ETV Bharat / state

ಮಳೆ ನೀರು ನುಗ್ಗಿದ ಪ್ರದೇಶಗಳಿಗೆ ವಿಧಾನಪರಿಷತ್ ಸದಸ್ಯ ರಘು ಆಚಾರ್​ ಭೇಟಿ

author img

By

Published : Feb 21, 2021, 6:05 PM IST

Updated : Feb 21, 2021, 6:53 PM IST

ಅಧಿಕಾರಿಗಳ ಜೊತೆಗೆ ತಕ್ಷಣವೇ ಚರ್ಚಿಸಿ ಸಮಸ್ಯೆ ಪರಿಹರಿಸುವುದಾಗಿ ವಿಧಾನಪರಿಷತ್ ಸದಸ್ಯ ರಘು ಆಚಾರ್ ಭರವಸೆ ನೀಡಿದರು. ಗುಮಾಸ್ತ ಕಾಲೋನಿ ಸೇರಿ ಹಲವು ಬಡಾವಣೆಗಳಿಗೆ ಭೇಟಿ ನೀಡಿ ಜನರಿಗೆ ಆಶ್ವಾಸನೆ..

Vidhanaparishath member Raghu Achar
ವಿಧಾನಪರಿಷತ್ ಸದಸ್ಯ ರಘು ಆಚಾರ್​ ಭೇಟಿ

ಚಿತ್ರದುರ್ಗ : ಜಿಲ್ಲೆಯಲ್ಲಿ ಶನಿವಾರ ಸುರಿದ ಮಳೆಗೆ ನಗರದ ಹಲವು ಬಡಾವಣೆಗಳಿಗೆ ನೀರು ನುಗ್ಗಿತ್ತು. ಈ ಹಿನ್ನೆಲೆ ಇಂದು ವಿಧಾನಪರಿಷತ್ ಸದಸ್ಯ ರಘು ಆಚಾರ್ ಬಡಾವಣೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ನೀರು ನುಗ್ಗಿದ ಪ್ರದೇಶಗಳಿಗೆ ವಿಧಾನಪರಿಷತ್ ಸದಸ್ಯ ರಘು ಆಚಾರ್​ ಭೇಟಿ

ನಗರದ ಗುಮಾಸ್ತ ಕಾಲೋನಿ, ಕೆಳಗೋಟೆ ಬಡಾವಣೆ ಸೇರಿ ಮಳೆ ನೀರು ನುಗ್ಗಿದ ತಗ್ಗು ಪ್ರದೇಶಗಳಿಗೆ ಭೇಟಿ ನೀಡಿದ ರಘು ಆಚಾರ್ ಜನರ ಸಂಕಷ್ಟ ಆಲಿಸಿದರು.

ಓದಿ:ಸ್ವಪಕ್ಷದವರೇ ಮಸಲತ್ ಮಾಡಿ ನನ್ನ ಬಾದಾಮಿಯಲ್ಲಿ ಸೋಲಿಸಿದ್ರು : ಸಚಿವ ಶ್ರೀರಾಮುಲು

ಈ ವೇಳೆ ಅಧಿಕಾರಿಗಳು ಕೂಡ ವಿಧಾನಪರಿಷತ್ ಸದಸ್ಯರ ಭೇಟಿಗೆ ಸಾಥ್​ ನೀಡಿದರು. ಅಧಿಕಾರಿಗಳ ಜೊತೆಗೆ ತಕ್ಷಣವೇ ಚರ್ಚಿಸಿ ಸಮಸ್ಯೆ ಪರಿಹರಿಸುವುದಾಗಿ ವಿಧಾನಪರಿಷತ್ ಸದಸ್ಯ ರಘು ಆಚಾರ್ ಭರವಸೆ ನೀಡಿದರು. ಗುಮಾಸ್ತ ಕಾಲೋನಿ ಸೇರಿ ಹಲವು ಬಡಾವಣೆಗಳಿಗೆ ಭೇಟಿ ನೀಡಿ ಜನರಿಗೆ ಆಶ್ವಾಸನೆ ನೀಡಿದರು.

Last Updated : Feb 21, 2021, 6:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.