ETV Bharat / state

ಅಧಿಕಾರದಲ್ಲಿರೋದು ಬಿಜೆಪಿ.. ಕಾಂಗ್ರೆಸ್​ನ ಯಾವ ಹಗರಣವನ್ನು ಬಯಲು ಮಾಡಲು ಸಾಧ್ಯವಾಯಿತು?

author img

By

Published : Apr 16, 2022, 8:10 PM IST

ಕಾಂಗ್ರೆಸ್ ಹಗರಣವನ್ನು ಜನರ ಮುಂದೆ ಇಡಬೇಕಾಗುತ್ತದೆಯೆಂಬ ಸಿಎಂ ಬೊಮ್ಮಾಯಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ..

siddaramaiah
ಸಿದ್ದರಾಮಯ್ಯ

ಚಿಕ್ಕಮಗಳೂರು : ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷವಾಯಿತು. ಅಧಿಕಾರದಲ್ಲಿ ಅವರೇ ಇದ್ದಾರೆ, ಏನು ಬಯಲು ಮಾಡಿದ್ರು? ಎಂದು ಸಿಎಂ ಬೊಮ್ಮಾಯಿ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಚಿಕ್ಕಮಗಳೂರಿನಲ್ಲಿ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಕಾಂಗ್ರೆಸ್ ಹಗರಣವನ್ನು ಜನರ ಮುಂದೆ ಇಡಬೇಕಾಗುತ್ತದೆಯೆಂದು ಸಿಎಂ ಬೊಮ್ಮಾಯಿ ಹೇಳಿದ್ದರು.

ರಾಜ್ಯ, ಕೇಂದ್ರದಲ್ಲೂ ಬಿಜೆಪಿ ಸರ್ಕಾರವಿದೆ. ಏನು ಬಯಲು ಮಾಡಿದ್ರು. ಸುಮ್ಮನೆ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಬಿಜೆಪಿಯವರಿಗೆ ಸಮರ್ಥನೆ ಮಾಡಿಕೊಳ್ಳಲು ಯಾವುದೇ ವಿಚಾರಗಳಿಲ್ಲ. ಈಶ್ವರಪ್ಪ 40 ಪರ್ಸೆಂಟ್ ಕಮೀಷನ್ ಡಿಮ್ಯಾಂಡ್ ಮಾಡದಿದ್ದರೆ ರಾಜೀನಾಮೆ ಯಾಕೆ ಕೊಡುತ್ತಿದ್ದರು? ಹೈಕಮಾಂಡ್ ಯಾಕೆ ಈಶ್ವರಪ್ಪನವರ ರಾಜೀನಾಮೆ ಪಡೆಯುತ್ತಿತ್ತು ? ಎಂದು ಪ್ರಶ್ನೆ ಮಾಡಿದರು.

ಬಿಜೆಪಿ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿರುವುದು..

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪನೇ ನನ್ನ ಸಾವಿಗೆ ಕಾರಣವೆಂದು ಡೆತ್ ನೋಟ್‌ನಲ್ಲಿ ಸಂತೋಷ್ ಹೇಳಿದ್ದಾರೆ. ವಾಟ್ಸ್‌ಆ್ಯಪ್ ಮೂಲಕ ಎಲ್ಲರಿಗೂ ಮೆಸೇಜ್ ಮಾಡಿದ್ದಾರೆ. ಡಿವೈಎಸ್ಪಿ ಗಣಪತಿ, ಸಂತೋಷ್ ಪಾಟೀಲ್ ಪ್ರಕರಣವನ್ನು ಹೋಲಿಕೆ ಮಾಡಲು ಆಗುವುದಿಲ್ಲ. ಡಿವೈಎಸ್ಪಿ ಗಣಪತಿ ಪ್ರಕರಣದಲ್ಲಿ ಜಾರ್ಜ್‌ಗೆ ಸಿಬಿಐ ಕ್ಲೀನ್ ಚಿಟ್ ಸಿಕ್ಕಿದೆ. ಸಿಬಿಐ ಕೇಂದ್ರ ಸರ್ಕಾರದ ಅಧೀನದಲ್ಲಿ ಇರೋದಲ್ವೇ?ಬಿಜೆಪಿ ನಾಯಕರು ಗೊತ್ತಿದ್ದು-ಗೊತ್ತಿದ್ದು ಸುಳ್ಳು ಹೇಳುತ್ತಿದ್ದಾರೆ ಎಂದರು.

ಇದನ್ನೂ ಓದಿ: ಪಿಎಸ್ಐ ಪರೀಕ್ಷೆ ಅಕ್ರಮ : ಮೂವರು ಮಹಿಳಾ ಮೇಲ್ವಿಚಾರಕಿಯರು ಸೇರಿ 6 ಜನ ಅರೆಸ್ಟ್​

ಚಿಕ್ಕಮಗಳೂರಿನಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಪ್ರತಿಭಟನಾ ಸಮಾವೇಶಕ್ಕೆ ಮಳೆ ಅಡ್ಡಿ ಉಂಟು ಮಾಡಿತ್ತು. ಸಿದ್ದರಾಮಯ್ಯ ಭಾಷಣ ಆರಂಭಿಸುತ್ತಿದ್ದಂತೆ ಮಳೆ ಶುರುವಾಗಿದೆ. ಮಳೆಯನ್ನು ಲೆಕ್ಕಿಸದೇ ಭಾಷಣವನ್ನು ಮುಂದುವರಿಸಿದ್ದಾರೆ. ಆ ವೇಳೆ ಕಾರ್ಯಕರ್ತರು ಸಿದ್ದರಾಮಯ್ಯ ಅವರಿಗೆ ಕೊಡೆ ಹಿಡಿದರು. ಇನ್ನೂ ಸಿದ್ದರಾಮಯ್ಯ ಭಾಷಣದ ವೇಳೆ ಚೇರ್ ಮೇಲೆ ಹತ್ತಿದ್ದ ಕಾರ್ಯಕರ್ತರನ್ನು, ಫೋಟೋಗ್ರಾಫರ್​ರನ್ನು ಕೆಳಗಿಳಿಯುವಂತೆ ಸಿದ್ದರಾಮಯ್ಯ ಗದರಿಸಿದರು. ಬಳಿಕ ಕೈ ಕಾರ್ಯಕರ್ತರು ಚೇರ್​ನಿಂದ ಕೆಳಗಿಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.