ಚಿಕ್ಕಮಗಳೂರು ಕಾಫಿ ಎಸ್ಟೇಟ್​ನಲ್ಲಿ 50ಕ್ಕೂ ಹೆಚ್ಚು ಕಾಡುಕೋಣಗಳು ಪ್ರತ್ಯಕ್ಷ!

author img

By

Published : Sep 26, 2021, 11:02 AM IST

more than 50 bisons found in coffee estate

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭೂತನಕಾಡು ಗ್ರಾಮದಲ್ಲಿ 50ಕ್ಕೂ ಹೆಚ್ಚು ಕಾಡುಕೋಣಗಳ ಹಿಂಡು ಪ್ರತ್ಯಕ್ಷವಾಗಿದ್ದು, ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ದಿನದಿಂದ ದಿನಕ್ಕೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದೆ. ಇದೀಗ ಕಾಫಿ ಎಸ್ಟೇಟ್​ವೊಂದರಲ್ಲಿ 50ಕ್ಕೂ ಹೆಚ್ಚು ಕಾಡುಕೋಣಗಳ ಹಿಂಡು ಕಾಣಿಸಿಕೊಂಡಿದ್ದು, ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

ಮೂಡಿಗೆರೆ ತಾಲೂಕಿನ ಭೂತನಕಾಡುವಿನ ಸಿದ್ದಗಂಗಾ ಕಾಫಿ ಎಸ್ಟೇಟ್ ಬಳಿ ಸುಮಾರು 50ಕ್ಕೂ ಅಧಿಕ ಕಾಡುಕೋಣಗಳ ಹಿಂಡು ಪ್ರತ್ಯಕ್ಷವಾಗಿದ್ದು, ಪರಿಣಾಮ ಕಾರ್ಮಿಕರು ಆತಂಕಗೊಂಡು ಕಾಫಿ ತೋಟದಿಂದ ಕಾಲ್ಕಿತ್ತಿದ್ದಾರೆ.

ಕಾಫಿ ಎಸ್ಟೇಟ್​ನಲ್ಲಿ ಕಾಣಿಸಿಕೊಂಡ ಕಾಡುಕೋಣಗಳು

ಕಾಡುಕೋಣಗಳ ಹಾವಳಿಯಿಂದ ಕಾಫಿ, ಮೆಣಸು ಬೆಳೆಗಳು ಹಾನಿಯಾಗಿವೆ. ತೋಟದ ಮಾಲೀಕರು ಪ್ರಾಣಿಗಳನ್ನು ಓಡಿಸಲು ಶಬ್ದ ಮಾಡಿದರು ಕೂಡ ಅದಕ್ಕೆ ಕ್ಯಾರೇ ಎನ್ನದೆ ರಸ್ತೆಗೆ ಅಡ್ಡಲಾಗಿ ನಿಲ್ಲುತ್ತಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.