ETV Bharat / state

ಮಳೆ ಆರ್ಭಟಕ್ಕೆ ಕುಸಿದ ಗೂಳಿಹಟ್ಟಿ ಶೇಖರ್​ ಮನೆ, ನೆಂಟರ ಮನೆ ಸೇರಿದ ಶಾಸಕರ ತಾಯಿ

author img

By

Published : Oct 25, 2019, 10:51 AM IST

ಚಿತ್ರದುರ್ಗ ಜಿಲ್ಲೆಯಲ್ಲಿ ಮಾಜಿ ಸಚಿವ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಮನೆಗೆ ಮಳೆಗೆ ಕುಸಿದು ಬಿದ್ದಿದೆ.

ಮಳೆ ಆರ್ಭಟಕ್ಕೆ ಕುಸಿದು ಬಿತ್ತು ಶಾಸಕ ಗೂಳಿಹಟ್ಟಿ ಶೇಖರ್ ಮನೆ!

ಚಿತ್ರದುರ್ಗ: ಸತತ ಮೂರು ದಿನಗಳಿಂದ ಜಿಲ್ಲೆಯಲ್ಲಿ ಸುರಿದ ಮಳೆಗೆ ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್​ ಅವರ ಗೂಳಿಹಟ್ಟಿ ಗ್ರಾಮದಲ್ಲಿರುವ ಮನೆ ಕುಸಿದಿದೆ.

ಗೂಳಿಹಟ್ಟಿ ಶೇಖರ್​ಗೆ ಸರ್ಕಾರದಿಂದ ಮಂಜೂರಾಗಿದ್ದ ಜನತಾ ಮನೆ ಇದಾಗಿದ್ದು, ಶೇಖರ್ ಶಾಸಕರಾಗುವ ಮೊದಲೇ ಮಂಜೂರಾಗಿದ್ದ ಜನತಾ ಮನೆ ಕುಸಿದ ಪರಿಣಾಮ ತಾಯಿ ಪುಟ್ಟಮ್ಮ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನೂ ಚುನಾವಣೆ ವೇಳೆ ಜನತಾ ಮನೆ ಒಂದೇ ಎಂದು ಘೋಷಿಸಿಕೊಂಡಿದ್ದ ಶೇಖರ್, ಸಚಿವರಾದ ಬಳಿಕ ತಾಯಿ ಪುಟ್ಟಮ್ಮ, ತಂದೆ ದಿವಾಕರಪ್ಪ ಸೇರಿದಂತೆ ಶಾಸಕ ಗೂಳಿ ಹಟ್ಟಿ ಶೇಖರ್ ಕೂಡ ಇದೇ ಮನೆಯಲ್ಲಿ ವಾಸವಿದ್ದರು.

ಮಳೆ ಆರ್ಭಟಕ್ಕೆ ಕುಸಿದು ಬಿತ್ತು ಶಾಸಕ ಗೂಳಿಹಟ್ಟಿ ಶೇಖರ್ ಮನೆ!

ಇದೀಗ ಮಳೆ ಆರ್ಭಟಕ್ಕೆ ಮನೆ ಕುಸಿತವಾಗಿದ್ದು, ಮನೆಯ ಅವಶೇಷಗಳನ್ನು ತೆರವುಗೊಳಿಸಲಾಗಿದೆ. ಮನೆ ಕಳೆದುಕೊಂಡ ತಾಯಿ ಪುಟ್ಟಮ್ಮ ಸಂಬಂಧಿಕರ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಇನ್ನೂ ಎರಡು ಅವಧಿಗೆ ಗೂಳಿ ಶಾಸಕರಾದರೂ ಹೊಸ ಮನೆ ಮಾತ್ರ ನಿರ್ಮಿಸಿರಲಿಲ್ಲ. ತಂದೆ ದಿವಾಕರಪ್ಪ ನಿಧನದ ಬಳಿಕ ತಾಯಿ ಪುಟ್ಟಮ್ಮ ಇದೆ ಮನೆಯಲ್ಲಿ ವಾಸವಿದ್ದರು.

Intro:ಮಳೆ ಆರ್ಭಟಕ್ಕೆ ಬಿತ್ತು ಶಾಸಕರ ಮನೆ : ಅವಶೇಷಗಳ ತೆರವು

Exclusive...

ಆ್ಯಂಕರ್:- ಸತತ ಮೂರು ದಿನಗಳ ಹಿಂದೆ ಸುರಿದ ಮಳೆಗೆ ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಡಿ ಶೇಖರ್ ಮನೆ ಕುಸಿದಿದೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಗೂಳಿಹಟ್ಟಿ ಗ್ರಾಮದಲ್ಲಿರುವ ಮನೆ ಕುಸಿದಿದ್ದು, ಗೂಳಿಹಟ್ಟಿ ಶೇಖರ್ ರವರಿಗೆ ಸರ್ಕಾರದಿಂದ ಮಂಜೂರಾಗಿದ್ದ ಜನತಾ ಮನೆ ಇದಾಗಿದೆ. ಗೂಳಿಹಟ್ಟಿ ಶೇಖರ್ ಶಾಸಕರಾಗುವ ಮೊದಲೇ ಮಂಜೂರಾಗಿದ್ದ ಜನತಾ ಮನೆ ಕುಸಿದ ಪರಿಣಾಮ
ಅದೇ ಮನೆಯಲ್ಲಿ ವಾಸವಿದ್ದ ತಾಯಿ ಪುಟ್ಟಮ್ಮ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನೂ ಚುನಾವಣೆ ವೇಳೆ ಜನತಾ ಮನೆ ಒಂದೇ ಎಂದು ಘೋಷಿಸಿಕೊಂಡಿದ್ದ ಶೇಖರ್, ಸಚಿವರಾದ ಬಳಿಕ ತಾಯಿ ಪುಟ್ಟಮ್ಮ, ತಂದೆ ದಿವಾಕರಪ್ಪ ಸೇರಿದ್ದಂತೆ ಶಾಸಕ ಗೂಳಿ ಹಟ್ಟಿ ಶೇಖರ್ ಕೂಡ ಇದೇ ಮನೆಯಲ್ಲಿ ವಾಸವಿದ್ದರು. ಇದೀಗ ಮಳೆ ಆರ್ಭಟಕ್ಕೆ ಮನೆ ಕುಸಿತ ಕಂಡಿದ್ದು, ಮನೆಯ ಅವಶೇಷಗಳನ್ನು ತೆರವುಗೊಳಿಸಲಾಗಿದೆ. ಮನೆ ಕಳೆದುಕೊಂಡ ತಾಯಿ ಪುಟ್ಟಮ್ಮ ಸಂಬಂಧಿಕರ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಇನ್ನೂ ಎರಡು ಅವಧಿಗೆ ಗೂಳಿ ಶಾಸಕರಾದರೂ ಹೊಸ ಮನೆ ಮಾತ್ರ ನಿರ್ಮಿಸಿರಲಿಲ್ಲ. ತಂದೆ ದಿವಾಕರಪ್ಪ ನಿಧನ ಬಳಿಕ ಪುಟ್ಟಮ್ಮ ಒಬ್ಬರೇ ವಾಸವಿದ್ದ ಸಂಧರ್ಭದಲ್ಲಿ ಗೂಳಿಹಟ್ಟಿ ಶೇಖರ್ ಹೊಸದುರ್ಗಕ್ಕೆ ಬಂದಾಗಲೆಲ್ಲ ಮನೆಗೆ ಭೇಟಿ ನೀಡುತ್ತಿದ್ದರು.

ಫ್ಲೋ.....Body:Mla homeConclusion:Colaps
ETV Bharat Logo

Copyright © 2024 Ushodaya Enterprises Pvt. Ltd., All Rights Reserved.