ETV Bharat / state

ಚಿಕ್ಕಮಗಳೂರು: ಬಿಇಒ ಕಚೇರಿಯಲ್ಲೇ ವ್ಯವಸ್ಥಾಪಕ ಅಧಿಕಾರಿ ಆತ್ಮಹತ್ಯೆ

author img

By ETV Bharat Karnataka Team

Published : Jan 1, 2024, 6:36 PM IST

ವ್ಯವಸ್ಥಾಪಕ ಅಧಿಕಾರಿಯೊಬ್ಬರು ಡೆತ್​ನೋಟ್​ ಬರೆದಿಟ್ಟು, ಬಿಇಒ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.

Managing officer committed suicide in BEO office at Chikkamagaluru
ಚಿಕ್ಕಮಗಳೂರು: ಬಿಇಒ ಕಚೇರಿಯಲ್ಲೇ ವ್ಯವಸ್ಥಾಪಕ ಅಧಿಕಾರಿ ಆತ್ಮಹತ್ಯೆ

ಚಿಕ್ಕಮಗಳೂರು: ಬಿಇಒ ಕಚೇರಿಯ ವ್ಯವಸ್ಥಾಪಕ ಅಧಿಕಾರಿ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ. ಕಡೂರು ತಾಲೂಕು ಮೂಲದ ನಿಂಗ ನಾಯಕ (57) ಮೃತರು. ಕಚೇರಿಯಲ್ಲೇ ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಲ್ಲಿ ಕಳೆದ 2 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಅವರು ಇಂದು ಸಾವಿಗೆ ಶರಣಾಗಿದ್ದಾರೆ.

ಸೋಮವಾರ ಬೆಳಗ್ಗೆ ಮನೆಗೆ ಹಾಲು ತಂದು ಕೊಟ್ಟ ನಿಂಗ ನಾಯಕ, ಮನೆಯಲ್ಲಿ ವಾಕಿಂಗ್‌ ಹೋಗಿ ಬರ್ತೀನಿ ಎಂದು ಹೇಳಿ ಕಚೇರಿಗೆ ಹೋಗಿದ್ದರು. ಅಲ್ಲಿಯೇ ಸಾವಿಗೆ ಶರಣಾಗಿದ್ದಾರೆ. ಮೂಡಿಗೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಹಾಸನ: ಕೆರೆಗೆ ಹಾರಿ ಪತ್ನಿ ಆತ್ಮಹತ್ಯೆ, ರಕ್ಷಿಸಲು ಹೋದ ಪತಿಯೂ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.