ETV Bharat / state

ಚಿಕ್ಕಮಗಳೂರು: ಕರ್ತವ್ಯದಲ್ಲಿದ್ದ ಕೆಎಸ್‌ಆರ್‌ಟಿಸಿ ಬಸ್​ ಚಾಲಕ ಹೃದಯಾಘಾತದಿಂದ ಸಾವು

author img

By ETV Bharat Karnataka Team

Published : Dec 4, 2023, 10:57 PM IST

ಕರ್ತವ್ಯದಲ್ಲಿರುವಾಗಲೇ ಕೆಎಸ್‌ಆರ್‌ಟಿಸಿ ಬಸ್​ ಚಾಲಕ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿರುವ ಘಟನೆ ಮೂಡಿಗೆರೆಯಲ್ಲಿ ನಡೆದಿದೆ.

Etv Bharatksrtc-bus-driver-dies-due-to-heart-attack-in-mudigere
ಚಿಕ್ಕಮಗಳೂರು: ಕರ್ತವ್ಯದಲ್ಲಿದ್ದ ಕೆಎಸ್‌ಆರ್‌ಟಿಸಿ ಬಸ್​ ಚಾಲಕ ಹೃದಯಾಘಾತದಿಂದ ಸಾವು

ಚಿಕ್ಕಮಗಳೂರು: ಕರ್ತವ್ಯದಲಿದ್ದ ಕೆಎಸ್​ಆರ್​ಟಿಸಿ ಬಸ್ ಚಾಲಕ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಮೂಡಿಗೆರೆಯಲ್ಲಿ ಸೋಮವಾರ ನಡೆದಿದೆ. ಕೊಪ್ಪಳ ಮೂಲದ ರವಿ ಲಮಾಣಿ (45) ಮೃತರು.

ಮೂಡಿಗೆರೆಯಿಂದ ಗುತ್ತಿಹಳ್ಳಿ ಮಾರ್ಗವಾಗಿ ಹೆಸಗೋಡು ಗ್ರಾಮಕ್ಕೆ ಬಸ್​ ಚಲಾಯಿಸಿಕೊಂಡು ಹೋಗುವಾಗ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದೆ. ಸಮಯಪ್ರಜ್ಞೆ ಮೆರೆದ ಚಾಲಕ ರವಿ ಬಸ್ಸನ್ನು ಹೆಸಗೋಡು ಗ್ರಾಮದಲ್ಲಿ ನಿಲ್ಲಿಸಿದ್ದಾರೆ. ಕೊಡಲೇ ಅವರನ್ನು ಆಂಬ್ಯುಲೆನ್ಸ್​ ಮೂಲಕ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಚಾಲಕ ರವಿ ಲಮಾಣಿ ಸಾವನ್ನಪ್ಪಿದ್ದಾರೆ. ಮೂಡಿಗೆರೆ ಎಂಜಿಎಂ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಬಣಕಲ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಹೃದಯಾಘಾತದಿಂದ ಕಳಸ ಠಾಣೆಯ ಎಎಸ್​​ಐ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.