ETV Bharat / state

ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಬೈಕ್: ಯುವಕ ಸಾವು

author img

By

Published : Mar 2, 2021, 11:02 AM IST

ಸ್ನೇಹಿತರ ಭೇಟಿಗಾಗಿ ಹೊರಟಿದ್ದ ಯುವಕ ಬೈಕ್ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

Boy dead in bike accident in Chitradurga
ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಬೈಕ್

ಚಿತ್ರದುರ್ಗ: ಬೈಕ್ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದು ಯುವಕ ಸಾವನ್ನಪ್ಪಿದ ಘಟನೆ ಚಳ್ಳಕೆರೆ ತಾಲೂಕಿನ ದೇಶಪ್ಪನವರ ಹಟ್ಟಿ ಗ್ರಾಮದ ಬಳಿ ತಡರಾತ್ರಿ ನಡೆದಿದೆ.

ನಿಯಂತ್ರಣ ತಪ್ಪಿ ಚರಂಡಿಗೆ ಬೈಕ್ ಬಿದ್ದು ಯುವಕ ಸಾವು

ಸ್ನೇಹಿತರ ಭೇಟಿಗಾಗಿ ನನ್ನಿವಾಳ ಗ್ರಾಮದ ಮಾರ್ಗವಾಗಿ ಯುವಕ ಬೈಕ್ ಮೂಲಕ ತೆರಳುವ ಸಮಯದಲ್ಲಿ ಘಟನೆ ಸಂಭವಿಸಿದೆ. ಮೃತ ಯುವಕ ಬೋಸೆದೇವರಹಟ್ಟಿ ಗ್ರಾಮದವರೆಂದು ತಿಳಿದು ಬಂದಿದೆ.

ಇದನ್ನೂ ಓದಿ: ದುಗ್ಗಲಮ್ಮ ದೇಗುಲಕ್ಕೆ ಕ್ಯಾಂಟರ್ ಡಿಕ್ಕಿ: ಸ್ಥಳದಲ್ಲೇ ಕ್ಲೀನರ್ ಸಾವು!

ಘಟನಾ ಸ್ಥಳಕ್ಕೆ ಚಳ್ಳಕೆರೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.