ETV Bharat / state

ಕಡಲನಗರಿಗೆ ಬಂತು ಮತ್ತೊಂದು ಪ್ರವಾಸಿ ಹಡಗು : ಇದರಲ್ಲಿರುವ ಸಿಬ್ಬಂದಿ__ ಇಷ್ಟು ಕಣ್ರೀ

author img

By

Published : Mar 26, 2019, 11:33 AM IST

ಕಡಲನಗರಿ ಮಂಗಳೂರಿಗೆ ಮತ್ತೊಂದು ಪ್ರವಾಸಿ ಹಡಗಿನ ಆಗಮನವಾಗಿದೆ. 1,200 ವಿದೇಶಿ ಪ್ರವಾಸಿಗರು, ಇವರ ಜೊತೆಗೆ 400 ಹಡಗು ಸಿಬ್ಬಂದಿ ಬಂದಿಳಿದಿದ್ದಾರೆ.

ಪ್ರವಾಸಿ ಹಡಗು

ಮಂಗಳೂರು :ಸುತ್ತಮುತ್ತಲೂ ಪ್ರವಾಸಿ ತಾಣಗಳನ್ನು ಹೊಂದಿರುವ ಕಡಲನಗರಿ ಮಂಗಳೂರಿಗೆ ಮೇಲಿಂದ ಮೇಲೆ ವಿದೇಶಿ ಪ್ರವಾಸಿಗರು ಬರುತ್ತಲೇ ಇರುತ್ತಾರೆ. ಈಗ ಮಂಗಳೂರಿನ ನವ ಮಂಗಳೂರು ಬಂದರಿಗೆ ಇದೇ ತಿಂಗಳಲ್ಲಿ‌‌ ನಾಲ್ಕನೇ ಪ್ರವಾಸಿ ಹಡಗು ಬಂದು ನಿಂತಿದೆ.

ಅಯಿಡ ವಿಟ ಎಂಬ ಪ್ರವಾಸಿ ಹಡಗು ಬಂದಿದ್ದು, ಇದರಲ್ಲಿ 1,200 ವಿದೇಶಿ ಪ್ರವಾಸಿಗರು ಆಗಮಿಸಿದ್ದಾರೆ. ಇವರ ಜೊತೆಗೆ 400 ಹಡಗು ಸಿಬ್ಬಂದಿ ಬಂದಿಳಿದಿರೋದು ವಿಶೇಷ. ಮಾರ್ಚ್ 19ರಂದು ಕೋಸ್ಟ್​ ನ್ಯೂರೋವಿಯಾರಿಯಾ ಎಂಬ ಇಟಾಲಿಯನ್​​ ಹಡಗು ಮಂಗಳೂರಿಗೆ ಬಂದಿತ್ತು. ಅದರಲ್ಲಿ 1099 ಪ್ರಯಾಣಿಕರು, ಪ್ರವಾಸಿಗರೊಂದಿಗೆ 562 ಹಡಗು ಸಿಬ್ಬಂದಿ ಬಂದಿಳಿದಿದ್ದರು.

ಮಾರ್ಚ್7 ಮತ್ತು 12ರಂದು ಕೂಡ ಪ್ರವಾಸಿಗರ ಹಡಗು ನವ ಮಂಗಳೂರು ಬಂದರು ಮೂಲಕ ಮಂಗಳೂರಿಗೆ ಬಂದಿತ್ತು. ಮಾರ್ಚ್ 7ರಂದು 1,831 ಪ್ರವಾಸಿಗರು, 742 ಸಿಬ್ಬಂದಿ ಬಂದಿದ್ದರು. ಮಾರ್ಚ್ 12ರಂದು ಎರಡು ಹಡಗು ಬಂದಿದ್ದು, ಅದರಲ್ಲಿ ಒಂದು ಹಡಗಿನಲ್ಲಿ 2,524 ಪ್ರವಾಸಿಗರು, 985 ಸಿಬ್ಬಂದಿ, ಮತ್ತೊಂದು ಹಡಗಿನಲ್ಲಿ 2,124 ಪ್ರವಾಸಿಗರು 950 ಸಿಬ್ಬಂದಿ ಆಗಮಿಸಿದ್ದರು.

Mangalore Filename- ship Reporter- vinodpudu ಹಡಗಿನಲ್ಲಿ ಮಂಗಳೂರಿಗೆ ಬಂದ 1200 ವಿದೇಶಿ ಪ್ರವಾಸಿಗರು ಮಂಗಳೂರು: ಪ್ರವಾಸಿ ತಾಣಗಳನ್ನು ಹೊಂದಿರುವ ಕಡಲನಗರಿ ಮಂಗಳೂರಿಗೆ ವಿದೇಶಿ ಪ್ರವಾಸಿಗರು ಮೇಲಿಂದ ಮೇಲೆ ಬರುತ್ತಲೆ ಇದ್ದಾರೆ. ಮಂಗಳೂರಿನ ನವಮಂಗಳೂರು ಬಂದರುವಿಗೆ ಈ ತಿಂಗಳಲ್ಲಿ‌‌ ನಾಲ್ಕನೇ ಪ್ರವಾಸಿ ಹಡಗು ಆಗಮಿಸಿದೆ. ಅಯಿಡ ವಿಟ ಎಂಬ ಪ್ರವಾಸಿ ಹಡಗು ಬಂದಿದ್ದು ಇದರಲ್ಲಿ 1200 ವಿದೇಶಿ ಪ್ರವಾಸಿಗರು ಆಗಮಿಸಿದ್ದಾರೆ. ಇವರ ಜೊತೆಗೆ 400 ಹಡಗು ಸಿಬ್ಬಂದಿಗಳು ಬಂದಿಳಿದಿದ್ದಾರೆ. ಮಾರ್ಚ್ 19 ರಂದು ಕೋಸ್ಟ ನ್ಯೂರೋವಿಯಾರಿಯಾ ಎಂಬ ಇಟಾಲಿ ಹಡಗು ಮಂಗಳೂರಿಗೆ ಬಂದಿತ್ತು. ಅದರಲ್ಲಿ 1099 ಪ್ರಯಾಣಿಕರು , ಪ್ರವಾಸಿಗರೊಂದಿಗೆ 562 ಹಡಗು ಸಿಬ್ಬಂದಿಗಳು ಬಂದಿದ್ದರು. ಮಾರ್ಚ್ 7 ಮತ್ತು 12 ರಂದು ಕೂಡ ಪ್ರವಾಸಿಗರ ಹಡಗು ನವಮಂಗಳೂರು ಬಂದರು ಮೂಲಕ ಮಂಗಳೂರಿಗೆ ಬಂದಿತ್ತು. ಮಾರ್ಚ್ 7 ರಂದು 1831 ಪ್ರವಾಸಿಗರು, 742 ಸಿಬ್ಬಂದಿಗಳು , ಮಾರ್ಚ್ 12 ರಂದು ಎರಡು ಹಡಗು ಬಂದಿದ್ದು ಅದರಲ್ಲಿ ಒಂದು ಹಡಗಿನಲ್ಲಿ 2524 ಪ್ರವಾಸಿಗರು, 985 ಸಿಬ್ಬಂದಿಗಳು, ಮತ್ತೊಂದು ಹಡಗಿನಲ್ಲಿ 2124 ಪ್ರವಾಸಿಗರು 950 ಸಿಬ್ಬಂದಿಗಳು ಆಗಮಿಸಿದ್ದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.