ETV Bharat / state

ಸಂಬಳ ಕೇಳಲು ಬಂದ ನೌಕರನ ಮೇಲೆ ಕೋಪ: ಮಗನ ಮೇಲೆ ಗುಂಡು ಹಾರಿಸಿದ ಕೋಪಿಷ್ಟ ತಂದೆ..!

author img

By

Published : Oct 5, 2021, 5:43 PM IST

Updated : Oct 5, 2021, 6:07 PM IST

ವೇತನ ಕೇಳಲು ಬಂದ ನೌಕರನ ಮೇಲಿನ ಸಿಟ್ಟಿಗೆ ಸ್ವಂತ ಮಗನ ಮೇಲೆ ಉದ್ಯಮಿಯೊಬ್ಬ ಗುಂಡು ಹಾರಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ತಂದೆಯ ಕೋಪಕ್ಕೆ ಮಗ ಶಿಕ್ಷೆ ಅನುಭವಿಸುವಂತಾಗಿದೆ.

anger-at-an-employee-father-shot-his-son-in-mangalore
ಮಗನ ಮೇಲೆ ಗುಂಡು ಹಾರಿಸಿದ ತಂದೆ

ಮಂಗಳೂರು: ಸಂಬಳ ಕೇಳಲು ಬಂದ ನೌಕರನ ಮೇಲಿನ ಸಿಟ್ಟಿನಲ್ಲಿ ಉದ್ಯಮಿಯೊಬ್ಬ ತನ್ನ ಮಗನ ಮೇಲೆಯೇ ಗುಂಡು‌ಹಾರಿಸಿದ ಘಟನೆ ಮಂಗಳೂರಿನ ಜೆಪ್ಪು ಮೋರ್ಗನ್​ ಗೇಟ್​​ ಬಳಿ ನಡೆದಿದೆ.

ಮಗನ ಮೇಲೆ ಗುಂಡು ಹಾರಿಸಿದ ಕೋಪಿಷ್ಟ ತಂದೆ

ನಗರದ ವೈಷ್ಣವಿ ಎಕ್ಸ್ ಪ್ರೆಸ್ ಕಾರ್ಗೋ ಪ್ರೈ. ಲಿ. ಕಚೇರಿಯಲ್ಲಿ ಕೇಲಸ ಮಾಡುತ್ತಿದ್ದ ನೌಕರರೊಬ್ಬರು ವೇತನ ಕೇಳಿ ಮಾಲೀಕ ರಾಜೇಶ್​ ಪ್ರಭು ಹತ್ತಿರಕ್ಕೆ ಬಂದಿದ್ದರು. ಕೋಷಿಷ್ಟ ಸ್ವಭಾವದವರಾಗಿರುವ ರಾಜೇಶ್ ಸಿಟ್ಟಿನಿಂದ ಪಿಸ್ತೂಲ್ ತೆಗೆದು ಹೆದರಿಸಲು ಯತ್ನಿಸಿದ್ದಾರೆ.

ಆದರೆ ಅದು ಮಿಸ್​ ಫೈರ್​​ ಆಗಿ ಅವರ ಪುತ್ರ ಸುಧೀಂದ್ರನ ತಲೆಯ ಭಾಗಕ್ಕೆ ತಗುಲಿದೆ. ಘಟನೆಯಲ್ಲಿ ಸುಧೀಂದ್ರ ಗಂಭೀರವಾಗಿ ಗಾಯಗೊಂಡಿದ್ದಾನೆ. ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Last Updated : Oct 5, 2021, 6:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.