ETV Bharat / state

ಬಾಳೆಹೊನ್ನೂರು ಪೀಠಕ್ಕೆ ಭೇಟಿ ನೀಡಿದ ನೂತನ ಗೃಹಮಂತ್ರಿ : ಶ್ರೀರಕ್ಷೆ ಪಡೆದ ಆರಗ ಜ್ಞಾನೇಂದ್ರ

author img

By

Published : Aug 7, 2021, 6:50 PM IST

ನಾನು ಇನ್ನೂ ಗೃಹ ಮಂತ್ರಿಯಾಗಿ ಚಾರ್ಜ್ ತೆಗೆದುಕೊಂಡಿಲ್ಲ. ನನ್ನ ಮನಸ್ಸಿನಲ್ಲಿ ಅನೇಕ ವಿಚಾರಗಳಿವೆ. ಸಾಕಷ್ಟು ಮಾಡುವ ಕೆಲಸಗಳಿವೆ. ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ದನ ಕಳ್ಳ ಸಾಗಣೆ ಹೆಚ್ಚಾಗಿ ನಡೆಯುತ್ತದೆ. ಇದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು..

araga-jnanendra
ಆರಗ ಜ್ಞಾನೆಂದ್ರ

ಚಿಕ್ಕಮಗಳೂರು : ಜಿಲ್ಲೆಯ ಎನ್‌ಆರ್‌ಪುರ ತಾಲೂಕಿನ ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠಕ್ಕೆ ನೂತನ ಗೃಹಮಂತ್ರಿ ಆರಗ ಜ್ಞಾನೇಂದ್ರ ಅವರು ಭೇಟಿ ನೀಡಿ ಜಗದ್ಗುರು ರಂಭಾಪುರಿ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ನೂತನ ಗೃಹಮಂತ್ರಿಯವರನ್ನು ಆತ್ಮೀಯವಾಗಿ ಮಠಕ್ಕೆ ಬರಮಾಡಿಕೊಂಡ ರಂಭಾಪುರಿ ಶ್ರೀಗಳು ಗೌರವ ಸಮರ್ಪಣೆ ಮಾಡಿದರು. ನಂತರ ಕೆಲ ಸಮಯ ಕುಶಲೋಪರಿ ಕುರಿತು ಚರ್ಚೆ ನಡೆಸಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಜ್ಞಾನೇಂದ್ರ ಅವರು, ಜಿಲ್ಲೆಯಲ್ಲಿ ಕೊರೊನಾ ಬೆಳವಣಿಗೆ ಹಾಗೂ ಪ್ರವಾಹದ ಸಮೀಕ್ಷೆ ನಡೆಸಲು ನಾನು ಬಂದಿದ್ದೇನೆ. ಇಂದು ಬೆಳಗ್ಗಿನಿಂದಲೂ ಜಿಲ್ಲೆಯಲ್ಲಿ ಸಂಚರಿಸಿ ಅಧಿಕಾರಿಗಳನ್ನು ಭೇಟಿಯಾಗಿ ಕೋವಿಡ್​​ ಕುರಿತು ನಿರ್ದೇಶನ ನೀಡುವ ಕೆಲಸ ಮಾಡುತ್ತೇನೆ ಎಂದರು.

ಶೂಟೌಟ್​ ಪ್ರಕರಣ, ದನ ಕಳ್ಳ ಸಾಗಾಣೆ ಕುರಿತು ಕ್ರಮ

ನಾನು ಇನ್ನೂ ಗೃಹ ಮಂತ್ರಿಯಾಗಿ ಚಾರ್ಜ್ ತೆಗೆದುಕೊಂಡಿಲ್ಲ. ನನ್ನ ಮನಸ್ಸಿನಲ್ಲಿ ಅನೇಕ ವಿಚಾರಗಳಿವೆ. ಸಾಕಷ್ಟು ಮಾಡುವ ಕೆಲಸಗಳಿವೆ. ಕಳೆದ ಕೆಲ ವರ್ಷಗಳ ಹಿಂದೆ ನಡೆದ ಶೃಂಗೇರಿಯ ತನಿಕೋಡು ಚೆಕ್ ಪೋಸ್ಟ್ ಬಳಿ ನಡೆದ ಶೂಟೌಟ್ ಪ್ರಕರಣ ಬಗ್ಗೆ ನನಗೆ ಮಾಹಿತಿಯಿಲ್ಲ.

ಅಧಿಕಾರಿಗಳಿಂದ ಮಾಹಿತಿಯನ್ನು ಪಡೆಯುತ್ತೇನೆ. ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ದನ ಕಳ್ಳ ಸಾಗಣೆ ಹೆಚ್ಚಾಗಿ ನಡೆಯುತ್ತದೆ. ಇದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.