ETV Bharat / state

ಕುವೈತ್​ ನಲ್ಲಿ ಕೊರೊನಾಗೆ ಬಲಿಯಾದ ವಿಟ್ಲದ ವ್ಯಕ್ತಿ

author img

By

Published : May 18, 2020, 6:22 PM IST

Updated : May 18, 2020, 7:15 PM IST

ಬಂಟ್ವಾಳ ತಾಲೂಕಿನ ವಿಟ್ಲ ಪ್ರದೇಶದ ವ್ಯಕ್ತಿಯೊಬ್ಬರು, ಕುವೈತ್​​​​​​ನಲ್ಲಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಕೋವಿಡ್ -19 ಪರೀಕ್ಷೆಯಲ್ಲಿ ಅವರಿಗೆ ಸೋಂಕು ಇರುವುದು ದೃಢಪಟ್ಟ ನಂತರ, ಕಳೆದೊಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

a person death in kuvaite
ಕುವೈಟ್​​​​​ನಲ್ಲಿ ಕೊರೊನಾಗೆ ಬಲಿಯಾದ ವಿಟ್ಲದ ವ್ಯಕ್ತಿ

ಬಂಟ್ವಾಳ: ವಿಟ್ಲ ಕಾಶಿಮಠ ಮೂಲದ ವ್ಯಕ್ತಿಯೊಬ್ಬರು ಕುವೈತ್​ನಲ್ಲಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ಹಲವು ವರ್ಷಗಳಿಂದ ಕುವೈತ್​​​​​​​ನಲ್ಲಿ ಉದ್ಯೋಗದಲ್ಲಿದ್ದ ಅವರು, ಕಳೆದ ಒಂದು ತಿಂಗಳಿನಿಂದ ಸ್ವಲ್ಪ ಅಸ್ವಸ್ಥರಾಗಿದ್ದರು ಎನ್ನಲಾಗ್ತಿದೆ.

ಕೋವಿಡ್ -19 ಪರೀಕ್ಷೆಯಲ್ಲಿ ಅವರಿಗೆ ಸೋಂಕು ಇರುವುದು ದೃಢಪಟ್ಟ ನಂತರ, ಕಳೆದೊಂದು ವಾರದಿಂದ ಅಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ವರ್ಷದ ಹಿಂದೆ ಊರಿಗೆ ಬಂದು ಮಗಳ ಮದುವೆ ಕಾರ್ಯವನ್ನು ನೆರವೇರಿಸಿ ಬಳಿಕ, ವಾಪಸ್​ ಕುವೈತ್​​​ಗೆ ಹಿಂತಿರುಗಿದ್ದರು. ಅಂತ್ಯ ಕ್ರಿಯೆಯನ್ನು ಕುವೈತ್​​ನಲ್ಲಿಯೇ ನಡೆಸಲಾಗಿದೆ.

Last Updated : May 18, 2020, 7:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.