ETV Bharat / state

ಕಾಡುಗೊಲ್ಲರು ಬಿಜೆಪಿ ಅಭ್ಯರ್ಥಿ ಚಿದಾನಂದರನ್ನು ಗೆಲ್ಲಿಸುವ ಭರವಸೆ ಇದೆ; ಬಿಜೆಪಿ ಜಿಲ್ಲಾಧ್ಯಕ್ಷ ಎ. ಮುರುಳಿ

author img

By

Published : Oct 26, 2020, 6:33 PM IST

ಬಿಜೆಪಿ ಅಭ್ಯರ್ಥಿ ಚಿದಾನಂದರನ್ನು ಗೆಲ್ಲಿಸುವ ಭರವಸೆಯನ್ನು ಕಾಡುಗೊಲ್ಲ ಸಮುದಾಯದ ಮುಖಂಡರು ಮಾತು ನೀಡಿದ್ದಾರೆಂದು ಬಿಜೆಪಿ ಜಿಲ್ಲಾಧ್ಯಕ್ಷ ಎ ಮುರುಳಿ ತಿಳಿಸಿದರು‌.

Chitradurga
ಪತ್ರಿಕಾಗೋಷ್ಠಿ

ಚಿತ್ರದುರ್ಗ: ಜಿಲ್ಲೆಯಲ್ಲಿ ಆಗ್ನೇಯ ಪದವೀಧರರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯ ಕಾವು ಹೆಚ್ಚಾಗುತ್ತಿದೆ. ಚುನಾವಣೆ ಎದುರಾಗಿದ್ದರಿಂದ ಕಾಡುಗೊಲ್ಲ ಅಭಿವೃದ್ಧಿ ನಿಗಮವನ್ನು ಸರ್ಕಾರ ಸ್ಥಾಪಿಸಿ, ಕಾಡುಗೊಲ್ಲ ಸಮುದಾಯದವರನ್ನು ಓಲೈಸಲು ಜಿಲ್ಲೆಯ ಆರು ತಾಲೂಕುಗಳಲ್ಲಿ ಬಿರುಸಿನ ಪ್ರಚಾರ ಮಾಡಿದೆ. ಆರು ತಾಲೂಕುಗಳಲ್ಲಿ ಪ್ರಚಾರ ಮಾಡಿದ್ದರಿಂದ ಆಗ್ನೇಯ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಿದಾನಂದರನ್ನು ಗೆಲ್ಲಿಸುವ ಭರವಸೆಯನ್ನು ಕಾಡುಗೊಲ್ಲ ಸಮುದಾಯದ ಮುಖಂಡರು ಮಾತು ನೀಡಿದ್ದಾರೆಂದು ಬಿಜೆಪಿ ಜಿಲ್ಲಾಧ್ಯಕ್ಷ ಎ. ಮುರುಳಿ ತಿಳಿಸಿದರು‌.

ಬಿಜೆಪಿ ಜಿಲ್ಲಾಧ್ಯಕ್ಷ ಎ ಮುರುಳಿ

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಮುದಾಯವನ್ನು ಮುಖ್ಯ ವಾಹಿನಿಗೆ ತರಬೇಕೆಂದು ಸಿಎಂ ಬಿಎಸ್ ಯಡಿಯೂರಪ್ಪ ಕಾಡುಗೊಲ್ಲ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ, ಗೊಲ್ಲರ ಹಟ್ಟಿಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಹಕರಿಸಿದ್ದರಿಂದ ಇಡೀ ಕಾಡುಗೊಲ್ಲ ಸಮಾಜ ಬಿಜೆಪಿ ಪಕ್ಷವನ್ನು ಬೆಂಬಲಿಸಿಲು ನಿರ್ಧಾರ ಮಾಡಿದೆ ಎಂದರು.

ಬಿಜೆಪಿ ಪಕ್ಷವನ್ನು ಒಪ್ಪಿಕೊಂಡ ಕಾಡುಗೊಲ್ಲ ಸಮುದಾಯ ಆಗ್ನೇಯ ಪದವೀಧರರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಚಿದಾನಂದರವರನ್ನು ಬೆಂಬಲಿಸುತ್ತೇವೆ ಎಂದು ಮಾತು ನೀಡಿದರು ಎಂದು ಕಾಡುಗೊಲ್ಲ‌ ಸಮುದಾಯದ ಮುಖಂಡ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.