ಮೂಡಿಗೆರೆ: ಹಿಂದೂಪರ ಸಂಘಟನೆಯಿಂದ ತೇಜಸ್ವಿ ಸೂರ್ಯ ಕಾರಿಗೆ ಮುತ್ತಿಗೆ ಯತ್ನ

author img

By

Published : Sep 16, 2021, 3:55 PM IST

mp-tejashwi-suryas-car-attacked-in-mudigere

ಕಾಂಗ್ರೆಸ್‍ಗೆ ರಾತ್ರೋರಾತ್ರಿ ಮಂದಿರ, ದೈವದ ಬಗ್ಗೆ ಪ್ರೀತಿ ಬಂದಿದೆ. ಆಷಾಢಭೂತಿತನ ತೋರಿಸುತ್ತಿರುವ ಕಾಂಗ್ರೆಸ್ಸಿಗರ ನಾಟಕವನ್ನು ಜನರು ನಂಬಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಟೀಕಿಸಿದರು.

ಚಿಕ್ಕಮಗಳೂರು: ಮೈಸೂರಿನಲ್ಲಿ ದೇವಸ್ಥಾನ ಕೆಡವಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಿಲ್ಲೆಯ ಮೂಡಿಗೆರೆ ಬಸ್​ ನಿಲ್ದಾಣದ ಮುಂಭಾಗದಲ್ಲಿ ಹಿಂದೂಪರ ಸಂಘಟನೆಗಳು ಸಂಸದರಿಗೆ ಮುತ್ತಿಗೆ ಹಾಕುವ ಯತ್ನ ನಡೆಸಿದರು.

ಹಿಂದೂಪರ ಸಂಘಟನೆಯಿಂದ ಸಂಸದರ ಕಾರಿಗೆ ಮುತ್ತಿಗೆ ಯತ್ನ

ಸಂಸದರಾದ ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹಗೆ ಮುತ್ತಿಗೆ ಹಾಕಲು ಯತ್ನಿಸಿರುವ ಹಿಂದೂಪರ ಸಂಘಟನೆಗಳು ಕಪ್ಪುಪಟ್ಟಿ ಪ್ರದರ್ಶನ ಮಾಡಿ ಆಕ್ರೋಶ ಹೊರಹಾಕಿದರು. ದೇವಸ್ಥಾನಗಳನ್ನು ರಕ್ಷಣೆ ಮಾಡುವಂತೆ ಆಗ್ರಹಿಸಿದರು. ಈ ವೇಳೆ ಸಂಸದರು ಕಾರ್ಯಕರ್ತರನ್ನು ಮನವೊಲಿಸುವ ಪ್ರಯತ್ನ ನಡೆಸಿದರು.

ಬಳಿಕ ಮಾತನಾಡಿದ ತೇಜಸ್ವಿ ಸೂರ್ಯ, ಮಂದಿರ ರಕ್ಷಣೆ ಹೆಸರಲ್ಲಿ ಶೇ.5 ರಷ್ಟು ಲಾಭಕ್ಕೆ ಕಾಂಗ್ರೆಸ್ ಯತ್ನಿಸುತ್ತಿದೆ. ಇಷ್ಟು ವರ್ಷ ಯಾರನ್ನು ಆರಾಧಿಸಿದ್ದಾರೆ?, ಪೂಜೆ ಮಾಡಿದ್ದಾರೆ ಎಲ್ಲಾ ಗೊತ್ತಿದೆ. ಕಾಂಗ್ರೆಸ್‍ಗೆ ರಾತ್ರೋರಾತ್ರಿ ಮಂದಿರ, ದೈವದ ಬಗ್ಗೆ ಪ್ರೀತಿ ಬಂದಿದೆ. ಆಷಾಢಭೂತಿತನ ತೋರಿಸುತ್ತಿರುವ ಕಾಂಗ್ರೆಸ್ಸಿಗರ ನಾಟಕವನ್ನು ಜನ ನಂಬಲ್ಲ. ಮೂರ್ತಿಬಂಜಕ ಟಿಪ್ಪು ಜಯಂತಿ ಮಾಡಿದವರ ಬಗ್ಗೆ ಜನಕ್ಕೆ ಗೊತ್ತಿದೆ. ಅವರ ಈ ನಾಟಕವನ್ನು ಮೊದಲು ನಿಲ್ಲಿಸಲಿ ಎಂದು ಹೇಳಿದರು.

ಇದನ್ನೂ ಓದಿ: ದಸರಾ ಉದ್ಘಾಟಕರನ್ನು ಸಿಎಂ ಅಂತಿಮಗೊಳಿಸುತ್ತಾರೆ: ಸಚಿವ ಎಸ್‌. ಟಿ ಸೋಮಶೇಖರ್

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.