ETV Bharat / state

ಚಿಕ್ಕಮಗಳೂರು: ಲೋಕಾಯುಕ್ತ ದಾಳಿ, ಬಿಇಒ ಕಚೇರಿ ಸಿಬ್ಬಂದಿ ವಶಕ್ಕೆ

author img

By ETV Bharat Karnataka Team

Published : Jan 8, 2024, 7:15 PM IST

Updated : Jan 9, 2024, 10:36 AM IST

ನಿವೃತ್ತ ಮುಖ್ಯ ಶಿಕ್ಷಕನಿಂದ ಲಂಚ ಪಡೆಯುತ್ತಿದ್ದ ವೇಳೆ ಬೀರೂರು ಬಿಇಒ ಕಚೇರಿ ಸಿಬ್ಬಂದಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ.

beo-office-staff-fell-into-lokayuktas-trap-while-accepting-bribe
ಚಿಕ್ಕಮಗಳೂರು: ಲೋಕಾಯುಕ್ತ ದಾಳಿ, ಎಸ್​ಡಿಎ ವಶಕ್ಕೆ

ಚಿಕ್ಕಮಗಳೂರು: ನಿವೃತ್ತ ಮುಖ್ಯಶಿಕ್ಷಕನಿಂದ ಲಂಚ ಪಡೆಯುತ್ತಿದ್ದ ವೇಳೆ ಬೀರೂರು ಬಿಇಒ ಕಚೇರಿ ದ್ವಿತೀಯ ದರ್ಜೆ ಸಹಾಯಕ ಚಂದ್ರಶೇಖರ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದೆ. ತರೀಕೆರೆ ತಾಲೂಕು ಹೊಸಗಂಗೂರು ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ನಿತೃತ್ತಿ ಹೊಂದಿದ ಎನ್. ಪರಮೇಶ್ ತಮ್ಮ ನಿವೃತ್ತಿ ನಂತರ ಸರ್ಕಾರದಿಂದ ಬರಬೇಕಾದ ಜಿಪಿಎಫ್, ಜಿಐಎಸ್ ಪಡೆದುಕೊಳ್ಳಲು ಬಿಇಒ ಕಚೇರಿಗೆ ತೆರಳಿದ ವೇಳೆ 40 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ.

ದ್ವಿತೀಯ ದರ್ಜೆ ಸಹಾಯಕ ಚಂದ್ರಶೇಖರ್​ ಮುಖ್ಯ ಶಿಕ್ಷಕನಿಂದ 40 ಸಾವಿರ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಇನ್ಸ್​ಪೆಕ್ಷರ್​ ಅನಿಲ್ ರಾಥೋಡ್ ನೇತೃತ್ವದ ಸಿಬ್ಬಂದಿಗಳ ತಂಡ ದಾಳಿ ನಡೆಸಿ ಎಸ್​ಡಿಎ ಚಂದ್ರಶೇಖರ್ ನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

ಇದನ್ನೂ ಓದಿ: ಮುಂಬೈ ಡಿಸಿಪಿ ಹೆಸರಿನಲ್ಲಿ ಹುಬ್ಬಳ್ಳಿ ವೈದ್ಯನಿಗೆ ₹ 30 ಲಕ್ಷ ವಂಚನೆ

Last Updated :Jan 9, 2024, 10:36 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.