ETV Bharat / state

ಮಂಗಳೂರು ಬಾಂಬ್​ ಪ್ರಕರಣ ವಿರೋಧ ಪಕ್ಷದವರ ಕೈವಾಡ : ಸಂಸದ ನಾರಾಯಣಸ್ವಾಮಿ

author img

By

Published : Jan 23, 2020, 3:21 PM IST

ಮಂಗಳೂರು ಬಾಂಬ್​ ಪ್ರಕರಣದಲ್ಲಿ ವಿರೋಧ ಪಕ್ಷದವರ ಕೈವಾಡವಿದೆ ಎಂದು ಸಂಸದ ನಾರಾಯಣ ಸ್ವಾಮಿ ಆರೋಪಿಸಿದ್ದಾರೆ.

a-narayanaswamy-statement-on-mangalore-bomb-found
ಸಂಸದ ನಾರಾಯಣಸ್ವಾಮಿ

ಚಿತ್ರದುರ್ಗ: ಮಂಗಳೂರು ಬಾಂಬ್​ ಪ್ರಕರಣದಲ್ಲಿ ವಿರೋಧ ಪಕ್ಷದವರ ಕೈವಾಡವಿದೆ ಎಂದು ಸಂಸದ ನಾರಾಯಣ ಸ್ವಾಮಿ ಆರೋಪಿಸಿದ್ದಾರೆ.

ವಿರೋಧ ಪಕ್ಷದವರೇ ಈ ಕೃತ್ಯ ಮಾಡಿಸಿರಬಹುದು, ಅಲ್ಲದೆ ಎನ್ಆರ್​ಸಿ ಹಾಗೂ ಸಿಎಎ ಜಾರಿಯಾದ ಬಳಿಕ ಕಾಂಗ್ರೆಸ್, ಜೆಡಿಎಸ್ ಪಾಕಿಸ್ತಾನದ ಏಜೆಂಟ್ಗಳಂತೆ ನಡೆದುಕೊಳ್ಳುತ್ತಿವೆ ಎಂದು ಸಂಸದ ಎ. ನಾರಾಯಣ ಸ್ವಾಮಿ ವಾಗ್ದಾಳಿ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭೆಯಲ್ಲಿ ಭಾಗಿಯಾದ ಬಳಿಕ ಮಾತನಾಡಿದ ಅವರು, ಮಂಗಳೂರು ಏರ್ಪೋರ್ಟ್ ಬಾಂಬ್ ಪ್ರಕರಣ ಅಣಕು ಪ್ರದರ್ಶನ ಎಂದಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿಯಾಗಿ ಇಂತಹ ಹೇಳಿಕೆ ನೀಡಿರೋದು ನೋವಿನ ಸಂಗತಿ, ಅವರ ಹೇಳಿಕೆ ಪೊಲೀಸರ ನೈತಿಕತೆಯನ್ನು ಕುಗ್ಗಿಸುವ ರೀತಿ ಇದೆ. ಕರ್ನಾಟಕ ಪೊಲೀಸರು ಪ್ರಬುದ್ಧರು, ಬಾಂಬರ್ ಆದಿತ್ಯ ರಾವ್ ವಿರುದ್ಧ ತನಿಖೆ ನಡೆಯುತ್ತಿದ್ದು, ಆರೋಪಿ ಮಾನಸಿಕ ಅಸ್ವಸ್ಥ ಅನ್ನೋದು ಇನ್ನೂ ದೃಢವಾಗಿಲ್ಲ, ಈ ಕುರಿತು ಮೆಡಿಕಲ್ ವರದಿ ಬಂದಿಲ್ಲ, ವರದಿ ಬಂದ ಬಳಿಕ ಫೈನಲ್ ಆಗತ್ತೆ ಎಂದರು.

ಮಂಗಳೂರು ಬಾಂಬ್​ ಪ್ರಕರಣದ ಕುರಿತು ಸಂಸದ ಎ. ನಾರಾಯಣಸ್ವಾಮಿ ಹೇಳಿಕೆ

ಆದಿತ್ಯ ರಾವ್ ಗೂ - ಬಿಜೆಪಿಗೂ ಯಾವುದೇ ಸಂಬಂಧವಿಲ್ಲ, ಸಾರ್ವಜನಿಕ ಜೀವನದಲ್ಲಿ ಯಾರು ಯಾರ ಜೊತೆಯಲ್ಲಿ ಬೇಕಾದರೂ ಫೋಟೋ ತೆಗೆಸಿಕೊಳ್ಳಬಹುದು ಎಂದು ಪಕ್ಷಕ್ಕೂ ಆರೋಪಿಗೂ ನಂಟಿಲ್ಲ ಎಂದು ಪರೋಕ್ಷವಾಗಿ ಹೇಳಿದರು.

Intro:ಪಾಕಿಸ್ತಾನ, ಬಾಂಗ್ಲಾದೇಶವನ್ನು ಭಾರತದ ಜೊತೆ ಸೇರಿಕೊಂಡು ಅಖಂಡ ಭಾರತ ಮಾಡ್ತಿವಿ
ಸಂಸದ ಎ ನಾರಾಯಣ ಸ್ವಾಮಿ

ಆ್ಯಂಕರ್:- ಪಾಕಿಸ್ತಾನ, ಬಾಂಗ್ಲಾದೇಶ, ಭಾರತ ಒಳಗೊಂಡ ಅಖಂಡ ಭಾರತ ಸಂಕಲ್ಪ ನಮ್ಮದಾಗಿದ್ದು, ಪಾಕಿಸ್ತಾನ, ಬಾಂಗ್ಲಾದೇಶವನ್ನು ಭಾರತದ ಜೊತೆ ಸೇರಿಕೊಂಡು ಅಖಂಡ ಭಾರತ ಮಾಡ್ತಿವಿ, ಪಾಕಿಸ್ತಾನ, ಬಾಂಗ್ಲಾದೇಶದವರಿಗೆ ಹಿಂದುತ್ವ ಸಾರಿ ಹೇಳಿ ಭಾರತದ ಜೊತೆ ಸೇರಿಸಿಕೊಳ್ತಿವಿ ಎಂದು ಚಿತ್ರದುರ್ಗದ ಸಂಸದ ಎ ನಾರಾಯಣ ಸ್ವಾಮಿ ಸಾರಿ ಸಾರಿ ಹೇಳಿದ್ರು, ಜಿಲ್ಲಾಧಿಕಾರಿ ಕಛೇರಿಯ ಸಭೆಯಲ್ಲಿ ಭಾಗಿಯಾದ ಬಳಿಕ ಮಾತನಾಡಿದ ಅವರು ಚಿಟಿಕೆ ಹೊಡೆದು ಅಖಂಡ ಭಾರತ ಮಾಡ್ತಿವಿ ಎಂದು ಎ ನಾರಾಯಣಸ್ವಾಮಿ ಸವಾಲ್ ಹಾಕಿದರು. ಇನ್ನೂ ಮಂಗಳೂರು ಏರ್ಪೋರ್ಟ್ ಬಾಂಬ್ ಪ್ರಕರಣ ಅಣಕು ಪ್ರದರ್ಶನ ಎಂದಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿಯಾಗಿ ಇಂತಹ ಹೇಳಿಕೆ ನೀಡಿರೋದು ನೋವಿನ ಸಂಗತಿ, ಕುಮಾರಸ್ವಾಮಿ ಹೇಳಿಕೆ ಪೊಲೀಸರ ನೈತಿಕತೆಯನ್ನು ಕುಗ್ಗಿಸುವ ರೀತಿ ಇದ್ದು, ಕರ್ನಾಟಕ ಪೊಲೀಸರು ಪ್ರಬುದ್ಧರು, ಬಾಂಬರ್ ಆದಿತ್ಯ ರಾವ್ ವಿರುದ್ಧ ತನಿಖೆ ನಡೆಯುತ್ತಿದ್ದು, ಆದಿತ್ಯ ರಾವ್ ಮಾನಸಿಕ ಅಸ್ವಸ್ಥ ಅನ್ನೋದು ಇನ್ನೂ ದೃಢವಾಗಿಲ್ಲ, ಮೆಡಿಕಲ್ ವರದಿ ಬಂದಿಲ್ಲ, ವರದಿ ಬಂದ ಬಳಿಕ ಫೈನಲ್ ಆಗತ್ತದ ಎಂದರು. ಆದಿತ್ಯ ರಾವ್ ಗೂ - ಬಿಜೆಪಿಗೂ ಯಾವುದೇ ಸಂಬಂಧವಿಲ್ಲ, ಸಾರ್ವಜನಿಕ ಜೀವನದಲ್ಲಿ ಯಾರು ಯಾರ ಜೊತೆಲೀ ಬೇಕಾದರೂ ಫೋಟೋ ತೆಗೆಸಿಕೊಳ್ಳಬಹುದು ಎಂದು ಬಿಜೆಪಿಗು ಆದಿತ್ಯ ರಾವ್ ಗು ಯಾವುದೇ ಸಂಬಂಧ ಇಲ್ಲ ಎಂದು ಪರೋಕ್ಷವಾಗಿ ಹೇಳಿದರು,
ವಿರೋಧ ಪಕ್ಷದವರೇ ಈ ಕೃತ್ಯ ಮಾಡಿಸಿರಬಹುದು, ಎನ್ ಆರ್ಸಿ ಹಾಗೂ ಸಿಎಎ ಜಾರಿಯಾದ ಬಳಿಕ ವಿರೋಧ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಪಾಕಿಸ್ತಾನದ ಏಜೆಂಟರ್ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಕುಟುಕಿದರು.

ಫ್ಲೋ,,,,,

ಬೈಟ್01:- ಎ ನಾರಾಯಣ ಸ್ವಾಮಿ, ಸಂಸದ
Body:mpConclusion:avb

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.