ETV Bharat / state

ಕಾಫಿನಾಡಲ್ಲಿ ಮಳೆಯ ಅಬ್ಬರಕ್ಕೆ ಧರೆಗುರುಳಿದ ಮರಗಳು

author img

By

Published : May 4, 2020, 6:40 PM IST

ಚಿಕ್ಕಮಗಳೂರು ಜಿಲ್ಲೆಯ ಎನ್​ಆರ್​ಪುರ ತಾಲೂಕಿನ ಬಾಳೆಹೊನ್ನೂರಿನ ಇಟ್ಟಿಗೆ ಶಿವಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮರ ಬಿದ್ದ ರಭಸಕ್ಕೆ ಶೆಡ್, ವಿದ್ಯುತ್ ಕಂಬಗಳು ಸಂಪೂರ್ಣ ಹಾನಿಯಾಗಿವೆ.

Chikmagalur
ಕಾಫಿನಾಡಿನಲ್ಲಿ ಮಳೆಯ ಅಬ್ಬರಕ್ಕೆ ಧರೆಗುರುಳಿದ ಮರಗಳು

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಮಳೆಯ ಅಬ್ಬರ ಇಂದು ಕೂಡ ಜೋರಾಗಿದ್ದು, ನಿರಂತರ ಮಳೆ ಗಾಳಿಗೆ ಬೃಹತ್ ಗಾತ್ರದ ಮರಗಳು ನೆಲಕ್ಕೆ ಉರಳಿ ಬೀಳುತ್ತಿವೆ.

ಚಿಕ್ಕಮಗಳೂರು ಜಿಲ್ಲೆಯ ಎನ್​ಆರ್​ಪುರ ತಾಲೂಕಿನ ಬಾಳೆಹೊನ್ನೂರಿನ ಇಟ್ಟಿಗೆ ಶಿವಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮರ ಬಿದ್ದ ರಭಸಕ್ಕೆ ಶೆಡ್, ವಿದ್ಯುತ್ ಕಂಬಗಳು ಸಂಪೂರ್ಣ ಹಾನಿಯಾಗಿವೆ.

ಕೂದಲೆಳೆ ಅಂತರದಲ್ಲಿ ಭಾರಿ ಅನಾಹುತ ತಪ್ಪಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಕೆಲ ದಿನಗಳ ಹಿಂದೆ ಈ ಮರ ತೆರವಿಗೆ ಸ್ಥಳೀಯರು ಅರ್ಜಿ ಸಲ್ಲಿಸಿದ್ದರು. ಇನ್ನೊಂದು ಕಡೆ ಕೊಪ್ಪ ತಾಲೂಕಿನಲ್ಲಿಯೂ ಮಳೆ ಮುಂದುವರೆದಿದ್ದು, ನಿರಂತರ ಮಳೆಗೆ ವಿದ್ಯುತ್ ಕಂಬಗಳು ಧರೆಗೆ ಉರುಳುತ್ತಿದ್ದು, ರಸ್ತೆ ಸಂಪರ್ಕ ಖಡಿತವಾಗಿದೆ.

ಮರದ ರೆಂಬೆಗಳಡಿ ಬೈಕ್​ಗಳು ಸಿಲುಕಿದ್ದು, ಕೆಲ ಕಡೆ ಮರ ಬಿದ್ದು, ಮನೆಗಳ ಛಾವಣಿ ಜಖಂ ಆಗಿದೆ. ಜಿಲ್ಲೆಯಲ್ಲಿ ಮೂವತ್ತಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದು, ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ವಿದ್ಯುತ್ ಸಂಪರ್ಕದಲ್ಲಿ ಕಡಿತ ಉಂಟಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.