ETV Bharat / state

ರಾಜ್ಯದಲ್ಲಿ ಜಡಿಮಳೆ ಸುರಿದ್ರೂ ಚಿತ್ರದುರ್ಗದಲ್ಲಿ ಸಿಗುತ್ತಿಲ್ಲ ಕುಡಿಯುವ ನೀರು

author img

By

Published : Oct 20, 2020, 7:39 PM IST

ಈ ಹಿಂದೊಮ್ಮೆ ನಗರಸಭೆಯ ಅಧಿಕಾರಿಗಳು ಹಿರಿಯೂರಿನ ವಾಣಿ ವಿಲಾಸ ಸಾಗರ ಹಾಗೂ ಚನ್ನಗಿರಿ ತಾಲೂಕಿ‌ನ ಶಾಂತಿ ಸಾಗರದಿಂದ ನೀರನ್ನು ತಂದು ಇಲ್ಲಿನ ಜನರ ದಾಹ ನೀಗಿಸಿದ್ದರು. ಆದರೆ, ಕೆಲವು ವರ್ಷಗಳಿಂದ ಸರಿಯಾಗಿ ನೀರನ್ನು ಪೂರೈಸದೆ ಇರುವುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.

Drinking water problem in Chitradurga
ಚಿತ್ರದುರ್ಗದಲ್ಲಿಲ್ಲ ಕುಡಿಯುವ ನೀರು

ಚಿತ್ರದುರ್ಗ : ಮಹಾ ಮಳೆಯಿಂದಾಗಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಪ್ರವಾಹ ಸೃಷ್ಠಿಯಾಗಿದ್ರೆ, ಜಿಲ್ಲೆಯಲ್ಲಿ ಕುಡಿಯುವ ನೀರಿಗೂ ಪರದಾಡುವಂತಾಗಿದೆ. ನೀರಿಗಾಗಿ ಕಿಲೋಮೀಟರ್​​ ಗಟ್ಟಲೆ ಕ್ರಮಿಸುತ್ತಿರುವ ಜನರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ನಗರದ ಸಾದೀಕ್ ನಗರದಲ್ಲಿ ನೀರಿನ ಬವಣೆ ಶುರುವಾಗಿದ್ದು, ಪ್ರತಿ ಹತ್ತು ದಿನಕ್ಕೊಮ್ಮೆ ಬಿಡುವ ಹನಿ ನೀರಿಗಾಗಿ ಕೆಲಸ ಬಿಟ್ಟು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಗಂಟೆ ಮಾತ್ರ ಬಿಡುವ ನೀರಿಗೆ ನಗರದ ಜನತೆ ರಣಹದ್ದಿನಂತೆ ಸರದಿಯಲ್ಲಿ ಕಾಯಬೇಕಾಗಿದೆ. ಹತ್ತು ದಿನಕ್ಕೊಮ್ಮೆ ಬಿಡುವ ನೀರಿಗಾಗಿ ಹಂಬಲಿಸುತ್ತಿರುವ ಜನರು,ಮನೆಯಲ್ಲಿರುವ ಪ್ರತಿಯೊಂದು ವಸ್ತುಗಳಲ್ಲಿಯೂ ನೀರನ್ನು ಸಂಗ್ರಹಿಸಿಡುತ್ತಿದ್ದಾರೆ.

ಚಿತ್ರದುರ್ಗದಲ್ಲಿ ಸಿಗುತ್ತಿಲ್ಲ ಕುಡಿಯುವ ನೀರು

ನಗರದಲ್ಲಿ ಕೆಲವರು ವಿಶೇಷಚೇತನರು ವಾಸಿಸುತ್ತಿದ್ದು, ನೀರು ತರಲಾಗದೆ ಹೈರಾಣಾಗಿದ್ದಾರೆ. ಸಾಕಷ್ಟು ವರ್ಷಗಳಿಂದ ಈ ಸಮಸ್ಯೆ ಹಾಗೆ ಉಳಿದುಕೊಂಡಿದೆ. ಆದರೆ, ಈ ಸಮಸ್ಯೆಯನ್ನು ಪರಿಹರಿಸುವಂತೆ ಜನಪ್ರತಿನಿಧಿಗಳಲ್ಲಿ ಮನವಿ ಮಾಡಿದ್ರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಅಂತಾರೆ ಇಲ್ಲಿನ ಸ್ಥಳೀಯರು.

ಈ ಹಿಂದೊಮ್ಮೆ ನಗರಸಭೆಯ ಅಧಿಕಾರಿಗಳು ಹಿರಿಯೂರಿನ ವಾಣಿ ವಿಲಾಸ ಸಾಗರ ಹಾಗೂ ಚನ್ನಗಿರಿ ತಾಲೂಕಿ‌ನ ಶಾಂತಿ ಸಾಗರದಿಂದ ನೀರನ್ನು ತಂದು ಇಲ್ಲಿನ ಜನರ ದಾಹ ನೀಗಿಸಿದ್ದರು. ಆದರೆ, ಕೆಲವು ವರ್ಷಗಳಿಂದ ಸರಿಯಾಗಿ ನೀರನ್ನು ಪೂರೈಸದೆ ಇರುವುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಬಾರಿ ತಕ್ಕ ಮಟ್ಟಿಗೆ ಜಿಲ್ಲೆಯಲ್ಲಿ ಮಳೆ ಸುರಿದಿದ್ದರೂ ಕೂಡ ನೀರಿನ ಸಮಸ್ಯೆ ಉದ್ಭವಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಆದಷ್ಟೂ ಬೇಗ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆಯನ್ನು ಬಗೆಹರಿಸಬೇಕೆಂಬುದು ಸಾದೀಕ್ ನಗರ ವಾಸಿಗಳ ಒತ್ತಾಯವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.