ETV Bharat / state

ಎನ್. ಮಹೇಶ್ ನೆಲೆಗಾಗಿ ಬಿಜೆಪಿಗೆ ಬಂದಿದ್ದಾರೆ.. ಶಾಸಕ ಎಂ ಪಿ ಕುಮಾರಸ್ವಾಮಿ

author img

By

Published : Aug 24, 2021, 4:05 PM IST

ಹಿಂದೂ ಧರ್ಮವನ್ನು ಮನು ಧರ್ಮ ಎಂದವರಿಗೆ ಸಚಿವ ಸ್ಥಾನ ಕೊಡುವುದಕ್ಕೆ ನನ್ನ ವಿರೋಧವಿದೆ ಎಂದು ಶಾಸಕ ಎನ್​. ಮಹೇಶ್​ ವಿರುದ್ಧ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಮಾತನಾಡಿದ್ದಾರೆ.

mp-kumaraswamy-statement-on-n-mahesh
ಕುಮಾರಸ್ವಾಮಿ

ಚಿಕ್ಕಮಗಳೂರು: ಶಾಸಕ ಎನ್​, ಮಹೇಶ್​​ ಹಿಂದೂ ಧರ್ಮ, ವೈದಿಕ ಧರ್ಮವನ್ನು ಹೀನಾಯವಾಗಿ ನಿಂದಿಸಿದ್ದರು. ಅವರು ಜನಾಂಗ ಒಡೆದು ಶಾಸಕರಾಗಿ ಬಂದಿದ್ದಾರೆ. ಇಂತಹವರಿಗೆ ಸಚಿವ ಸ್ಥಾನ ಸಿಗುತ್ತೆ ಅನ್ನೋದಾದರೆ ಅದಕ್ಕೆ ನನ್ನ ವಿರೋಧವಿದೆ ಎಂದು ಬಿಜೆಪಿ ಶಾಸಕ ಎಂ. ಪಿ. ಕುಮಾರಸ್ವಾಮಿ ಹೇಳಿದ್ದಾರೆ.

ಹಿಂದೂ ಧರ್ಮವನ್ನು ನಿಂದಿಸಿದವರಿಗೆ ಸಚಿವ ಸ್ಥಾನ ಸಿಗುವುದಕ್ಕೆ ನನ್ನ ವಿರೋಧವಿದೆ ಎಂದ ಶಾಸಕ ಎಂಪಿ ಕುಮಾರಸ್ವಾಮಿ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎನ್.ಮಹೇಶ್ ಹಿಂದೂ ಧರ್ಮವನ್ನ ಮನು ಧರ್ಮ, ಜಾತಿ-ಧರ್ಮ ಎಂದು ಎತ್ತಿಕಟ್ಟಿ, ಜನಾಂಗ ಒಡೆದು ಶಾಸಕರಾಗಿದ್ದಾರೆ. ಇಂತಹವರನ್ನು ಬಿಜೆಪಿ ಸೇರಿಸಿಕೊಂಡಿರುವುದಕ್ಕೆ ನನ್ನ ಆಕ್ಷೇಪ ಇದೆ ಎಂದರು.

ಪಕ್ಷಕ್ಕಾಗಿ ದುಡಿದವರು ಮೂವರು ಇದ್ದೇವೆ, ನಮ್ಮಲ್ಲೇ ಯಾರನ್ನಾದ್ರು ಸಚಿವರನ್ನಾಗಿ ಮಾಡುತ್ತಾರೆ. ನಾನು ಏನಾದ್ರು ಹೇಳಿಕೆ ಕೊಟ್ರೆ ಪಕ್ಷಕ್ಕೆ ಎಚ್ಚರಿಕೆ ಕೊಟ್ಟಂತಾಗುತ್ತೆ, ಈಗ ಬೇಡ ಎಂದು ಹೇಳಿದ್ರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.