ETV Bharat / state

ಬಿಜೆಪಿಗೆ ಗುದ್ದಲು 'ಗೂಳಿ'ಹಟ್ಟಿ ಸ್ವಾಭಿಮಾನದ ಅಸ್ತ್ರ..!

author img

By

Published : Dec 23, 2019, 3:45 PM IST

ಸಚಿವ ಸ್ಥಾನಕ್ಕಾಗಿ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಪ್ರತ್ಯೇಕವಾಗಿ ಸಭೆ ನಡೆಸಿದ್ದು, ಬಿಜೆಪಿಗೆ ಠಕ್ಕರ್ ಕೊಡಲು ಸ್ವಾಭಿಮಾನದ ಅಸ್ತ್ರ ಬಳಸಿದ್ದಾರೆ. ಹೊಸದುರ್ಗ‌ದ ಬನಶಂಕರಿ ಭವನದಲ್ಲಿ ಪ್ರತ್ಯೇಕ ಸಭೆ ನಡೆಸಿ, ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್
ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್

ಚಿತ್ರದುರ್ಗ: ಸಚಿವ ಸ್ಥಾನಕ್ಕಾಗಿ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಪ್ರತ್ಯೇಕವಾಗಿ ಸಭೆ ನಡೆಸಿದ್ದು, ಬಿಜೆಪಿಗೆ ಠಕ್ಕರ್ ಕೊಡಲು ಸ್ವಾಭಿಮಾನದ ಅಸ್ತ್ರ ಬಳಸಿದ್ದಾರೆ. ಹೊಸದುರ್ಗ‌ದ ಬನಶಂಕರಿ ಭವನದಲ್ಲಿ ಪ್ರತ್ಯೇಕ ಸಭೆ ನಡೆಸಿ, ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ತಾಲೂಕು ಅಧ್ಯಕ್ಷ ನೇಮಕ ವಿಚಾರದಲ್ಲಿ ನನ್ನನ್ನು ಕಡೆಗಣಿಸಲಾಗಿದ್ದು, ಒಂದು ಇಬ್ಬರು ಸೇರಿ ಮನಸೋ ಇಚ್ಛೆ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಗೂಳಿಹಟ್ಟಿ ಪಕ್ಷ ಬಿಟ್ಟು ಹೋಗ್ತಾರೆ ಎಂದು ಪಕ್ಷದ ನಾಯಕರಿಗೆ ಚಾಡಿ ಹೇಳ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನನ್ನನ್ನು ಕಡೆಗಣಿಸುವ ಮೂಲಕ ತುರ್ತಾಗಿ, ಹೊಸದುರ್ಗದ ಶಾಸಕರಾಗಲು ಕೆಲವರಿಂದ ಷಡ್ಯಂತ್ರ ನಡೆದಿದೆ‌ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನನ್ನ ಅವಧಿ ಮುಗಿಯೋವರೆಗೂ ಬಿಜೆಪಿ ಬಿಟ್ಟು ನಾನೆಲ್ಲೂ ಹೋಗಲ್ಲ. ಆದರೆ, ಮೂರು ವರ್ಷದ ಬಳಿಕ ಅಗತ್ಯ ಬಿದ್ದರೆ, ಮತ್ತೆ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ. ಶಾಸಕರಾಗುವ ಆಸೆ ಇರುವವರು ನನ್ನೆದುರು ಬಂದು ಬಿಜೆಪಿಯಿಂದ ಸ್ಪರ್ಧಿಸಲಿ. ಇದರಿಂದ ಕಾಂಗ್ರೆಸ್​ನ ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ ಸುಲಭವಾಗಿ ಗೆಲ್ಲುತ್ತಾರೆ ಎಂದು ಹೇಳಿದರು.

ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್

ಮಾಜಿ ಶಾಸಕ ಗೋವಿಂದಪ್ಪ ಎಲ್ಲಿವರೆಗೆ ರಾಜಕಾರಣದಲ್ಲಿರುತ್ತಾರೆ ಅಲ್ಲಿವರೆಗೆ ನಾನಿರುತ್ತೇನೆ. ಅವರನ್ನು ಸೋಲಿಸುವುದು ನನ್ನೊಬ್ಬನಿಂದಲೇ ಮಾತ್ರ ಸಾಧ್ಯ ಎಂದರು. ಇನ್ನು 2008ರಲ್ಲಿ ಪಕ್ಷೇತರನಾಗಿ‌ ಗೆದ್ದು ಬಿಜೆಪಿ ಬೆಂಬಲಿಸಿದ‌ವರಲ್ಲಿ ನಾನು ಮೊದಲಿಗನಾಗಿದ್ದು, ಆಗಲೂ ನನಗೆ ಅನ್ಯಾಯ ಆಗಿತ್ತು ಈಗ ಅನ್ಯಾಯ ಸರಿಪಡಿಸಲು ನಾಯಕರಲ್ಲಿ ಮನವಿ ಮಾಡುತ್ತೇನೆ ಎಂದರು.

Intro:ಬಿಜೆಪಿಗೆ ಠಕ್ಕರ್ ಕೊಡಲು ಸ್ವಾಭಿಮಾನದ ಅಸ್ತ್ರ ಬಳಸಿದ ಶಾಸಕ ಗೂಳಿಹಟ್ಟಿ ಶೇಖರ್

ಆ್ಯಂಕರ್:- ಹೊಸದುರ್ಗದಲ್ಲಿ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಸಚಿವ ಸ್ಥಾನಕ್ಕಾಗಿ ಪ್ರತ್ಯೇಕವಾಗಿ ಸಭೆ ನಡೆಸುವ ಮೂಲಕ ಬಿಜೆಪಿಗೆ ಠಕ್ಕರ್ ಕೊಡಲು ಸ್ವಾಭಿಮಾನದ ಅಸ್ತ್ರ ಬಳಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ‌ ನಗರದ ಬನಶಂಕರಿ ಭವನದಲ್ಲಿ ನಿನ್ನೆ ಸಂಜೆ ನಡೆದ ಪ್ರತ್ಯೇಕ ಸಭೆಯಲ್ಲಿ ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಭೆಯಲ್ಲಿ ಮಾತನಾಡಿದ ಅವರು ಬಿಜೆಪಿ ತಾಲೂಕು ಅಧ್ಯಕ್ಷ ನೇಮಕ ವಿಚಾರದಲ್ಲಿ ನನ್ನನ್ನು ಕಡೆಗಣಿಸಲಾಗಿದ್ದು, ಒಬ್ಬರಿಬ್ಬರು ಸೇರಿ ಮನಸೋ ಇಚ್ಛೆ ನಿರ್ಧಾರ ಕೈಗೊಳ್ಳುತ್ತಿದ್ದಾರೆ.ಗೂಳಿಹಟ್ಟಿ ಪಕ್ಷ ಬಿಟ್ಟು ಹೋಗ್ತಾರೆ ಎಂದು ಪಕ್ಷದ ನಾಯಕರಿಗೆ ಚಾಡಿ ಹೇಳ್ತಾರೆ.
ಪಕ್ಷ ತಮ್ಮದೇ ಕಪಿಮುಷ್ಟಿಯಲ್ಲಿರಬೇಕೆಂದು ನನ್ನನ್ನು ಕಡೆಗಣಿಸುವ ಮೂಲಕ ತುರ್ತಾಗಿ ಹೊಸದುರ್ಗದ ಶಾಸಕರಾಗಲು ಕೆಲವರಿಂದ ಷಡ್ಯಂತ್ರ ಕೂಡ ನಡೆದಿದೆ‌ ಎಂದು ಆಕ್ರೋಶಿತರಾದರು. ಇನ್ನೂ ಪಕ್ಷ‌ಬಿಟ್ಟು ಹೋಗ್ತಾರೆ ಎಂಬ ವೂಹಪೋಹಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು ನನ್ನ ಅವಧಿ ಮುಗಿಯೋವರೆಗೂ ಬಿಜೆಪಿ ಬಿಟ್ಟು ನಾನೆಲ್ಲೂ ಹೋಗಲ್ಲ, ಅದ್ರೇ ಮೂರು ವರ್ಷದ ಬಳಿಕ ಅಗತ್ಯಬಿದ್ದರೆ ಮತ್ತೇ ಮುಂದಿನ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ. ಶಾಸಕರಾಗುವಾಸೆ ಇರುವವರು ನನ್ನೆದುರು ಬಂದು ಬಿಜೆಪಿಯಿಂದ ಸ್ಪರ್ಧಿಸಲಿ. ಇದರಿಂದ ಕಾಂಗ್ರೆಸ್ ನ ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಸುಲಭವಾಗಿ ಗೆಲ್ಲುತ್ತಾರೆಂದರು.
ಮಾಜಿ ಶಾಸಕ ಗೋವಿಂದಪ್ಪ ಎಲ್ಲಿವರೆಗೆ ರಾಜಕಾರಣದಲ್ಲಿರುತ್ತಾರೆ ಅಲ್ಲಿವರೆಗೆ ನಾನಿರುತ್ತೇನೆ. ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪನ ಸೋಲಿಸೋದು ನಾನೊಬ್ಬನೇ ಹೊರೆತು ಯಾರಿಂದನು ಸಾಧ್ಯವಿಲ್ಲ. ಇನ್ನು 2008 ರಲ್ಲಿ ಪಕ್ಷೇತರನಾಗಿ‌ ಗೆದ್ದು ಬಿಜೆಪಿ ಬೆಂಬಲಿಸಿದ‌ವರಲ್ಲಿ ನಾನು ಮೊದಲಿಗನಾಗಿದ್ದು, ಆಗಲೂ ನನಗೆ ಅನ್ಯಾಯ ಆಗಿತ್ತು ಈಗ ಅನ್ಯಾಯ ಸರಿಪಡಿಸಲು ನಾಯಕರಲ್ಲಿ ಮನವಿ ಮಾಡುತ್ತೇನೆ.
17 ಜನ ಅರ್ಹ ಶಾಸಕರಿಗೆ ಈಗ ರೆಡ್ ಕಾರ್ಪರೇಟ್ ಸ್ವಾಗತ ಕೋರಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಫ್ಲೋ.....

ಬೈಟ್01:- ಗೂಳಿ ಹಟ್ಟಿ ಡಿ ಶೇಖರ್, ಶಾಸಕBody:GooliConclusion:Guturu avbb
ETV Bharat Logo

Copyright © 2024 Ushodaya Enterprises Pvt. Ltd., All Rights Reserved.