ETV Bharat / state

ದಕ್ಷಿಣ ಕನ್ನಡ: ಮಳೆ ನಡುವೆ ಕಲ್ಲಡ್ಕದಲ್ಲಿ ಕ್ರೀಡೋತ್ಸವ ವೀಕ್ಷಿಸಿದ ಸಿಎಂ

author img

By

Published : Dec 11, 2022, 9:06 AM IST

Updated : Dec 11, 2022, 9:13 AM IST

'ಬದುಕಿನುದ್ದಕ್ಕೂ ಅನೇಕ ಪರೀಕ್ಷೆಗಳಿರುತ್ತವೆ. ಅವುಗಳನ್ನು ಎದುರಿಸಲು ಅಗತ್ಯವಿರುವ ಜೀವನ ಮೌಲ್ಯಗಳನ್ನು ಶ್ರೀರಾಮ ವಿದ್ಯಾಕೇಂದ್ರ ಕಲಿಸುತ್ತಿದೆ.'- ಸಿಎಂ ಬೊಮ್ಮಾಯಿ

basavaraj-bommai-visited-sri-rama-vidyakendra-kalladka
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆದ ಹೊನಲು ಬೆಳಕಿನ ಕ್ರೀಡೋತ್ಸವ

ಬಂಟ್ವಾಳ(ದಕ್ಷಿಣ ಕನ್ನಡ): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುರಿಯುವ ಮಳೆಯ ಮಧ್ಯೆ ಶನಿವಾರ ರಾತ್ರಿ ಬಂಟ್ವಾಳ ತಾಲೂಕು ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆದ ಹೊನಲು ಬೆಳಕಿನ ಕ್ರೀಡೋತ್ಸವವನ್ನು ವೀಕ್ಷಿಸಿದರು. ಸಾವರ್ಕರ್ ಕರಿನೀರಿನ ಶಿಕ್ಷೆ, ಉದಮ್ ಸಿಂಗ್ ಬಲಿದಾನ, ಕಾಶಿ ದರ್ಶನದಂಥ ಪ್ರದರ್ಶನಗಳನ್ನು ನೀಡಿದ ವಿದ್ಯಾಕೇಂದ್ರದ ವಿದ್ಯಾರ್ಥಿಗಳನ್ನು ಶ್ಲಾಘಿಸಿದ ಸಿಎಂ, ಇಲ್ಲಿಗೆ ಬಾರದೇ ಇದ್ದಿದ್ದರೆ ಇಂಥ ಪ್ರದರ್ಶನ ನೋಡುವ ಅವಕಾಶ ತಪ್ಪಿ ಹೋಗುತ್ತಿತ್ತು ಎಂದರು.

ಬಲೂನ್‌ಗಳನ್ನು ಆಗಸಕ್ಕೆ ಹಾರಿಬಿಡುವ ಮೂಲಕ ಕ್ರೀಡೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬದುಕಿನುದ್ದಕ್ಕೂ ಅನೇಕ ಪರೀಕ್ಷೆಗಳಿರುತ್ತವೆ. ಅವುಗಳನ್ನು ಎದುರಿಸಲು ಅಗತ್ಯವಿರುವ ಜೀವನ ಮೌಲ್ಯಗಳನ್ನು ಪ್ರಭಾಕರ ಭಟ್ ನೇತೃತ್ವದ ಶ್ರೀರಾಮ ವಿದ್ಯಾಕೇಂದ್ರ ನೀಡುತ್ತಿದೆ. ಇಂಥ ಶಿಕ್ಷಣ ಸಂಸ್ಥೆ ಭಾರತದಲ್ಲಿ ಎಲ್ಲಿಯೂ ಇಲ್ಲ. ಯಾರು, ಏನು, ಎಲ್ಲಿ, ಹೇಗೆ ಹಾಗು ಯಾವಾಗ ಎಂಬ ಐದು ಪ್ರಶ್ನೆಗಳಿಗೆ ಉತ್ತರ ಹುಡುಕಿದರೆ ನಮ್ಮ ಜೀವನ ಯಶಸ್ವಿಯಾಗಲು ಸಾಧ್ಯ ಎಂದರು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ಸಿಎಂ ಪದವಿಯಲ್ಲಿರುವವರು ಈ ಕ್ರೀಡಾಕೂಟಕ್ಕೆ ಬಂದಿರುವುದು ಇದೇ ಮೊದಲು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ: ಭಯೋತ್ಪಾದಕರ 15 ಸ್ಲೀಪರ್ ಸೆಲ್​ಗಳ ಮೇಲೆ ಕ್ರಮ: ಸಿಎಂ ಬೊಮ್ಮಾಯಿ

Last Updated : Dec 11, 2022, 9:13 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.