ETV Bharat / state

ಸುಮ್ನೇ ಭಯ ಉಂಟು ಮಾಡಿ, ಎಲ್ಲ ವ್ಯವಹಾರ ನಿಲ್ಲಿಸಬಾರದು.. ಇದರಲ್ಲಿ ಲಂಚ ಹೊಡೆಯೋದನ್ನ ಸರ್ಕಾರ ಬಿಡ್ಬೇಕು.. ಡಿಕೆಶಿ

author img

By

Published : Dec 3, 2021, 2:17 PM IST

ವೈರಸ್​​ ಬಗ್ಗೆ ಭಯದ ವಾತಾವರಣ ಸೃಷ್ಟಿಸಬಾರದು. ಸರ್ಕಾರ, ಆರೋಗ್ಯ ಇಲಾಖೆ ಮುಂಜಾಗೃತಾ ಕ್ರಮ ವಹಿಸಬೇಕು. ಸರ್ಕಾರಕ್ಕೆ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುತ್ತದೆ, ನಾವು ಅಡ್ಡಿ ಬರುವುದಿಲ್ಲ..

DK Sivakumar
ಡಿ.ಕೆ ಶಿವಕುಮಾರ್

ಚಿಕ್ಕಮಗಳೂರು : ಒಮಿಕ್ರಾನ್ ವೈರಸ್ ವಿಚಾರದಲ್ಲಿ ಈಗ ಮಾಹಿತಿ ಬರುತ್ತಿದೆ. ನಿಖರವಾಗಿ ಯಾವುದೇ ಪ್ರಕರಣಗಳು ಹೊರ ಬರುತ್ತಿಲ್ಲ. ಅಲ್ಲಿ ಇಲ್ಲಿ ಒಂದೊಂದು ಪ್ರಕರಣಗಳ ಬಗ್ಗೆ ವರದಿ ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷರ ಡಿ.ಕೆ ಶಿವಕುಮಾರ್ ಹೇಳಿದರು.

ಒಮಿಕ್ರಾನ್​​ ಬಗ್ಗೆ ಭಯ ಬೇಡ, ಮುಂಜಾಗೃತೆಕೈಗೊಳ್ಳಿ.. ಕೆಪಿಸಿಸಿ ಸಾರಥಿ ಡಿ ಕೆ ಶಿವಕುಮಾರ್

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ವೈರಸ್​​ ಬಗ್ಗೆ ಭಯದ ವಾತಾವರಣ ಸೃಷ್ಟಿಸಬಾರದು. ಸರ್ಕಾರ, ಆರೋಗ್ಯ ಇಲಾಖೆ ಮುಂಜಾಗೃತಾ ಕ್ರಮ ವಹಿಸಬೇಕು. ಸರ್ಕಾರಕ್ಕೆ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುತ್ತದೆ, ನಾವು ಅಡ್ಡಿ ಬರುವುದಿಲ್ಲ ಎಂದರು.

ಈಗಾಗಲೇ ಇಡೀ ದೇಶದ ಜನರು ನರಳುತ್ತಿದ್ದಾರೆ. ಸುಮ್ನೆ ಭಯ ಉಂಟು ಮಾಡಿ, ಎಲ್ಲಾ ವ್ಯವಹಾರಗಳನ್ನು ನಿಲ್ಲಿಸುವಂತೆ ಆಗಬಾರದು. ಜಾಗ್ರತೆ ಇರಬೇಕು. ಇದರಲ್ಲಿ ಕೂಡ ಲಂಚ ಹೊಡೆಯುವುದನ್ನು ಸರ್ಕಾರ ಬಿಡಬೇಕು ಎಂದು ಡಿಕೆಶಿ ಆಗ್ರಹಿಸಿದರು.

ಇದನ್ನೂ ಓದಿ: 'ಜಾತ್ಯತೀತತೆ ಜಪ ಮಾಡುತ್ತಲೇ ʼಸಂದೇಶ ಸನ್ನಿಧಿʼಯಲ್ಲಿ ʼಸಿದ್ಧಸೂತ್ರʼ ಹೆಣೆದ ʼರಕ್ಕಸ ರಾಜಕಾರಣʼಕ್ಕೆ ಕೊನೆಗಾಲ ಬಂದಿದೆ'-ಹೆಚ್‌ಡಿಕೆ ಟ್ವೀಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.