ETV Bharat / state

ಉಪ ಚುನಾವಣೆಯಲ್ಲಿ ಬಿಜೆಪಿ 15 ಸ್ಥಾನದಲ್ಲಿಯೂ ಗೆಲ್ಲಲಿದೆ: ಮುರಳೀಧರ್​​​ ರಾವ್​​ ವಿಶ್ವಾಸ

author img

By

Published : Sep 29, 2019, 11:55 PM IST

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​​ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಡುವೆ ಯಾವುದೇ ಮನಸ್ತಾಪವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ್​ ರಾವ್ ಹೇಳಿದ್ದಾರೆ.

ಮುರಳೀಧರ್​ ರಾವ್

ಮಂಗಳೂರು: ಡಿಸೆಂಬರ್ 5ರಂದು ನಡೆಯುವ ಉಪ ಚುನಾವಣೆಯಲ್ಲಿ‌ ಬಿಜೆಪಿ ಪಕ್ಷ 15 ಸ್ಥಾನದಲ್ಲಿಯೂ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸವಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ಎದುರಿಸಲು ಬಿಜೆಪಿ ಸರ್ವ ಸನ್ನದ್ಧವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ್​ ರಾವ್ ಹೇಳಿದ್ದಾರೆ.

ಮುರಳೀಧರ್​ ರಾವ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ಕೊಡಿಯಾಲ್ ಬೈಲ್​ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​​ ಹಾಗೂ ಸಿಎಂ ಬಿ.ಎಸ್​.ಯಡಿಯೂರಪ್ಪ ಮಧ್ಯೆ ಯಾವುದೇ ಮನಸ್ತಾಪವಿಲ್ಲ. ನಮ್ಮದು ಒಂದೇ ಪಕ್ಷ, ಒಂದೇ ನಿಲುವು. ಇದರಲ್ಲಿ ಯಾವುದೇ ವ್ಯತ್ಯಾಸ ವಿಲ್ಲ. ಸಿಎಂ ಬಿ.ಎಸ್.ಯಡಿಯೂರಪ್ಪನವರೇ ನಮ್ಮ ಪಕ್ಷದ ನಾಯಕರು. ಅವರನ್ನು ಯಾರೂ ಕಡೆಗಣಿಸಿಲ್ಲ. ಅವರೇ ನಮ್ಮನ್ನೆಲ್ಲ ಒಗ್ಗೂಡಿಸಿಕೊಂಡು ಹೋಗುತ್ತಿದ್ದಾರೆ ಎಂದರು.

370ನೇ ವಿಧಿ ರದ್ದತಿಯ ವಿಚಾರದಲ್ಲಿ‌ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಪಕ್ಷಗಳು ರಾಜಕೀಯ ಮಾಡುತ್ತಿವೆ. ಈ ವಿಚಾರವನ್ನು ಮತೀಯವಾಗಿ ಕೆರಳಿಸುವುದರ ಮೂಲಕ ಜನರಿಗೆ ತಪ್ಪು ಸಂದೇಶ ರವಾನೆ ಮಾಡುತ್ತಿವೆ. 370 ವಿಧಿ ಇಲ್ಲದಿದ್ದರೂ ಎಲ್ಲಾ ರಾಜ್ಯಗಳಲ್ಲಿ ಜನರು ಯಾವುದೇ ತೊಂದರೆ ಇಲ್ಲದೆ ಬದುಕುತ್ತಿದ್ದಾರೆ. ಆದರೆ ಎಲ್ಲೂ ಇಲ್ಲದ ವಿಶೇಷ ಸ್ಥಾನಮಾನ ಜಮ್ಮು ಮತ್ತು ಕಾಶ್ಮೀರಕ್ಕೆ ಏಕೆ? ಈ ವಿಧಿ ರದ್ದು ಮಾಡುವ ಮೂಲಕ ಬಿಜೆಪಿ ದಿಟ್ಟ ನಿರ್ಧಾರ ಕೈಗೊಂಡಿದೆ ಎಂದಿದ್ದಾರೆ.

Intro:ಮಂಗಳೂರು: ಡಿಸೆಂಬರ್ 5ರಂದು ನಡೆಯುವ ಉಪಚುನಾವಣೆಯಲ್ಲಿ‌ ಬಿಜೆಪಿ ಪಕ್ಷ 15 ಸ್ಥಾನದಲ್ಲಿಯೂ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸವಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ಎದುರಿಸಲು ಬಿಜೆಪಿ ಸರ್ವ ಸನ್ನದ್ಧವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ ರಾವ್ ಹೇಳಿದರು.

ಕೊಡಿಯಾಲ್ ಬೈಲ್ ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹಾಗೂ ಸಿಎಂ ಯಡಿಯೂರಪ್ಪ ಮಧ್ಯೆ ಯಾವುದೇ ಮನಸ್ತಾಪವಿಲ್ಲ. ನಮ್ಮದು ಒಂದೇ ಪಕ್ಷ, ಒಂದೇ ನಿಲುವು. ಇದರಲ್ಲಿ ಯಾವುದೇ ವ್ಯತ್ಯಾಸ ವಿಲ್ಲ. ಸಿಎಂ ಯಡಿಯೂರಪ್ಪನವರೇ ನಮ್ಮ ಪಕ್ಷದ ನಾಯಕರು. ಅವರನ್ನು ಯಾರೂ ಕಡೆಗಣಿಸಿಲ್ಲ. ಅವರೇ ನಮ್ಮನ್ನೆಲ್ಲ ಒಗ್ಗೂಡಿಸಿಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು‌.


Body:ಜಮ್ಮುಕಾಶ್ಮೀರ 370ನೇ ವಿಧಿ ರದ್ದತಿಯ ವಿಚಾರದಲ್ಲಿ‌ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಪಕ್ಷಗಳು ರಾಜಕೀಯ ಮಾಡುತ್ತಿದೆ. ಈ ವಿಚಾರವನ್ನು ಮತೀಯವಾಗಿ ಕೆರಳಿಸುವುದರ ಮೂಲಕ ಜನರಿಗೆ ತಪ್ಪು ಸಂದೇಶ ರವಾನೆ ಮಾಡುತ್ತಿದೆ. 370 ವಿಧಿ ಇಲ್ಲದಿದ್ದರೂ ಎಲ್ಲಾ ರಾಜ್ಯಗಳಲ್ಲಿ ಜನರು ಯಾವುದೇ ತೊಂದರೆ ಇಲ್ಲದೆ ಬದುಕುತ್ತಿದ್ದಾರೆ. ಆದರೆ ಎಲ್ಲೂ ಇಲ್ಲದ ವಿಶೇಷ ಸ್ಥಾನಮಾನ ಜಮ್ಮುಕಾಶ್ಮೀರ ಗಳಿಗೇಕೆ. ಈ ವಿಧಿ ರದ್ದತಿ ಮಾಡುವ ಮೂಲಕ ಬಿಜೆಪಿ ದಿಟ್ಟ ನಿರ್ಧಾರ ಕೈಗೊಂಡಿದೆ ಎಂದು ಮುರಳೀಧರ ರಾವ್ ಹೇಳಿದರು.

Reporter_Vishwanath Panjimogaru


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.