ETV Bharat / state

ಹುತಾತ್ಮ‌ ದಿನಾಚರಣೆಯಲ್ಲಿ ಭಾಗಿಯಾಗಿ ಬರುವಾಗ ಅಪಘಾತ: ಇಬ್ಬರು ರೈತ ಮುಖಂಡರ ಸಾವು

author img

By

Published : Jul 22, 2021, 7:13 PM IST

ಧಾರವಾಡ ಜಿಲ್ಲೆಯ‌ ನವಲಗುಂದದಲ್ಲಿ ನಡೆದ ರೈತ ಹುತಾತ್ಮ‌ ದಿನಾಚರಣೆಯಲ್ಲಿ‌ ಪಾಲ್ಗೊಂಡು ಹಾಸನ ಜಿಲ್ಲೆಯ‌ ಬೇಲೂರಿಗೆ ಬರುತ್ತಿದ್ದಾಗ ರಸ್ತೆ ಅಪಘಾತ ಸಂಭವಿಸಿದ್ದು, ಇಬ್ಬರು ರೈತರು ಅಸುನೀಗಿದ್ದಾರೆ.

m-ramu
ರೈತ ಮುಖಂಡ ಎಂ. ರಾಮು

ಚಿಕ್ಕಮಗಳೂರು/ರಾಮನಗರ: ಭಾರಿ ಮಳೆ ಹಿನ್ನೆಲೆ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ರೈತ ಮುಖಂಡರು ಸಾವಿಗೀಡಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಜರುಗಿದೆ. ಇಲ್ಲಿನ ಹೊರವಲಯದ ರಾಮನಹಳ್ಳಿ ಬಳಿ ಈ ಘಟನೆ ನಡೆದಿದ್ದು, ರೈತ ಮುಖಂಡರಾದ ರಾಮಸ್ವಾಮಿ (70), ರಾಮ(55) ಸಾವಿಗೀಡಾದವರು.

ರಾಮಸ್ವಾಮಿ ರಾಜ್ಯ ರೈತ ಸಂಘದ ಉಪ್ಯಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹಾಗೆ ರಾಮ ಅವರು ರಾಜ್ಯ ರೈತ ಸಂಘ ಕಾರ್ಯದರ್ಶಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರು ಧಾರವಾಡ ಜಿಲ್ಲೆಯ‌ ನವಲಗುಂದದಲ್ಲಿ ನಡೆದ ರೈತ ಹುತಾತ್ಮ ದಿನಾಚರಣೆಯಲ್ಲಿ‌ ಪಾಲ್ಗೊಂಡು ಹಾಸನ ಜಿಲ್ಲೆಯ‌ ಬೇಲೂರಿಗೆ ಬರುತ್ತಿದ್ದರು. ರೈತರ ಪರ ಧ್ವನಿಯಾಗಿ ಹಲವಾರು ಹೋರಾಟಗಳಲ್ಲಿ ಭಾಗಿಯಾಗಿದ್ದವರು ಇಹಲೋಕ ತ್ಯಜಿಸಿದ್ದಾರೆ. ಚನ್ನಪಟ್ಟಣ ತಾಲೂಕಿನ ಮೊಗೇನಹಳ್ಳಿಯವರಾದ ರಾಮು, ಕಳೆದ ಮೂರು ದಶಕದಿಂದ ರೈತ ಚಳವಳಿಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು.

ಹುತಾತ್ಮ‌ ದಿನಾಚರಣೆಯಲ್ಲಿ ಭಾಗಿಯಾಗಿ ಬರುವಾಗ ಅಪಘಾತ
ಹುತಾತ್ಮ‌ ದಿನಾಚರಣೆಯಲ್ಲಿ ಭಾಗಿಯಾಗಿ ಬರುವಾಗ ಅಪಘಾತ

ರಾಮಸ್ವಾಮಿ ರಾಮನಗರದ ಮೂಲದವರಾಗಿದ್ದು, ರಾಮ, ಹಾಸನ ಜಿಲ್ಲೆಯ ಬೇಲೂರಿನವರಾಗಿದ್ದಾರೆ. ಕಾರಿನಲ್ಲಿದ್ದ ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ.

ಓದಿ: ನಿರ್ಗಮನಕ್ಕೂ ಮುನ್ನ ಬಿಎಸ್​ವೈ ನಗರ ಸಂಚಾರ.. ನಾಳೆ ಸಿಎಂ ಬೆಂಗಳೂರು ಸಿಟಿ ರೌಂಡ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.