ ರದ್ದು ಮಾಡಲಾಗಿದೆ. ಕೋವಿಡ್ 19 ಕಾರಣ ಕಳೆದ ವರ್ಷವೂ ಎಡೆಸ್ನಾನ ಸೇವೆ ರದ್ದುಗೊಂಡಿತ್ತು.

subrahmanya Champashashti
ದೇವಾಲಯದ ಸೂಚನೆ ಪ್ರತಿ

ಇತ್ತೀಚೆಗೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನದಲ್ಲಿ ಪುತ್ತೂರು ಉಪ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳ ಮತ್ತು ಆಡಳಿತ ಸಮಿತಿಯ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ವಾರೇವ್ಹಾ.. ಹೈದರಾಬಾದ್​ನ 3 ಅಡಿ ಎತ್ತರದ ವ್ಯಕ್ತಿಗೆ ಡ್ರೈವಿಂಗ್​ ಲೈಸನ್ಸ್​.. ಚಾಲನಾ ಪರವಾನಿಗೆ ಪಡೆದ ದೇಶದ ಮೊದಲ ಕುಬ್ಜ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.