ETV Bharat / state

ಹೆಬ್ಬೆಟ್ಟಿನ ಜನ ಕೂಡ ಮತ್ತೊಬ್ಬರ ಬಳಿ ಕೇಳಿ ಹೆಬ್ಬೆಟ್ಟು ಒತ್ತುತ್ತಾರೆ : ಸಿ ಟಿ ರವಿ

author img

By

Published : Dec 25, 2021, 3:08 PM IST

ಮುಂದಿನ ಚುನಾವಣೆ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್, ಸೋನಿಯಾಗಾಂಧಿ, ಪರಮೇಶ್ವರ್ ಯಾರ ನಾಯಕತ್ವದಲ್ಲಾದರು ಎಲೆಕ್ಷನ್ ಮಾಡಲಿ. ಯಾರ ನೇತೃತ್ವದಲ್ಲಿ ಕಾಂಗ್ರೆಸ್ ಹೋದರು ಅಧಿಕಾರಕ್ಕೆ ಬರಲ್ಲ. ಕಾಂಗ್ರೆಸ್ ನಿಲುವು ಏನೆಂದು ವಿಧಾನಸಭೆ ಅಧಿವೇಶನದಲ್ಲೇ ನೋಡಿದ್ದೇವೆ. ಕಾಂಗ್ರೆಸ್ ನಿಲುವುಗಳೇ ಕಾಂಗ್ರೆಸ್ ಪಕ್ಷಕ್ಕೆ ಮಾರಕವಾಗಿವೆ. ಅವರ ನಿಲುವು, ತತ್ವಗಳಿಂದ ಕಾಂಗ್ರೆಸ್ ಸೋಲುತ್ತಿದೆ, ಅವರ ತತ್ವ-ನಿಲುವು ಜನಹಿತಕ್ಕೆ ಮಾರಕ..

ಸಿ ಟಿ ರವಿ
ಸಿ ಟಿ ರವಿ

ಚಿಕ್ಕಮಗಳೂರು : ಓದು, ಬರಹ ಬರದ ಹೆಬ್ಬೆಟ್ಟಿನ ಜನ ಕೂಡ ಮತ್ತೊಬ್ಬರ ಬಳಿ ಕೇಳಿ ಹೆಬ್ಬೆಟ್ಟು ಒತ್ತುತ್ತಾರೆ. ಹೆಬ್ಬೆಟ್ಟಿನ ಜನರಿಗಾದ್ರೂ ಸ್ವಲ್ಪ ತಿಳುವಳಿಕೆ ಇರುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಿ ಟಿ ರವಿ ವಾಗ್ದಾಳಿ ನಡೆಸಿರುವುದು..

ನಗರದಲ್ಲಿ ಮಾತನಾಡಿದ ಅವರು, ಇವರದ್ದು ಬರೀ ನಾಟಕ. 2016ರಲ್ಲಿ ಮತಾಂತರ ಡ್ರಾಫ್​​​ಗೆ ಸಹಿ ಹಾಕಿ, ನಾನು ಸಹಿ ಹಾಕಿಲ್ಲ ಅಂತಾರೆ. ಆಮೇಲೆ ತೋರಿಸಿ ಎನ್ನುತ್ತಾರೆ. ತೋರಿಸಿದ ಮೇಲೆ ಗೊತ್ತಿಲ್ಲದೆ ಸಹಿ ಹಾಕಿದ್ದೇನೆ ಅಂತಾರೆ. ಇದು ಇವರ ರಾಜಕೀಯ ನಾಟಕ. ಕಾಂಗ್ರೆಸ್ ಚುಲಾವಣೆಯಲ್ಲಿ ಇಲ್ಲದ ಸವಕಲು ನಾಣ್ಯ ಎಂದರು.

ಮುಂದಿನ ಚುನಾವಣೆ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್, ಸೋನಿಯಾಗಾಂಧಿ, ಪರಮೇಶ್ವರ್ ಯಾರ ನಾಯಕತ್ವದಲ್ಲಾದರು ಎಲೆಕ್ಷನ್ ಮಾಡಲಿ. ಯಾರ ನೇತೃತ್ವದಲ್ಲಿ ಕಾಂಗ್ರೆಸ್ ಹೋದರು ಅಧಿಕಾರಕ್ಕೆ ಬರಲ್ಲ. ಕಾಂಗ್ರೆಸ್ ನಿಲುವು ಏನೆಂದು ವಿಧಾನಸಭೆ ಅಧಿವೇಶನದಲ್ಲೇ ನೋಡಿದ್ದೇವೆ. ಕಾಂಗ್ರೆಸ್ ನಿಲುವುಗಳೇ ಕಾಂಗ್ರೆಸ್ ಪಕ್ಷಕ್ಕೆ ಮಾರಕವಾಗಿವೆ. ಅವರ ನಿಲುವು, ತತ್ವಗಳಿಂದ ಕಾಂಗ್ರೆಸ್ ಸೋಲುತ್ತಿದೆ, ಅವರ ತತ್ವ-ನಿಲುವು ಜನಹಿತಕ್ಕೆ ಮಾರಕ ಎಂದರು.

ನಂತರ ಮೇಕೆದಾಟು ಕಾಂಗ್ರೆಸ್ ಪಾದಯಾತ್ರೆ ವಿಚಾರ ಮಾತನಾಡಿ, ಅವರು ಪಾದಯಾತ್ರೆ, ಉರುಳು ಸೇವೆ ಏನು ಬೇಕಾದರೂ ಮಾಡಬಹುದು, ಮಾಡಿಕೊಳ್ಳಲಿ. ಕೇಂದ್ರದಲ್ಲಿ 2004 ರಿಂದ 2014ರವರೆಗೂ ಕಾಂಗ್ರೆಸ್ ಸರ್ಕಾರವಿತ್ತು. ಅನುಮತಿ ಕೊಟ್ಟಿದ್ರಾ..? 1996ರಲ್ಲಿ ಪ್ರಸ್ತಾವನೆ, ಮಂಜೂರಾತಿ ಮಾಡಿಸಿದ್ವಿ ಅಂತಾ ಹೆಚ್​​ಡಿಕೆ ಹೇಳಿದ್ದಾರೆ.

2004 ರಿಂದ 2014ರವರೆಗೆ ಕಾಂಗ್ರೆಸ್ ಸರ್ಕಾರ ಇತ್ತಲ್ಲ ಯಾಕೆ ಅನುಮತಿ ನೀಡಿಲ್ಲ. ಇವರ ಆಡಳಿತ ಅವಧಿಯಲ್ಲಿ ತೆಗೆದುಕೊಂಡ ಕ್ರಮ ಏನು..? ರಾಜಕೀಯ ಬದ್ಧತೆ ಇಲ್ಲ. ರಾಜಕೀಯ ನಾಟಕ ಆಡುತ್ತಿದ್ದಾರೆ, ನಾಟಕ ನಡೆಯಲಿ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.